ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಟಿ20 ವಿಶ್ವಕಪ್ ಮೆಲುಕು: ವಿಂಡೀಸ್ ಮುಡಿಗೆ ಎರಡನೇ ಕೀರಿಟ

Published 27 ಮೇ 2024, 19:30 IST
Last Updated 27 ಮೇ 2024, 19:30 IST
ಅಕ್ಷರ ಗಾತ್ರ

ಐಸಿಸಿ ಟಿ20 ಆರನೇ ವಿಶ್ವಕಪ್‌ ಟೂರ್ನಿ (2016) ಎಂದಾಕ್ಷಣ ನೆನಪಾಗುವುದು ವೆಸ್ಟ್‌ಇಂಡೀಸ್‌ ಆಟಗಾರ ಕಾರ್ಲೋಸ್‌ ಬ್ರಾಥ್‌ವೇಟ್. ಏ.3ರಂದು ಈಡನ್ ಗಾರ್ಡನ್‌ನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಕಾರ್ಲೋಸ್ ಬ್ರಾಥ್‌ವೇಟ್ ಅವರು ಸಿಡಿಸಿದ ನಾಲ್ಕು ಸಿಕ್ಸರ್‌ ಮರೆಯುವಂತಿಲ್ಲ.

ಕೊನೆಯ ಓವರ್‌ನಲ್ಲಿ ಗೆಲುವಿಗೆ 19 ರನ್ ಬೇಕಾಗಿತ್ತು. ಇಂಗ್ಲೆಂಡ್‌ ತಂಡದ ನಾಯಕ ಏಯಾನ್ ಮಾರ್ಗನ್‌ ಅವರು ಬೆನ್ ಸ್ಟೋಕ್ಸ್ ಕೈಗೆ ಬಾಲ್ ನೀಡಿದರು. ಬ್ರಾಥ್‌ವೇಟ್‌ ಸತತ ನಾಲ್ಕು ಸಿಕ್ಸರ್‌ ಸಿಡಿಸಿ ಇಂಗ್ಲೆಂಡ್ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿದರು. ಅಲ್ಲದೇ ಬೌಲಿಂಗ್‌ನಲ್ಲೂ 23ಕ್ಕೆ3 ವಿಕೆಟ್ ಪಡೆದು ಕೆರೀಬಿಯನ್ ತಂಡಕ್ಕೆ ಸ್ಮರಣಿಯ ಜಯ ತಂದುಕೊಟ್ಟರು. ಮರ್ಲಾನ್ ಸ್ಯಾಮುಯೆಲ್ಸ್‌ (ಅಜೇಯ 85 ರನ್) ಅವರೂ ಗೆಲುವಿಗೆ ಪ್ರಮುಖ ಕಾಣಿಕೆ ನೀಡಿದರು. 

* ವೆಸ್ಟ್‌ ಇಂಡೀಸ್ ಎರಡನೇ ಬಾರಿಗೆ ವಿಶ್ವಕಪ್‌ ಅನ್ನು ಮುಡಿಗೇರಿಸಿಕೊಂಡಿತು. ಇದೇ ವರ್ಷ ಐಸಿಸಿ 19 ವರ್ಷದೊಳಗಿನ ವಿಶ್ವಕಪ್ ಮತ್ತು ಮಹಿಳಾ ವಿಶ್ವ ಟಿ20 ಸಹ ಗೆದ್ದಿತ್ತು. 

* ಗುಂಪು 2 ರಲ್ಲಿ ಸ್ಥಾನ ಪಡೆದಿದ್ದ ಭಾರತ, ಮುಂಬೈನಲ್ಲಿ ನಡೆದ ಸೆಮಿಫೈನಲ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ದ ಸೋತು ಟೂರ್ನಿಯಿಂದ ಹೊರಬಿತ್ತು. ಭಾರತ 20 ಓವರ್‌ಗಳಲ್ಲಿ 2 ವಿಕೆಟ್‌ಗೆ 192 ರನ್ ಗಳಿಸಿದರೆ, ಇದಕ್ಕೆ ಉತ್ತರವಾಗಿ ವೆಸ್‌ಇಂಡೀಸ್‌ 19.4 ಓವರ್‌ಗಳಲ್ಲಿ 3 ವಿಕೆಟ್‌ಗೆ 196 ರನ್ ಗಳಿಸಿ ಜಯ ಸಾಧಿಸಿತು. ಟಿ20 ಪ್ಲೇ ಆಫ್‌ನಲ್ಲಿ ಇದು ಅತ್ಯಧಿಕ ರನ್ ಚೇಸ್ ಆಗಿತ್ತು. 

* ಆರನೇ ವಿಶ್ವಕಪ್: 2016 (ಮಾರ್ಚ್ 8 ರಿಂದ ಏಪ್ರಿಲ್ 3)

* ಆತಿಥ್ಯ: ಭಾರತ

* ರನ್ನರ್ಸ್ ಅಪ್: ಇಂಗ್ಲೆಂಡ್

* ಸ್ಪರ್ಧಿಸಿದ ತಂಡಗಳು: 16

* ಪಂದ್ಯಗಳು: 35

* ಸರಣಿ ಶ್ರೇಷ್ಠ: ವಿರಾಟ್ ಕೊಹ್ಲಿ (ಭಾರತ)

* ಶ್ರೇಷ್ಠ ಬ್ಯಾಟರ್:  ತಮೀಮ್ ಇಕ್ಬಾಲ್ (ಬಾಂಗ್ಲಾದೇಶ, 295 ರನ್)

* ಶ್ರೇಷ್ಠ ಬೌಲರ್: ಮೊಹಮ್ಮದ್ ನಬಿ (ಅಫ್ಗಾನಿಸ್ತಾನ 12 ವಿಕೆಟ್)

ಪ್ರಮುಖ ಅಂಶಗಳು

* ಸೂಪರ್ ಟೆನ್‌ ಹಂತ ನಾಗ್ಪುರದಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ (126 ರನ್) ವಿರುದ್ಧ ಭಾರತ 79 ರನ್‌ಗಳಿಗೆ ಅಲೌಟ್ ಆಯಿತು. ಈ ಪಂದ್ಯದಲ್ಲಿ ಭಾರತ ಸೋತಿತು.

* ಮಾರ್ಚ್‌ 25ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು ಭಾರತ ಒಂದು ರನ್‌ಗಳ ಗೆಲುವು ಸಾಧಿಸಿತು. 

* ಮಾರ್ಚ್‌ 27ರಂದು ನಾಗ್ಪುರದಲ್ಲಿ ನಡೆದ ಪಂದ್ಯದಲ್ಲಿ ಅಫ್ಗಾನಿಸ್ತಾನ ತಂಡವು ಪ್ರಬಲ ವೆಸ್ಟ್ ಇಂಡೀಸ್ ಅನ್ನು ಆರು ರನ್‌ಗಳಿಂದ ಸೋಲಿಸಿ ಅಚ್ಚರಿ ಮೂಡಿಸಿತು.

* ಟೂರ್ನಿಯಲ್ಲಿ ಕಳಪೆ ಆಟದಿಂದಾಗಿ ಪಾಕಿಸ್ತಾನ ತಂಡದ ನಾಯಕ ಶಾಹೀದ್ ಅಫ್ರಿಧಿ ಮತ್ತು ಕೋಚ್ ವಕಾರ್ ಯೂನಿಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಭಾರತ, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ ವಿರುದ್ಧ ಸೋತ ಪಾಕಿಸ್ತಾನ, ಬಾಂಗ್ಲಾದೇಶ ವಿರುದ್ದ ಮಾತ್ರ ಜಯಿಸಿತ್ತು.

* ಟಿ20 ಯಲ್ಲಿ ಒಂದೇ ಒಂದು ಅರ್ಧಶತಕವಿಲ್ಲದೆ 1000 ರನ್ ಗಳಿಸಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಮಹೇಂದ್ರಸಿಂಗ್ ಧೋನಿ ಪಾತ್ರರಾದರು.

* ವಾಂಖೆಡೆ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ವೆಸ್ಟ್‌ ಇಂಡೀಸ್‌ನ ಕ್ರಿಸ್ ಗೇಲ್ 11 ಸಿಕ್ಸರ್ ಸಿಡಿಸಿದರು. ಇದು ಟಿ20  ಇನಿಂಗ್ಸ್‌ವೊಂದರಲ್ಲಿ ದಾಖಲಾದ ಅತಿ ಹೆಚ್ಚು ಸಿಕ್ಸರ್‌.  

* ಸೆಮಿಫೈನಲ್‌ನಲ್ಲಿ ಭಾರತ ನಿರ್ಗಮಿಸುತ್ತಿದ್ದಂತೆ ತಂಡದ ನಿರ್ದೇಶಕ ರವಿ ಶಾಸ್ತ್ರಿ ಅವರ ಒಪ್ಪಂದವು ಕೊನೆಗೊಂಡಿತು.

ಆಧಾರ: ಕ್ರೀಡಾ ವೆಬ್‌ಸೈಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT