ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs WI 3rd ODI | ಶಿಖರ್, ಶುಭಮನ್ ಅರ್ಧಶತಕ

Last Updated 27 ಜುಲೈ 2022, 21:20 IST
ಅಕ್ಷರ ಗಾತ್ರ

ಪೋರ್ಟ್‌ ಆಫ್ ಸ್ಪೇನ್: ವೆಸ್ಟ್ ಇಂಡೀಸ್ ಎದುರಿನ ಏಕದಿನ ಸರಣಿ ಕೈವಶ ಮಾಡಿಕೊಂಡಿರುವ ಹುಮ್ಮಸ್ಸಿನಲ್ಲಿರುವ ಭಾರತ ತಂಡದ ನಾಯಕ ಶಿಖರ್ ಧವನ್ ಮತ್ತು ಯುವ ಬ್ಯಾಟರ್ ಶುಭಮನ್ ಗಿಲ್ ಶತಕದ ಜೊತೆಯಾಟವಾಡಿ ಉತ್ತಮ ಅಡಿಪಾಯ ಹಾಕಿದರು.

ಬುಧವಾರ ಇಲ್ಲಿ ನಡೆದ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ತಂಡ ಮಳೆಯಿಂದ ಆಟ ಸ್ಥಗಿತಗೊಂಡಾಗ 36 ಓವರ್‌ಗಳಲ್ಲಿ 3 ವಿಕೆಟ್‌ಗೆ 225 ರನ್‌ ಗಳಿಸಿತ್ತು. 24ನೇ ಓವರ್ ಆಗಿದ್ದಾಗ ಮಳೆ ಸುರಿದ ಕಾರಣ ಪಂದ್ಯ ಮೊಟಕುಗೊಂಡಿತ್ತು. ಎರಡೂವರೆ ಗಂಟೆಯ ಆಟ ನಷ್ಟವಾದ ಕಾರಣ ಓವರ್‌ಗಳ ಸಂಖ್ಯೆಯನ್ನು 40ಕ್ಕೆ ಇಳಿಸಲಾಗಿತ್ತು.

ಟಾಸ್ ಗೆದ್ದ ಭಾರತ ತಂಡ ಉತ್ತಮ ಆರಂಭ ಕಂಡಿತು. ನಾಯಕ ಶಿಖರ್ (58; 74ಎ, 4X7) ಮತ್ತು ಶುಭಮನ್ (ಬ್ಯಾಟಿಂಗ್ 98; 98ಎ, 7X3, 6X2) ಮೊದಲ ವಿಕೆಟ್ ಜೊತೆಯಾಟದಲ್ಲಿ 113 ರನ್‌ ಸೇರಿಸಿದರು.

ವಿಂಡೀಸ್ ತಂಡದ ಅನುಭವಿ ಆಲ್‌ರೌಂಡರ್ ಜೇಸನ್ ಹೋಲ್ಡರ್, ಜೈಡನ್ ಸೀಲ್ಸ್‌, ಕೀಮೊ ಪಾಲ್ ಅವರ ಎಸೆತಗಳನ್ನು ಶಿಖರ್ ಮತ್ತು ಗಿಲ್ ಜೋಡಿಯು ಲೀಲಾಜಾಲವಾಗಿ ಆಡಿತು.

ಸ್ವಿಂಗ್ ಮತ್ತು ಕಟರ್‌ಗಳಿಗೆ ಬೌಂಡರಿಗೆರೆ ತೋರಿಸಿದರು. ಎಡಗೈ ಬ್ಯಾಟರ್ ಶಿಖರ್ ಮತ್ತು ಪಂಜಾಬಿ ಹುಡುಗ ಗಿಲ್ ಅವರಿಬ್ಬರೂ ಅರ್ಧಶತಕಗಳನ್ನು ದಾಖಲಿಸಿದರು. 22 ಓವರ್‌ಗಳ ಆಟದಲ್ಲಿ ಅವರಿಬ್ಬರ ಏಕಾಗ್ರತೆಯನ್ನು ಭಂಗ ಮಾಡಲು ಬೌಲರ್‌ಗಳಿಗೆ ಸಾಧ್ಯವಾಗಲಿಲ್ಲ.

23ನೇ ಓವರ್‌ನಲ್ಲಿ ಯುವಪ್ರತಿಭೆ ಹೇಡನ್ ವಾಲ್ಶ್ ಈ ಜೊತೆಯಾಟವನ್ನು ಮುರಿಯುವಲ್ಲಿ ಯಶಸ್ವಿಯಾದರು. ಅವರ ಎಸೆತವನ್ನು ಆಡುವ ಭರದಲ್ಲಿ ಶಿಖರ್ ಎಡವಿದರು.

ಬಳಿಕ ಬಂದ ಶ್ರೇಯಸ್‌ ಅಯ್ಯರ್‌ (44 ರನ್‌, 34 ಎ.) ಅವರು ಗಿಲ್‌ಗೆ ಉತ್ತಮ ಸಾಥ್‌ ನೀಡಿದರು. ಗಿಲ್‌ ಶತಕಕ್ಕೆ ಎರಡು ರನ್‌ಗಳು ಬೇಕಿದ್ದಾಗ ಮಳೆಯಿಂದ ಆಟ ನಿಂತಿತು.

ಸಂಕ್ಷಿಪ್ತ ಸ್ಕೋರು: ಭಾರತ: 36 ಓವರ್‌ಗಳಲ್ಲಿ 3 ವಿಕೆಟ್‌ಗೆ 225 (ಶಿಖರ್ ಧವನ್ 58, ಶುಭಮನ್ ಗಿಲ್ ಔಟಾಗದೆ 98, ಶ್ರೇಯಸ್ ಅಯ್ಯರ್ 44, ಸೂರ್ಯಕುಮಾರ್‌ ಯಾದವ್‌ 8, ಸಂಜು ಸ್ಯಾಮ್ಸನ್‌ ಔಟಾಗದೆ 6, ಹೇಡನ್‌ ವಾಲ್ಶ್‌ 57ಕ್ಕೆ 2) ವಿವರ ಅಪೂರ್ಣ

ತಂಡಗಳು: ಭಾರತ: ಶಿಖರ್ ಧವನ್ (ನಾಯಕ), ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್), ದೀಪಕ್ ಹೂಡಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಯಜುವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ,

ವೆಸ್ಟ್ ಇಂಡೀಸ್: ನಿಕೊಲಸ್ ಪೂರನ್ (ನಾಯಕ), ಶಾಯ್ ಹೋಪ್ (ಉಪನಾಯಕ), ಶಾಮ್ರಾ ಬ್ರೂಕ್ಸ್, ಕೀಸಿ ಕಾರ್ಟಿ, ಬ್ರೆಂಡನ್ ಕಿಂಗ್, ಕೈಲ್ ಮೇಯರ್ಸ್, ಜೇಸನ್ ಹೋಲ್ಡರ್, ಕೀಮೊ ಪಾಲ್, ಅಕೇಲ್ ಹುಸೇನ್, ಹೇಡನ್ ವಾಲ್ಶ್, ಜೇಡನ್ ಸೀಲ್ಸ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT