ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಬ್ಲ್ಯುಪಿಎಲ್ | ಆರ್‌ಸಿಬಿ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ಗೆ ರೋಚಕ ಜಯ

Published 10 ಮಾರ್ಚ್ 2024, 18:07 IST
Last Updated 10 ಮಾರ್ಚ್ 2024, 18:07 IST
ಅಕ್ಷರ ಗಾತ್ರ

ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ತಂಡವು ಭಾನುವಾರ ಇಲ್ಲಿ ನಡೆದ ಮಹಿಳ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 1 ರನ್‌ನಿಂದ ರೋಚಕ ಜಯ ಸಾಧಿಸಿತು. ಇದರೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿ ಪ್ಲೇಆಫ್‌ಗೆ ಲಗ್ಗೆ ಇಟ್ಟಿತು.

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 181 ರನ್ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡಕ್ಕೆ ರಿಚಾ ಘೋಷ್ (51; 29ಎ, 4X4, 6X3) ಮತ್ತು ಎಲಿಸ್ ಪೆರಿ (49 ರನ್) ತಿರುಗೇಟು ನೀಡಿದರು. ಕೊನೆಯ ಎಸೆತದವರೆಗೂ ರೋಚಕತೆ ಕೆರಳಿಸಿದ್ದ ಪಂದ್ಯದಲ್ಲಿ ಡೆಲ್ಲಿ ಮೇಲುಗೈ ಸಾಧಿಸಿತು.

ಜೆಮಿಮಾ ಅರ್ಧಶತಕ: ‌ಡೆಲ್ಲಿ ತಂಡಕ್ಕೆ ಮೆಗ್ ಲ್ಯಾನಿಂಗ್ (29; 26ಎ) ಮತ್ತು ಶಫಾಲಿ ವರ್ಮಾ (23; 18ಎ) ಮೊದಲ ಪವರ್‌ಪ್ಲೇನಲ್ಲಿ 54 ರನ್ ಗಳಿಸಿ ಉತ್ತಮ ಆರಂಭ ನೀಡಿದರು.

ನಂತರ ಜೆಮಿಮಾ (58; 36ಎ, 4X8, 6X1) ಮತ್ತು ಕ್ಯಾಪ್ಸಿ (48; 32ಎ, 4X8) ಮೂರನೇ ವಿಕೆಟ್ ಜೊತೆಯಾಟದಲ್ಲಿ 97 ರನ್‌ ಸೇರಿಸಿದರು. ಜಿಮಿಮಾ ಅವರ ಆಟವು ಆಕರ್ಷಕವಾಗಿತ್ತು. ಫ್ರಂಟ್‌ಫುಟ್ ಡ್ರೈವ್, ಸ್ವೀಪ್‌ ಮತ್ತು ಪಂಚ್‌ಗಳು ಗಮನ ಸೆಳೆದವು. ಇನಿಂಗ್ಸ್‌ನ ಕೊನೆಯ ಓವರ್‌ ಬೌಲಿಂಗ್ ಮಾಡಿದ ಶ್ರೇಯಾಂಕಾ ಎರಡು ವಿಕೆಟ್‌ ಪಡೆದರು.

ಸಂಕ್ಷಿಪ್ತ ಸ್ಕೋರು: ಡೆಲ್ಲಿ ಕ್ಯಾಪಿಟಲ್ಸ್: 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 181 (ಮೆಗ್ ಲ್ಯಾನಿಂಗ್ 29, ಶಫಾಲಿ ವರ್ಮಾ 23, ಜೆಮಿಮಾ ರಾಡ್ರಿಗಸ್ 58, ಅಲೈಸ್ ಕ್ಯಾಪ್ಸಿ 48, ಮೆರಿಝಾನೆ ಕಾಪ್ ಔಟಾಗದೆ 12, ಶ್ರೇಯಾಂಕಾ ಪಾಟೀಲ 26ಕ್ಕೆ4)

ರಾಯಲ್ ಚಾಲೆಂಜರ್ಸ್ ಬೆಂಗಳೂರು: 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 180 (ಸೋಫಿ ಮಾಲಿನ್ 33, ಎಲಿಸ್ ಪೆರಿ 49, ರಿಚಾ ಘೋಷ್ 51, ಸೋಫಿ ಡಿವೈನ್ 26, ಅಲಿಸ್ ಕ್ಯಾಪ್ಸಿ 5ಕ್ಕೆ1, ಶಿಖಾ ಪಾಂಡೆ 34ಕ್ಕೆ1) ಪಂದ್ಯ ಫಲಿತಾಂಶ: ಡೆಲ್ಲಿ ಕ್ಯಾಪಿಟಲ್ಸ್‌ಗೆ 1 ರನ್ ಜಯ, ಪಂದ್ಯದ ಆಟಗಾರ್ತಿ:ಜೆಮಿಮಾ ರಾಡಿಗ್ರಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT