ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್‌ ಸವಾಲಿಗೆ ಸಿದ್ಧ: ಲವ್ಲಿನಾ ಬೊರ್ಗೊಹೈನ್ 

Published 23 ಏಪ್ರಿಲ್ 2024, 14:44 IST
Last Updated 23 ಏಪ್ರಿಲ್ 2024, 14:44 IST
ಅಕ್ಷರ ಗಾತ್ರ

ನವದೆಹಲಿ: ಟೋಕಿಯೊ ಒಲಿಂಪಿಕ್ ಕೂಟದಲ್ಲಿ ಕಂಚಿನ ಪದಕ ಜಯಿಸಿದ್ದ ಭಾರತದ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಇದೀಗ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ  75 ಕೆಜಿ ವಿಭಾಗದಲ್ಲಿ ಕಣಕ್ಕಿಳಿಯಲು ಸಿದ್ಧರಾಗಿದ್ದಾರೆ. ಅದರಲ್ಲಿಯೂ ಪದಕ ಜಯಿಸುವ ವಿಶ್ವಾಸದಲ್ಲಿದ್ದಾರೆ. 

‘ತೂಕದ ವಿಭಾಗದಲ್ಲಿ ಬದಲಾವಣೆ ಮಾಡಿಕೊಂಡ ನಂತರ ಉತ್ತಮ ಫಲಿತಾಂಶಗಳನ್ನು ಪಡೆದಿದ್ದೇನೆ. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಒಲಿಂಪಿಕ್ ಅರ್ಹತಾ ವಿಭಾಗದಲ್ಲಿ ಗೆದ್ದಿರುವುದು ದೊಡ್ಡ ಸಾಧನೆ. ಅದರಿಂದಲೇ  ಆತ್ಮವಿಶ್ವಾಸ ಹೆಚ್ಚಿದೆ. ಮೊದಲಿನ ತೂಕದ ವಿಭಾಗದಲ್ಲಿ (69 ಕೆ.ಜಿ) ಇದ್ದಾಗ ದೇಹತೂಕವನ್ನು ನಿಯಂತ್ರಿಸಬೇಕಿತ್ತು. ಈಗ ಅಂತಹ ಒತ್ತಡವಿಲ್ಲ. ಸಾಮರ್ಥ್ಯವೂ ಹೆಚ್ಚಾಗಿದೆ’ ಎಂದು ಪಿಟಿಐ ಸಂದರ್ಶನದಲ್ಲಿ ಹೇಳಿದ್ಧಾರೆ. 

ಪ್ಯಾರಿಸ್ ಒಲಿಂಪಿಕ್ ಕೂಟದಲ್ಲಿ 69 ಕೆಜಿ ವಿಭಾಗವನ್ನು ಕೈಬಿಡಲಾಗಿತ್ತು. ಆದ್ದರಿಂದ 70 ರಿಂದ 75 ಕೆಜಿ ವಿಭಾಗದಲ್ಲಿ ಲವ್ಲಿನಾ ಅವರು ಸ್ಪರ್ಧಿಸುತ್ತಿದ್ದಾರೆ.  ಅವರು 2022ರಲ್ಲಿ ಏಷ್ಯನ್ ಚಾಂಪಿಯನ್‌ಷಿಪ್‌ ಹಾಗೂ 2023ರಲ್ಲಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ  ಚಿನ್ನ ಹಾಗೂ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. 

‘ಈಗ ನಾನು ಸ್ಪರ್ಧಿಸುತ್ತಿರುವ ವಿಭಾಗದಲ್ಲಿ ಬರುವ ಎಲ್ಲ ಬಾಕ್ಸರ್‌ಗಳು ಬಲಶಾಲಿಗಳಾಗಿದ್ದಾರೆ. ಸವಾಲು ಕಠಿಣವಾಗಿದೆ. ಆದರೆ ನನ್ನ ಸಿದ್ಧತೆಯೂ ಚೆನ್ನಾಗಿದೆ. ತೂಕ ನಿಯಂತ್ರಣದ ಒತ್ತಡವಿಲ್ಲದ ಕಾರಣ ಹೆಚ್ಚು ಪೌಷ್ಟಿಕ ಆಹಾರ ಸೇವಿಸುತ್ತೇನೆ. ಸ್ಟ್ರೆಂಥ್ ಮತ್ತು ಕಂಡಿಷನಿಂಗ್ ಅಭ್ಯಾಸ ಹೆಚ್ಚು ಮಾಡುತ್ತೇನೆ. ಇದರಿಂದಾಗಿ ನನ್ನ ಮಾಂಸಖಂಡ ಮತ್ತು ಸ್ನಾಯುಗಳ ದಾರ್ಢ್ಯತೆ ಹೆಚ್ಚಿಸಿಕೊಳ್ಳಲು ಸಾಧ್ಯವಾಗಿದೆ’ ಎಂದು ಅಸ್ಸಾಂ ಬಾಕ್ಸರ್ ಲವ್ಲಿನಾ ಹೇಳಿದರು. 

‘ವಿಭಾಗಕ್ಕೆ ತಕ್ಕಂತೆ ನನ್ನ ಕೌಶಲಗಳಲ್ಲಿ ಒಂದಿಷ್ಟು ಬದಲಾವಣೆಗಳನ್ನು ಮಾಡಿಕೊಂಡಿರುವುದು ನಿಜ. ಇದರಿಂದ ನನಗೆ ಹೆಚ್ಚು ಅನುಕೂಲವಾಗಿದೆ. ಸಾಮರ್ಥ್ಯವೂ ವೃದ್ಧಿಸಿದೆ. ರಿಂಗ್‌ನಲ್ಲಿ ಹೆಚ್ಚು ಸಮಚಿತ್ತ ಮತ್ತು ಶಾಂತಚಿತ್ತದಿಂದ ಇರುವುದನ್ನು ರೂಢಿಸಿಕೊಂಡಿದ್ದೇನೆ’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT