ಸೋಮವಾರ, ಜನವರಿ 27, 2020
27 °C
ಎಲ್ಲಿದ್ದಾರೆ ಕೊಹ್ಲಿ?: ಕ್ರಿಕೆಟ್ ಮಂಡಳಿ ಕಾಲೆಳೆದ ನೆಟ್ಟಿಗರ ಪ್ರಶ್ನೆ

ನಾಯಕನೇ ಇಲ್ಲದ ಭಾರತ ತಂಡ: ಚಿತ್ರ ಪ್ರಕಟಿಸಿ ಟ್ರೋಲ್ ಆದ ಬಿಸಿಸಿಐ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಮಂಡಳಿಯ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದ ಸಂದರ್ಭ ತೆಗೆದ ಚಿತ್ರವೊಂದನ್ನು ಬಿಸಿಸಿಐ ತನ್ನ ಟ್ವಿಟರ್‌ ಪುಟದಲ್ಲಿ ಪ್ರಕಟಿಸಿದೆ. ಆದರೆ ಅದರಲ್ಲಿ ನಾಯಕ ವಿರಾಟ್‌ ಕೊಹ್ಲಿ ಹಾಗೂ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಇಲ್ಲದಿರುವುದನ್ನು ನೆಟ್ಟಿಗರು ಟ್ರೋಲ್‌ ಮಾಡಿದ್ದಾರೆ.

ಮುಂಬೈನಲ್ಲಿ ಭಾನುವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ನಾಯಕ ವಿರಾಟ್‌, ಕ್ರಿಕೆಟಿಗರು ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು. ಆದರೆ, ಬಿಸಿಸಿಐ ತನ್ನ ಅಧಿಕೃತ ಖಾತೆಯಲ್ಲಿ ‘ಟೀಂ ಇಂಡಿಯಾ’ ಎಂದು ಉಲ್ಲೇಖಿಸಿ ಪ್ರಕಟಿಸಿರುವ ಚಿತ್ರದಲ್ಲಿ ಕೊಹ್ಲಿ ಹಾಗೂ ಪಂತ್‌ ಇಲ್ಲ.

ಇದನ್ನೂ ಓದಿ: ಬೂಮ್ರಾಗೆ ‘ಉಮ್ರಿಗರ್‌’ ಗೌರವ

ಇದನ್ನು ಗುರುತಿಸಿರುವ ನೆಟ್ಟಿಗರು ಬಿಸಿಸಿಐನತ್ತ ಟೋಲ್‌ ಮಳೆ ಹರಿಸಿದ್ದಾರೆ. ‘ವಿರಾಟ್‌ ಕೊಹ್ಲಿ ಎಲ್ಲಿದ್ದಾರೆ?’, ‘ವಿರಾಟ್‌ ಕೊಹ್ಲಿ ತಂಡದ ಭಾಗವಾಗವಲ್ಲವೇ? ಅಥವಾ ನಾಯನೆಂಬ ಕಾರಣಕ್ಕೆ ವಿಶೇಷ ಮನ್ನಣೆ ನೀಡಲಾಗಿದೆಯೇ?’ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದ್ದಾರೆ.

ಮತ್ತೆ ಕೆಲವರು ಕೊಹ್ಲಿ ಚಿತ್ರವನ್ನು ಎಡಿಟ್‌ ಮಾಡಿ ‘ಕೊಹ್ಲಿ ಇಲ್ಲಿದ್ದಾರೆ’ ಎಂದು ಬರೆದು ಕಿಚಾಯಿಸಿದ್ದಾರೆ.

ಮತ್ತೊಬ್ಬ, ಚಿತ್ರದಲ್ಲಿ ವಿರಾಟ್‌ ಕೊಹ್ಲಿ ಎಲ್ಲಿದ್ದಾರೆ ಎಂದು ಯೋಚಿಸುತ್ತಿರುವರೇ, ಈ ಚಿತ್ರ ತೆಗೆದಿದ್ದೇ ಕೊಹ್ಲಿ. ಇದು ದೊಡ್ಡ ತ್ಯಾಗ. ನನ್ನಿಷ್ಟದ ನಾಯಕ.. ನನ್ನ ಪ್ರೀತಿಯ ಕೊಹ್ಲಿ.. ಎಂದು ಬರೆದುಕೊಂಡಿದ್ದಾರೆ.

ಚಿತ್ರದಲ್ಲಿರುವ ಎಲ್ಲರಂತೆ ಬ್ಲೇಸರ್‌ ಧರಿಸದೆ ನಿಂತಿರುವ ಶಿವಂ ದುಬೆ ಅವರನ್ನು, ‘ಕಾರ್ಯಕ್ರಮದ ನಂತರ ದುಬೆ ರೋಡೀಸ್ ಮತ್ತು ಸ್ಪ್ಲಿಟ್ಸ್‌ವಿಲ್ಲಾ ಆಡಿಷನ್‌ಗೆ ಹೋಗಲು ಸಿದ್ಧವಾಗಿದ್ದಾರೆ’ ಎಂದು ಕಾಲೆಳೆದಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು