ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರಂಭದಲ್ಲೇ ಭಾರತ ತಂಡಕ್ಕೆ ವಿಘ್ನ

Last Updated 16 ಏಪ್ರಿಲ್ 2019, 8:39 IST
ಅಕ್ಷರ ಗಾತ್ರ

1979ರಮೊದಲ ವಿಶ್ವಕಪ್‌ ಟೂರ್ನಿಯಲ್ಲಿ ಒಂದು ಪಂದ್ಯವನ್ನು ಗೆದ್ದಿದ್ದ ಭಾರತ ಎರಡನೇ ವಿಶ್ವಕಪ್‌ನಲ್ಲಿ ಶೂನ್ಯದೊಂದಿಗೆ ವಾಪಸಾಯಿತು. ಮೊದಲ ಟೂರ್ನಿಯಲ್ಲಿ ‘ಎ’ ಗುಂಪಿನಲ್ಲಿ ಸ್ಥಾನ ಗಳಿಸಿದ್ದ ಭಾರತಕ್ಕೆ ಅದೇ ಗುಂಪಿನಲ್ಲಿದ್ದ ಈಸ್ಟ್‌ ಆಫ್ರಿಕಾ ಸುಲಭ ತುತ್ತಾಗಿತ್ತು. ಆದರೆ ಈ ಬಾರಿ ಭಾರತ ‘ಬಿ’ ಗುಂಪಿನಲ್ಲಿತ್ತು. ದುರ್ಬಲ ತಂಡವಾದ ಕೆನಡಾ ‘ಎ’ ಗುಂಪಿನಲ್ಲಿತ್ತು.

ಭಾರತವಿದ್ದ ಗುಂಪಿನಲ್ಲಿ ಹಿಂದಿನ ವರ್ಷದ ಚಾಂಪಿಯನ್‌ ವೆಸ್ಟ್‌ ಇಂಡೀಸ್‌, ಬಲಿಷ್ಠ ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ತಂಡಗಳು ಇದ್ದವು. ಮೂರೂ ತಂಡಗಳ ವಿರುದ್ಧ ಸೋತ ಭಾರತ ಗುಂಪು ಹಂತದಿಂದಲೇ ಹೊರಬಿದ್ದಿತ್ತು. ಮೊದಲ ಪಂದ್ಯದಲ್ಲಿ ಭಾರತವನ್ನು ವೆಸ್ಟ್ ಇಂಡೀಸ್‌ ಒಂಬತ್ತು ವಿಕೆಟ್‌ಗಳಿಂದ ಮಣಿಸಿತ್ತು.

* ವೆಸ್ಟ್‌ ಇಂಡೀಸ್ ಎದುರಿನ ಪಂದ್ಯ ಬರ್ಮಿಂಗಮ್ ನಲ್ಲಿ ಜೂನ್‌ 9 ರಂದು ನಡೆದಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 53.1 ಓವರ್‌ಗಳಲ್ಲಿ 190 ರನ್‌ ಗಳಿಸಿತ್ತು.

* ಆರಂಭಿಕ ಬ್ಯಾಟ್ಸ್‌ಮನ್‌ ಸುನಿಲ್ ಗಾವಸ್ಕರ್‌ ಏಳು ಎಸೆತಗಳಲ್ಲಿ ಎಂಟು ರನ್‌ ಗಳಿಸಿದ್ದರು. ಮೊದಲ ವಿಕೆಟ್‌ಗೆ ಅನ್ಶುಮನ್‌ ಗಾಯಕವಾಡ್ ಜೊತೆಗೂಡಿ ಅವರು 10 ರನ್‌ ಸೇರಿಸಿದ್ದರು!

* ಕನ್ನಡಿಗ ಜಿ.ಆರ್‌.ವಿಶ್ವನಾಥ್‌ 134 ಎಸೆತಗಳಲ್ಲಿ ಏಳು ಬೌಂಡರಿಗಳೊಂದಿಗೆ 75 ರನ್ ಗಳಿಸಿದ್ದರು. 24 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿದ್ದಾಗ ವಿಶ್ವನಾಥ್‌ ಮತ್ತುಬ್ರಿಜೇಶ್ ಪಟೇಲ್‌ ಜೊತೆಗೂಡಿ 27 ರನ್‌ ಕಲೆ ಹಾಕಿದ್ದರು.

* ಮೈಕೆಲ್‌ ಹೋಲ್ಡಿಂಗ್‌ ನಾಲ್ಕು ಮತ್ತು ಆ್ಯಂಡಿ ರಾಬರ್ಟ್ಸ್‌ ಎರಡು ವಿಕೆಟ್ ಕಬಳಿಸಿದ್ದರು. ಜೊಯೆಲ್‌ ಗಾರ್ನರ್‌, ಕಾಲಿನ್ ಕ್ರಾಫ್ಟ್‌ ಮತ್ತು ಕಾಲಿಸ್‌ ಕಿಂಗ್‌ ತಲಾ ಒಂದೊಂದು ವಿಕೆಟ್ ಉರುಳಿಸಿದ್ದರು.

* ಗುರಿ ಸುಲಭವಾಗಿದ್ದರೂ ವೆಸ್ಟ್ ಇಂಡೀಸ್‌ ಜಯ ಗಳಿಸಲು 52ನೇ ಓವರ್‌ ವರೆಗೂ ಕಾಯಬೇಕಾಗಿತ್ತು. ಆರಂಭಿಕ ಬ್ಯಾಟ್ಸ್‌ಮನ್ ಗಾರ್ಡನ್ ಗ್ರೀನಿಜ್‌ 173 ಎಸೆತಗಳಲ್ಲಿ 106 ರನ್‌ ಗಳಿಸಿದ್ದರು. ಮತ್ತೊಬ್ಬ ಆರಂಭಿಕ ಬ್ಯಾಟ್ಸ್‌ಮನ್‌ ಡೆಸ್ಮಂಡ್ ಹೇನ್ಸ್‌ 47 ರ‌ನ್ ಗಳಿಸಿದ್ದರು.

* 181 ನಿಮಿಷಗಳ ಕಾಲ ಕ್ರೀಸ್‌ಲ್ಲಿದ್ದ ಗ್ರೀನಿಜ್‌ ಒಂದು ಸಿಕ್ಸರ್ ಮತ್ತು ಒಂಬತ್ತು ಬೌಂಡರಿ ಗಳಿಸಿದ್ದರು. ಮೊದಲ ವಿಕೆಟ್‌ಗೆ 138 ರನ್‌ಗಳು ಜಮೆ ಆಗಿದ್ದವು. ಭಾರತದ ಪರ ಏಕೈಕ ವಿಕೆಟ್‌ ಕಪಿಲ್ ದೇವ್‌ ಗಳಿಸಿದ್ದರು.

* ಭಾರತ ತಂಡವನ್ನು ಬಲಗೈ ಬ್ಯಾಟ್ಸ್‌ಮನ್‌ ಮತ್ತು ಆಫ್‌ಬ್ರೆಕ್‌ ಬೌಲರ್‌ ಎಸ್‌.ವೆಂಕಟರಾಘವನ್ ಮುನ್ನಡೆಸಿದ್ದರೆ ವೆಸ್ಟ್ ಇಂಡೀಸ್‌ನ ನಾಯಕತ್ವ ವಹಿಸಿದ್ದವರು ಎಡಗೈ ಬ್ಯಾಟ್ಸ್‌ಮನ್‌ ಮತ್ತುಕ್ಲೈವ್ ಲಾಯ್ಡ್‌.

2009ರಲ್ಲಿ ನಡೆದಿದ್ದ ಸಮಾರಂಭವೊಂದರಲ್ಲಿ ಜೊತೆಗೂಡಿದ್ದ ವಿವಿಯನ್ ರಿಚರ್ಡ್ಸ್‌ ಮತ್ತು ಜಿ.ಆರ್. ವಿಶ್ವನಾಥ್
2009ರಲ್ಲಿ ನಡೆದಿದ್ದ ಸಮಾರಂಭವೊಂದರಲ್ಲಿ ಜೊತೆಗೂಡಿದ್ದ ವಿವಿಯನ್ ರಿಚರ್ಡ್ಸ್‌ ಮತ್ತು ಜಿ.ಆರ್. ವಿಶ್ವನಾಥ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT