ಬುಧವಾರ, ಫೆಬ್ರವರಿ 24, 2021
24 °C

ಮಹಿಳಾ ಟ್ವೆಂಟಿ–20 ಲೀಗ್: ಯಮುನಾ ಚಾಂಪಿಯನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದೇವಸ್ಮಿತಾ ದತ್ತಾ ಅವರ ಆಲ್‌ರೌಂಡ್ ಆಟದ ಬಲದಿಂದ ಯಮುನಾ ತಂಡವು ಗುರುವಾರ ಇಲ್ಲಿ ಮುಕ್ತಾಯವಾದ ಮಹಿಳಾ ಕ್ರಿಕೆಟ್ ಲೀಗ್ (ಡಬ್ಲ್ಯುಸಿಎಲ್) ಟ್ವೆಂಟಿ–20 ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕಾವೇರಿ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 89 ರನ್‌ ಗಳಿಸಿತು. ಯಮುನಾ ತಂಡವು 17.4 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 83 ರನ್‌ ಗಳಿಸಿತು. ರಭಸದ ಮಳೆ ಸುರಿದ ಕಾರಣ ಉತ್ತಮ ರನ್‌ರೇಟ್ ಆಧಾರದ ಮೇಲೆ ವಿಜೇತ ತಂಡವನ್ನು ಘೋಷಿಸಲಾಯಿತು.

ದೇವಸ್ಮಿತಾ ದತ್ತಾ (7ಕ್ಕೆ3 ಮತ್ತು ಔಟಾಗದೆ 29) ಅವರು ಆಲ್‌ರೌಂಡ್ ಆಟದ ಮೂಲಕ ಮಿಂಚಿದರು.

ಯಮುನಾ ತಂಡಕ್ಕೆ ₹ 30 ಸಾವಿರ, ರನ್ನರ್ಸ್‌ ಅಪ್ ಕಾವೇರಿ ತಂಡಕ್ಕೆ ₹ 20 ಸಾವಿರ ಬಹುಮಾನ ನೀಡಲಾಯಿತು.

ಯಮುನಾ ತಂಡದ ವೃಂದಾ ದಿನೇಶ್ ಅವರು ಸರಣಿ ಆಟಗಾರ್ತಿ ಗೌರವಕ್ಕೆ ಪಾತ್ರರಾದರು. ವೇದಾ ಕೃಷ್ಣಮೂರ್ತಿ ಅವರು ಉತ್ತಮ ಬ್ಯಾಟ್ಸ್‌ವುಮನ್ ಮತ್ತು ಉತ್ತಮ ಕ್ಯಾಚ್‌ ಗಳಿಸಿದ ಗೌರವ ಗಳಿಸಿದರು. ನರ್ಮದಾ ತಂಡದ ಸಿ. ಪ್ರತ್ಯುಷಾ ಉತ್ತಮ ಬೌಲರ್,  ಸಂಜನಾ ಬಾಟ್ನಿ ವಿಕೆಟ್‌ಕೀಪರ್,  ಕಾವೇರಿ ತಂಡದ ಅದಿತಿ ರಾಜೇಶ್ ಆಲ್‌ರೌಂಡರ್, ಯಮುನಾ ತಂಡದ ದೇವಸ್ಮಿತಾ ದತ್ತಾ ಅವರು ಉತ್ತಮ ಫೀಲ್ಡರ್ ಪ್ರಶಸ್ತಿ ಪಡೆದರು.

ಸಂಕ್ಷಿಪ್ತ ಸ್ಕೋರು: ಟೀಮ್ ಕಾವೇರಿ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 89 (ವೇದಾ ಕೃಷ್ಣಮೂರ್ತಿ 16,ಜಿ.ಆರ್. ಪ್ರೇರಣಾ 19, ಅದಿತಿ ರಾಜೇಶ್ 20, ಎಂ. ಸೌಮ್ಯಾ 17ಕ್ಕೆ2, ದೇವಸ್ಮಿತಾ ದತ್ತಾ 7ಕ್ಕೆ3), ಟೀಮ್ ಯಮುನಾ: 17.4 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 83 (ವೃಂದಾ ದಿನೇಶ್ 18, ದೇವಸ್ಮಿತಾ ದತ್ತಾ ಔಟಾಗದೆ 29, ಅದಿತಿ ರಾಜೇಶ್ 8ಕ್ಕೆ2, ವೇದಾ ಕೃಷ್ಣಮೂರ್ತಿ 12ಕ್ಕೆ2)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು