ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುನಿಲ್ ನಾರಾಯಣ ವಿಂಡೀಸ್ ತಂಡಕ್ಕೆ ಮರಳಲಿ: ಪೊವೆಲ್ ಇಂಗಿತ

Published 17 ಏಪ್ರಿಲ್ 2024, 13:35 IST
Last Updated 17 ಏಪ್ರಿಲ್ 2024, 13:35 IST
ಅಕ್ಷರ ಗಾತ್ರ

ಕೋಲ್ಕತ್ತ: ಅಂತರರಾಷ್ಟ್ರೀಯ ಕ್ರಿಕೆಟ್‌ ನಿವೃತ್ತಿಯನ್ನು ಹಿಂಪಡೆದು ತಮ್ಮ ತಂಡ ಸೇರಿಕೊಳ್ಳುವಂತೆ ಆಲ್‌ರೌಂಡರ್ ಸುನಿಲ್ ನಾರಾಯಣ ಅವರ ಮನವೊಲಿಸುವುದಾಗಿ ವೆಸ್ಟ್ ಇಂಡೀಸ್ ತಂಡದ ನಾಯಕ ರೋವ್ಮನ್ ಪೊವೆಲ್ ಹೇಳಿದ್ದಾರೆ. 

ಕೋಲ್ಕತ್ತ ನೈಟ್ ರೈಡರ್ಸ್ ತಂಡದಲ್ಲಿ ಮಿಂಚುತ್ತಿರುವ ಸುನಿಲ್ ಮಂಗಳವಾರ ರಾಜಸ್ಥಾನ ರಾಯಲ್ಸ್ ಎದುರು ಅಮೋಘ ಶತಕ ದಾಖಲಿಸಿದ್ದರು. ಆದರೆ ಜೋಸ್ ಬಟ್ಲರ್ ಅವರ ಶತಕದ ಬಲದಿಂದ ರಾಯಲ್ಸ್‌ ಜಯಸಾಧಿಸಿತ್ತು.  ರಾಯಲ್ಸ್ ತಂಡದಲ್ಲಿ ಪೊವೆಲ್ ಕೂಡ ಆಡುತ್ತಾರೆ.

‘ಕಳೆದ 12 ತಿಂಗಳುಗಳಿಂದ ನಾವು ಸುನಿಲ್ ಕಿವಿಯಲ್ಲಿ ಈ ಬಗ್ಗೆ ಪಿಸುಗುಟ್ಟುತ್ತಲೇ ಇದ್ದೇನೆ. ಪೊಲಾರ್ಡ್ (ಕೀರನ್), ಬ್ರಾವೊ (ಡ್ವೇನ್), ಪೂರನ್ (ನಿಕೊಲಸ್) ಅವರ ಮೂಲಕವೂ ಸುನಿಲ್ ಮನವೊಲಿಸುವ ಪ್ರಯತ್ನ ಮಾಡಿದೆ. ಸುನಿಲ್ ಎಲ್ಲರನ್ನೂ ‘ಬ್ಲಾಕ್’ ಮಾಡಿದ್ದಾರೆ’ ಎಂದು ಪೊವೆಲ್ ಸುದ್ದಿಗಾರರಿಗೆ ಹೇಳಿದರು. 

‘ವಿಂಡೀಸ್ ಆಟಗಾರರು ಐಪಿಎಲ್‌ನಲ್ಲಿ ಉತ್ತಮವಾಗಿ ಆಡುವಾಗ ನನಗೆ ಹೆಮ್ಮೆ ಮತ್ತು ಸಂತೋಷವಾಗುತ್ತದೆ. ಈ ಪಂದ್ಯದಲ್ಲಿ (ಮಂಗಳವಾರ) ಅವರ ಬ್ಯಾಟಿಂಗ್ ಅತ್ಯಂತ ಶ್ರೇಷ್ಠವಾಗಿತ್ತು. ಕೆಕೆಆರ್ ತಂಡಕ್ಕೆ ಅವರು ಕೊಡುತ್ತಿರುವ ಕಾಣಿಕೆ ಬಹುದೊಡ್ಡದು. ಅವರು ಮುಂದೆಯೂ ಇದೇ ರೀತಿ ಅಮೂಲ್ಯ ಕಾಣಿಕೆ ನೀಡುತ್ತಾರೆಂಬ ಭರವಸೆ ಇದೆ’ ಎಂದರು. 

35 ವರ್ಷದ ಸುನಿಲ್ ಅವರು ವಿಂಡೀಸ್ ತಂಡವನ್ನು 51 ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ತಂಡದ ಆಯ್ಕೆಗೂ ಮುನ್ನ ಅವರನ್ನು ತಂಡಕ್ಕೆ ಸೆಳೆಯುವ ಇಂಗಿತವನ್ನೂ ಪೊವೆಲ್ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT