ಬುಧವಾರ, ಸೆಪ್ಟೆಂಬರ್ 18, 2019
23 °C
ಸವಾಲಿನ ಮೊತ್ತ ಪೇರಿಸಿದ ಭಾರತ

ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌: ರವೀಂದ್ರ ಜಡೇಜ ಕೆಚ್ಚೆದೆಯ ಬ್ಯಾಟಿಂಗ್‌

Published:
Updated:
Prajavani

ನಾರ್ತ್‌ ಸೌಂಡ್‌, ಆ್ಯಂಟಿಗ: ರವೀಂದ್ರ ಜಡೇಜ (58; 112ಎ, 6ಬೌಂ, 1ಸಿ) ಶುಕ್ರವಾರ, ಸರ್‌ ವಿವಿಯನ್‌ ರಿಚರ್ಡ್ಸ್‌ ಮೈದಾನದಲ್ಲಿ ಕೆಚ್ಚೆದೆಯಿಂದ ಹೋರಾಡಿದರು.

ಅವರ ಅರ್ಧಶತಕದ ಬಲದಿಂದ ಭಾರತ ತಂಡವು ವೆಸ್ಟ್‌ ಇಂಡೀಸ್‌ ಎದುರಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ಸವಾಲಿನ ಮೊತ್ತ ಪೇರಿಸಿತು.

6 ವಿಕೆಟ್‌ಗೆ 203ರನ್‌ಗಳಿಂದ ಮೊದಲ ಇನಿಂಗ್ಸ್‌ನ ಆಟ ಮುಂದುವರಿಸಿದ ಕೊಹ್ಲಿ ಬಳಗ 96.4 ಓವರ್‌ಗಳಲ್ಲಿ 297ರನ್‌ ಪೇರಿಸಿತು. ಪ್ರಥಮ ಇನಿಂಗ್ಸ್‌ ಶುರು ಮಾಡಿರುವ ಜೇಸನ್‌ ಹೋಲ್ಡರ್‌ ಪಡೆ ಎರಡನೇ ದಿನದಾಟದ ಚಹಾ ವಿರಾಮದ ವೇಳೆಗೆ 28 ಓವರ್‌ಗಳಲ್ಲಿ 3 ವಿಕೆಟ್‌ಗೆ 82ರನ್ ಗಳಿಸಿತ್ತು.

ಮೊದಲ ದಿನ ಮೂರು ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದಿದ್ದ ಜಡೇಜ, ಎರಡನೇ ದಿನ ಕೆರಿಬಿಯನ್‌ ಬೌಲರ್‌ಗಳನ್ನು ಕಾಡಿದರು. ಅವರಿಗೆ ಇಶಾಂತ್‌ ಶರ್ಮಾ (19; 62ಎ, 1ಬೌಂ) ಉತ್ತಮ ಬೆಂಬಲ ನೀಡಿದರು. ಈ ಜೋಡಿ ಎಂಟನೇ ವಿಕೆಟ್‌ ಪಾಲುದಾರಿಕೆಯಲ್ಲಿ 60ರನ್‌ ಕಲೆಹಾಕಿತು.

ಇದನ್ನೂ ಓದಿ: ಭಾರತ–ವೆಸ್ಟ್‌ ಇಂಡೀಸ್‌: 5 ವಿಕೆಟ್‌ ಕಬಳಿಸಿ ಕೆರಿಬಿಯನ್ನರ ಕಟ್ಟಿ ಹಾಕಿದ ಇಶಾಂತ್‌

ಇಶಾಂತ್‌ ಔಟಾದ ಬೆನ್ನಲ್ಲೇ ಮೊಹಮ್ಮದ್‌ ಶಮಿ (0) ಕೂಡ ನಿರ್ಗಮಿಸಿದರು. ಬಳಿಕ ಜಡೇಜ ಏಕಾಂಗಿ ಹೋರಾಟ ನಡೆಸಿದರು. ಅವರು ಜಸ್‌ಪ್ರೀತ್‌ ಬೂಮ್ರಾ (ಔಟಾಗದೆ 4) ಜೊತೆ ಅಂತಿಮ ವಿಕೆಟ್‌ಗೆ 29ರನ್‌ ಸೇರಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು.

ಸಂಕ್ಷಿಪ್ತ ಸ್ಕೋರ್‌: ಭಾರತ; ಮೊದಲ ಇನಿಂಗ್ಸ್‌: 96.4 ಓವರ್‌ಗಳಲ್ಲಿ 297 (ಅಜಿಂಕ್ಯ ರಹಾನೆ 81, ಹನುಮ ವಿಹಾರಿ 32, ರಿಷಭ್‌ ಪಂತ್‌ 24, ರವೀಂದ್ರ ಜಡೇಜ 58, ಇಶಾಂತ್‌ ಶರ್ಮಾ 19; ಕೆಮರ್‌ ರೋಚ್‌ 66ಕ್ಕೆ4, ಶಾನನ್‌ ಗೇಬ್ರಿಯಲ್‌ 71ಕ್ಕೆ3, ಜೇಸನ್‌ ಹೋಲ್ಡರ್‌ 36ಕ್ಕೆ1, ರಾಸ್ಟನ್‌ ಚೇಸ್‌ 58ಕ್ಕೆ2).

ವೆಸ್ಟ್‌ ಇಂಡೀಸ್‌: ಮೊದಲ ಇನಿಂಗ್ಸ್‌; 28 ಓವರ್‌ಗಳಲ್ಲಿ 3 ವಿಕೆಟ್‌ಗೆ 82 (ಕ್ರೆಗ್‌ ಬ್ರಾಥ್‌ವೇಟ್ 14, ಜಾನ್‌ ಕ್ಯಾಂಪ್‌ಬೆಲ್‌ 23, ಶಮರ್ಹ ಬ್ರೂಕ್ಸ್‌ 11, ಡರೆನ್‌ ಬ್ರಾವೊ ಬ್ಯಾಟಿಂಗ್‌ 18, ರಾಸ್ಟನ್‌ ಚೇಸ್‌ ಬ್ಯಾಟಿಂಗ್‌ 10; ಇಶಾಂತ್ ಶರ್ಮಾ 32ಕ್ಕೆ1, ಮೊಹಮ್ಮದ್‌ ಶಮಿ 17ಕ್ಕೆ1, ರವೀಂದ್ರ ಜಡೇಜ 17ಕ್ಕೆ1). (ವಿವರ ಅಪೂರ್ಣ).

Post Comments (+)