ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

WPL 2024: ಶಫಾಲಿ, ಜೆಮಿಮಾ ಬಿರುಸಿನ ಬ್ಯಾಟಿಂಗ್; ಫೈನಲ್‌ಗೆ ಡೆಲ್ಲಿ ಕ್ಯಾಪಿಟಲ್ಸ್

Published 13 ಮಾರ್ಚ್ 2024, 18:30 IST
Last Updated 13 ಮಾರ್ಚ್ 2024, 18:30 IST
ಅಕ್ಷರ ಗಾತ್ರ

ನವದೆಹಲಿ: ಮೆಗ್‌ ಲ್ಯಾನಿಂಗ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ ತಂಡವು ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಸತತ ಎರಡನೇ ಬಾರಿ ಫೈನಲ್‌ ಪ್ರವೇಶಿಸಿತು.

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ  ಡೆಲ್ಲಿ ತಂಡವು ಗುಜರಾತ್ ಜೈಂಟ್ಸ್ ವಿರುದ್ಧ  7 ವಿಕೆಟ್‌ಗಳಿಂದ ಗೆದ್ದು ಪ್ರಶಸ್ತಿ ಸುತ್ತಿಗೆ ಸಾಗಿತು.

ಭಾನುವಾರ ನಡೆಯುವ ಫೈನಲ್‌ನಲ್ಲಿ ಪ್ಲೇ ಆಫ್‌ ಪಂದ್ಯದ ವಿಜೇತ ತಂಡವನ್ನು ಡೆಲ್ಲಿ ಎದುರಿಸಲಿದೆ. ಶುಕ್ರವಾರ ಮುಂಬೈ ಇಂಡಿಯನ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳು ಪ್ಲೇ ಆಫ್‌ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಟಾಸ್ ಗೆದ್ದ ಜೈಂಟ್ಸ್‌ ಬ್ಯಾಟಿಂಗ್ ಆಯ್ಕೆ ಮಾಡಿ ಕೊಂಡಿತು. ಗುಜರಾತ್ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 128 ರನ್‌ ಗಳಿಸಿತು. ಸಾಧಾರಣ ಗುರಿ ಬೆನ್ನಟ್ಟಿದ ಡೆಲ್ಲಿ ತಂಡವು ಆರಂಭಿಕ ಬ್ಯಾಟರ್ ಶಫಾಲಿ ವರ್ಮಾ (71; 37ಎ, 4X7, 6X5) ಮತ್ತು ಜೆಮಿಮಾ ರಾಡ್ರಿಗಸ್ (ಔಟಾಗದೆ 38; 28ಎ, 4X4, 6X1) ಅವರ ಬಿರುಸಿನ ಬ್ಯಾಟಿಂಗ್‌ನಿಂದಾಗಿ ಡೆಲ್ಲಿ ತಂಡವು ಗೆದ್ದಿತು. ಇನಿಂಗ್ಸ್‌ನಲ್ಲಿ ಇನ್ನೂ 41 ಎಸೆತಗಳು ಬಾಕಿಯಿರುವಾಗಲೇ 3 ವಿಕೆಟ್‌ಗಳಿಗೆ 129 ರನ್ ಗಳಿಸಿ  ಜಯಿಸಿತು.

ಸಾಧಾರಣ ಮೊತ್ತ: ಡೆಲ್ಲಿ ತಂಡದ ಮರಿಝಾನೆ ಕ್ಯಾಪ್, ಶಿಖಾ ಪಾಂಡೆ ಹಾಗೂ ಮಿನು ಮಣಿ ಅವರು ತಲಾ ಎರಡು ವಿಕೆಟ್ ಗಳಿಸಿದರು. ಇದರೊಂದಿಗೆ ಗುಜರಾತ್ ತಂಡವು ದೊಡ್ಡ ಮೊತ್ತ ಗಳಿಸದಂತೆ ತಡೆಯೊಡ್ಡಿದರು. 8.4 ಓವರ್‌ಗಳಲ್ಲಿ 39 ರನ್ ಗಳಿಸಿದ್ದ ಗುಜರಾತ್ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ಭಾರತಿ ಪೂಲ್‌ಮಾಲಿ (43; 36ಎ) ಮತ್ತು ಕ್ಯಾಥರಿನ್ ಬರೈಸ್ (ಔಟಾಗದೆ 28, 22ಎ) ಅವರು ತಂಡವು ಅಲ್ಪಮೊತ್ತಕ್ಕೆ ಕುಸಿಯುವುದನ್ನು ತಪ್ಪಿಸಿದರು.

ಸಂಕ್ಷಿಪ್ತ ಸ್ಕೋರು: ಗುಜರಾತ್ ಜೈಂಟ್ಸ್: 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 128 (ಫೋಬಿ ಲಿಚ್‌ಫೀಲ್ಡ್‌ 21, ಭಾರತಿ ಫೂಲ್‌ಮಾಲಿ 42, ಕ್ಯಾಥರಿನ್ ಬ್ರೈಸ್ ಔಟಾಗದೆ 28, ಮೆರಿಝಾನೆ ಕ್ಯಾಪ್ 17ಕ್ಕೆ2, ಶಿಖಾ ಪಾಂಡೆ 23ಕ್ಕೆ2, ಮಿನು ಮಣಿ 9ಕ್ಕೆ2)  ಡೆಲ್ಲಿ ಕ್ಯಾಪಿಟಲ್ಸ್: 13.1 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 129 (ಮೆಗ್‌ಲ್ಯಾನಿಂಗ್ 18, ಶಫಾಲಿ ವರ್ಮಾ 71,  ಜೆಮಿಮಾ ರಾಡ್ರಿಗಸ್ ಔಟಾಗದೆ 38, ತನುಜಾ ಕನ್ವರ್ 20ಕ್ಕೆ2)
ಫಲಿತಾಂಶ:
ಡೆಲ್ಲಿ ಕ್ಯಾಪಿಟಲ್ಸ್‌ಗೆ 7 ವಿಕೆಟ್‌ಗಳ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT