ಭಾನುವಾರ, ಜನವರಿ 24, 2021
17 °C
ನ್ಯೂಜಿಲೆಂಡ್‌ ವಿರುದ್ಧದ ಸರಣಿ: ಆಕ್ಲೆಂಡ್‌ಗೆ ಪ್ರಯಾಣ

ಕೋವಿಡ್‌ ಟೆಸ್ಟ್‌ ಪಾಸಾದ ವಿಂಡೀಸ್‌ ಆಟಗಾರರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕ್ರೈಸ್ಟ್‌ಚರ್ಚ್‌: ಸೀಮಿತ ಓವರ್‌ಗಳ ಮಾದರಿಯ ನಾಯಕ ಕೀರನ್‌ ಪೊಲಾರ್ಡ್‌ ಸೇರಿದಂತೆ ವೆಸ್ಟ್ ಇಂಡೀಸ್‌ ಕ್ರಿಕೆಟ್‌ ತಂಡವು ಬುಧವಾರ ಮೂರನೇ ಹಾಗೂ ಅಂತಿಮ ಕೋವಿಡ್‌–19 ಟೆಸ್ಟ್‌ಅನ್ನು ಪೂರ್ಣಗೊಳಿಸಿತು. ಶುಕ್ರವಾರ ಆತಿಥೇಯ ನ್ಯೂಜಿಲೆಂಡ್‌ ಎದುರು ನಡೆಯುವ ಮೊದಲ ಟ್ವೆಂಟಿ–20 ಪಂದ್ಯದಲ್ಲಿ ಆಡಲು ಆಕ್ಲೆಂಡ್‌ಗೆ ಪ್ರಯಾಣ ಬೆಳೆಸಿತು.

ಯುಎಇಯಲ್ಲಿ ನಡೆದಿದ್ದ ಇಂಡಿಯನ್‌ ಪ್ರೀಮಿಯರ್ ಲೀಗ್‌ನಲ್ಲಿ ಆಡಿದ್ದ ಕೆರಿಬಿಯನ್‌ ನಾಡಿನ ಬಹುತೇಕ ಆಟಗಾರರು ನವೆಂಬರ್ 14ರಂದು ನ್ಯೂಜಿಲೆಂಡ್‌ಗೆ ತೆರಳಿದ್ದರು.

‘ಪ್ರತ್ಯೇಕವಾಸದಲ್ಲಿದ್ದ ನಮ್ಮ ತಂಡದ ಎಲ್ಲ ಆಟಗಾರರನ್ನು ಮೂರನೇ ಬಾರಿ ಕೋವಿಡ್‌–19 ಪರೀಕ್ಷೆಗೆ ಒಳಪಡಿಸಲಾಗಿದ್ದು, ಫಲಿತಾಂಶ ನೆಗೆಟಿವ್ ಬಂದಿದೆ. ಸದ್ಯ ಅವರು ಮೊದಲ ಟ್ವೆಂಟಿ–20 ಪಂದ್ಯದ ಸಿದ್ಧತೆಗಾಗಿ ಕ್ರೈಸ್ಟ್‌ಚರ್ಚ್‌ನಿಂದ ಆಕ್ಲೆಂಡ್‌ಗೆ ತೆರಳಿದ್ದಾರೆ‘ ಎಂದು ಕ್ರಿಕೆಟ್‌ ವೆಸ್ಟ್‌ ಇಂಡೀಸ್‌ (ಸಿಡಬ್ಲ್ಯುಐ) ಹೇಳಿದೆ.

ಆಕ್ಲೆಂಡ್‌ನಲ್ಲಿ ನಡೆಯುವ ಮೊದಲ ಪಂದ್ಯದ ಬಳಿಕ, ನವೆಂಬರ್‌ 29 ಹಾಗೂ 30ರಂದು ಮೌಂಟ್‌ ಮಾಂಗನೂಯಿಯಲ್ಲಿ ಎರಡು ಪಂದ್ಯಗಳು ನಡೆಯಲಿವೆ. ಟಿ–20 ಸರಣಿಯ ನಂತರ ಎರಡು ಟೆಸ್ಟ್ ಪಂದ್ಯಗಳಲ್ಲಿ (ಡಿ.3–7, ಹ್ಯಾಮಿಲ್ಟನ್‌ ಹಾಗೂ ಡಿ.11–15, ಹ್ಯಾಮಿಲ್ಟನ್‌) ಉಭಯ ತಂಡಗಳು ಸೆಣಸಲಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು