ಮಂಗಳವಾರ, ನವೆಂಬರ್ 24, 2020
20 °C
‘ಲೀಲಾವತಿ ಪ್ಯಾಲೇಸ್‌ ಕಪ್‌’ ಅಂತರ ಕ್ಯಾಂಪ್‌ಗಳ ಕ್ರಿಕೆಟ್ ಟೂರ್ನಿ

ಚಾಂಪಿಯನ್ಸ್‌ ನೆಟ್‌ ತಂಡ ಜಯಭೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಚುರುಕಿನ ಬೌಲಿಂಗ್‌ ಮಾಡಿದ ಚಾಂಪಿಯನ್ಸ್‌ ನೆಟ್‌ ತಂಡ 14 ವರ್ಷದ ಒಳಗಿನವರಿಗೆ ನಡೆಯುತ್ತಿರುವ ‘ಲೀಲಾವತಿ ಪ್ಯಾಲೇಸ್‌ ಕಪ್‌’ ಅಂತರ ಕ್ಯಾಂಪ್‌ಗಳ ಕ್ರಿಕೆಟ್ ಟೂರ್ನಿಯ ಮಂಗಳವಾರದ ಪಂದ್ಯದಲ್ಲಿ ಎಂಟು ರನ್‌ಗಳ ಗೆಲುವು ಸಾಧಿಸಿತು.

ಮೊದಲು ಬ್ಯಾಟ್‌ ಮಾಡಿದ ಚಾಂಪಿಯನ್ಸ್ ತಂಡ 30 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 119 ರನ್‌ ಗಳಿಸಿತು. ಎದುರಾಳಿ ಹುಬ್ಬಳ್ಳಿ ಕೋಲ್ಟ್ಸ್‌ ತಂಡ 29.2 ಓವರ್‌ಗಳಲ್ಲಿ 111 ರನ್‌ ಗಳಿಸಿ ಜಯದ ಹೊಸ್ತಿಲಿನಲ್ಲಿ ಎಡವಿತು. ಹೆತ್‌ ಪಟೇಲ (6–0–16–4) ಮತ್ತು ವಿನೀತ್‌ ಬಸವ (5–0–15–2) ತಂಡಕ್ಕೆ ಜಯದ ಕಾಣಿಕೆ ನೀಡಿದರು.

ದಿನದ ಇನ್ನೊಂದು ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಬಿಡಿಕೆ ಕೋಲ್ಟ್ಸ್‌ ತಂಡ ವಿಕೆಟ್‌ ನಷ್ಟವಿಲ್ಲದೆ 286 ರನ್‌ ಗಳಿಸಿತು. ಆರಂಭಿಕ ಜೋಡಿ ಮೊಹಮ್ಮದ್ ಶಮಿ (126, 87ಎಸೆತ, 1 ಸಿಕ್ಸರ್‌, 18 ಬೌಂಡರಿ) ಮತ್ತು ರೋಹನ್ ಯರೇಸಿಮಿ (123, 100 ಎಸೆತ, 13 ಬೌಂಡರಿ) ಅವರ ಅಮೋಘ ಜೊತೆಯಾಟ ಇದಕ್ಕೆ ಕಾರಣವಾಯಿತು. ಸವಾಲಿನ ಮೊತ್ತದ ಎದುರು ಪರದಾಡಿದ ದುರ್ಗಾ ಸ್ಪೋರ್ಟ್ಸ್‌ ಅಕಾಡೆಮಿ 26 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ಶತಕ ಗಳಿಸಿದ ಆಟಗಾರರು ಜಂಟಿಯಾಗಿ ಪಂದ್ಯ ಶ್ರೇಷ್ಠ ಗೌರವ ಪಡೆದರು.

ಸೋಮವಾರ ನಡೆದ ಪಂದ್ಯಗಳಲ್ಲಿ ಮೊದಲು ಬ್ಯಾಟ್‌ ಮಾಡಿದ ಹುಬ್ಬಳ್ಳಿ ಕ್ರಿಕೆಟ್‌ ಅಕಾಡೆಮಿ 30 ಓವರ್‌ಗಳಲ್ಲಿ 5 ವಿಕೆಟ್‌ಗೆ 122 ರನ್‌ ಗಳಿಸಿತು. ಎದುರಾಳಿ ತೇಜಲ್‌ ಶಿರಗುಪ್ಪಿ ಕ್ರಿಕೆಟ್‌ ಅಕಾಡೆಮಿ 8.5 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ ಗುರಿ ತಲುಪಿತು. ಯಶಸ್‌ ಕುರುಬರ ಕೇವಲ 42 ಎಸೆತಗಳಲ್ಲಿ ಅಜೇಯ 103 ಗಳಿಸಿದರು. 14 ಬೌಂಡರಿ ಮತ್ತು ಆರು ಸಿಕ್ಸರ್‌ಗಳನ್ನು ಬಾರಿಸಿದರು.

ಇನ್ನೊಂದು ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಫಸ್ಟ್‌ ಕ್ರಿಕೆಟ್‌ ಅಕಾಡೆಮಿ 30 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 170 ರನ್‌ ಗಳಿಸಿತ್ತು. ಶೈಬಾಜ್‌ ಜಮಖಂಡಿ (ಔಟಾಗದೆ 104), ಡಿ.ಎಸ್‌. ರಿತೇಶ (ಔಟಾಗದೆ 32) ರನ್ ಗಳಿಸಿದರು. ಎದುರಾಳಿ ತಂಡ ವಸಂತ ಮುರ್ಡೇಶ್ವರ ಕ್ರಿಕೆಟ್ ಅಕಾಡೆಮಿ 28.4 ಓವರ್‌ಗಳಲ್ಲಿ 140 ರನ್ ಗಳಿಸಿ ಆಲೌಟ್‌ ಆಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು