ಲಂಡನ್:ದ ಓವಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆಯುತ್ತಿರುವವಿಶ್ವಕಪ್ ಟೂರ್ನಿಯಭಾರತ–ಆಸ್ಟ್ರೇಲಿಯಾ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಭರ್ಜರಿ ಬ್ಯಾಟಿಂಗ್ ನಡೆಸಿತು. ಶಿಖರ್ ಧವನ್ ಶತಕ ಪೂರೈಸಿದರು. ಆಸ್ಟ್ರೇಲಿಯಾ ಗೆಲುವಿಗೆ ಭಾರತ 353 ರನ್ ಗುರಿ ನೀಡಿದೆ.

ಕ್ಷಣಕ್ಷಣದ ಸ್ಕೋರ್:https://bit.ly/2QXUHkI

ಆರಂಭದಲ್ಲಿ ನಿಧಾನ ಗತಿಯ ಆಟಕ್ಕೆ ಮುಂದಾದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ನಂತರದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿ, ತಂಡದ ರನ್ ಗಳಿಕೆಗೆ ಭದ್ರ ಬುನಾದಿ ಹಾಕಿದರು. ರೋಹಿತ್‌ಅರ್ಧ ಶತಕ ಪೂರೈಸಿದರು. ರೋಹಿತ್ ಒಂದು ಸಿಕ್ಸರ್ ಹಾಗೂ 3 ಬೌಂಡರಿ, ಧವನ್ 16ಬೌಂಡರಿ ದಾಖಲಿಸಿದ್ದಾರೆ. ಈ ಮೂಲಕ ಭಾರತ ಬೃಹತ್ ಮೊತ್ತ ದಾಖಲಿಸುವ ಸಾಧ್ಯತೆ ಹೆಚ್ಚಿದೆ.

ಆರಂಭದ ಬೌಲರ್‌ಗಳಾದ ಮಿಷೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮಿನ್ಸ್ ಅವರ ವಿಕೆಟ್ ಗಳಿಸುವ ಪ್ರಯತ್ನ ಫಲ ನೀಡಲಿಲ್ಲ. ಭಾರತದ ಆರಂಭಿಕ ಜತೆಯಾಟ ಮುರಿಯಲು ಆಸ್ಟ್ರೇಲಿಯಾ ಆರು ಬೌಲರ್‌ಗಳೊಂದಿಗೆ ಪ್ರಯತ್ನ ನಡೆಸಿತು.ಎರಡನೇ ಓವರ್‌ನಲ್ಲಿ ರೋಹಿತ್ ಶರ್ಮಾ ನೀಡಿದ ಕ್ಯಾಚ್ ಕೈಚೆಲ್ಲಿದ ನೇಥನ್ ಕಾಲ್ಟರ್‌ನೈಲ್ ಪೇಚಾಡಿದರು. ಆದರೆ, ತನ್ನದೇ ಓವರ್‌ನಲ್ಲಿ ರೋಹಿತ್(57) ವಿಕೆಟ್ ಕಬಳಿಸಲು ಸಫಲರಾದರು.

117 ರನ್ ಗಳಿಸಿದ್ದಶಿಖರ್ ಧವನ್‌ಗೆ(109 ಎಸೆತ) ಆಟವನ್ನು ಮಿಷೆಲ್ ಸ್ಟಾರ್ಕ್ ಕೊನೆ ಮಾಡಿದರು.ತಂಡದ ನಾಯಕ ವಿರಾಟ್ ಕೊಹ್ಲಿ(82) ಮತ್ತು ಹಾರ್ದಿಕ್ ಪಾಂಡ್ಯ(48), ಎಂ.ಎಸ್.ಧೋನಿ(27) ಹಾಗೂ ಕೆ.ಎಲ್.ರಾಹುಲ್ 11 ರನ್ ಗಳಿಸಿದರು.

ಇದನ್ನೂ ಓದಿ:ಭಾರತ– ಆಸ್ಟ್ರೇಲಿಯಾ ಹಣಾಹಣಿ: ಟಾಸ್ ಗೆದ್ದ ವಿರಾಟ್ ಬಳಗ ಬ್ಯಾಟಿಂಗ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.