ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

WPL 2024 | RCB Vs MI: ಟಾಸ್‌ ಗೆದ್ದ ಮುಂಬೈ ಬೌಲಿಂಗ್ ಆಯ್ಕೆ

Published 2 ಮಾರ್ಚ್ 2024, 13:43 IST
Last Updated 2 ಮಾರ್ಚ್ 2024, 13:43 IST
ಅಕ್ಷರ ಗಾತ್ರ

ಬೆಂಗಳೂರು: ಟಾಸ್‌ ಗೆದ್ದಿರುವ ಮುಂಬೈ ಇಂಡಿಯನ್ಸ್‌ ತಂಡ, ಬೌಲಿಂಗ್ ಆಯ್ದುಕೊಂಡಿದೆ.

ಗುಜರಾತ್ ಟೈಟನ್ಸ್‌ ಮತ್ತು ದೆಹಲಿ ಕ್ಯಾಪಿಟಲ್ಸ್‌ ಎದುರು ರೋಚಕ ಗೆಲುವು ಸಾಧಿಸಿದ್ದ ಮುಂಬೈ ಇಂಡಿಯನ್ಸ್‌ ತಂಡ, ಬುಧವಾರ(ಫೆ.28) ನಡೆದ ಪಂದ್ಯದಲ್ಲಿ ಯುಪಿ ವಾರಿಯರ್ಸ್‌ ಎದುರು ಸೋತಿತ್ತು. ಆ ಮೂಲಕ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದೆ.

ಯುಪಿ ವಾರಿಯರ್ಸ್‌ ಮತ್ತು ಗುಜರಾತ್ ಟೈಟಾನ್ಸ್‌ ಎದುರು ಗೆಲುವು ಸಾಧಿಸಿದ್ದ ಆರ್‌ಸಿಬಿ, ಗುರವಾರ(ಫೆ.29) ನಡೆದ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್‌ ಎದುರು ಸೋಲು ಕಂಡಿತ್ತು. ಆ ಮೂಲಕ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದೆ.

ಪಿಚ್‌ ರಿಪೋರ್ಟ್‌

ಸೀಮಿತ ಓವರ್‌ಗಳ ಪಂದ್ಯದಲ್ಲಿ ಕಿರಿದಾದ ಬೌಂಡ್ರಿ ಗೆರೆ ಮತ್ತು ಎತ್ತರದ ಗ್ಯಾಲರಿಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬ್ಯಾಟರ್‌ಗಳ ಸ್ವರ್ಗ ಎಂದೇ ಪರಿಗಣಿಸಲಾಗುತ್ತದೆ. ಇದೇ ಕ್ರೀಡಾಂಗಣದಲ್ಲಿ ದೊಡ್ಡ ಮೊತ್ತ ದಾಖಲಿಸಿದ ಹಲವು ಉದಾಹರಣೆಗಳೂ ಇವೆ.

ಬ್ಯಾಟರ್‌ಗಳ ಸ್ವರ್ಗ ಎಂದೇ ಪರಿಗಣಿಸಲಾಗುವ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣವು, ಟೆಸ್ಟ್‌ ಕ್ರಿಕೆಟ್‌ನಲ್ಲಿ ವೇಗಿಗಳಿಗೆ ನೆರವಾಗುತ್ತದೆ. ಆ ಮೂಲಕ ಹಲವು ಅಚ್ಚರಿ ಫಲಿತಾಂಶಗಳಿಗೆ ಕಾರಣವಾಗುವ ಕೆಲವೇ ಕೆಲವು ಪಿಚ್‌ಗಳಲ್ಲಿ ಇದೂ ಒಂದು. ಐದು ದಿನಗಳ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಪಾಲ್ಗೊಂಡ ಹಲವು ವೇಗಿಗಳು ಈ ಪಿಚ್‌ ಮೆಚ್ಚಿಕೊಂಡು ಹೊಗಳಿದ್ದೂ ಇದೆ.

ತಂಡದ ವಿವರ

ಆರ್‌ಸಿಬಿ: ಸ್ಮೃತಿ ಮಂದಾನ, ದಿಶಾ ಕಸತ್, ಸಬ್ಬಿನೇನಿ ಮೇಘನಾ, ಶೋಭನಾ ಆಶಾ, ಎಲ್ಲಿಸ್ ಪೆರ್ರಿ, ನಾಡಿನ್ ಡಿ ಕ್ಲರ್ಕ್, ಸತೀಶ್ ಶುಭಾ, ಶ್ರೇಯಾಂಕಾ ಪಾಟೀಲ್, ಇಂದ್ರಾಣಿ ರಾಯ್, ಸೋಫಿ ಡಿವೈನ್, ರಿಚಾ ಘೋಷ್, ಏಕ್ತಾ ಬಿಷ್ಠೇಶ್, ಜಾರ್ಜಿಯಾ ವೇರ್ಹ್ಯಾಮ್, ಕೇಟ್ ಕ್ರಾಸ್, ರೇಣುಕಾ ಸಿಂಗ್, ಶ್ರದ್ದಾ ಭಾವು ಪೋಖರ್ಕರ್, ಸಿಮ್ರಾನ್ ಬಹದ್ದೂರ್,ಸೋಫಿ ಮಾಲಿನ್‌.

ಮುಂಬೈ ಇಂಡಿಯನ್ಸ್‌: ಹರ್ಮನ್‌ಪ್ರೀತ್ ಕೌರ್,ಹುಮೈರಾ ಕಾಜಿ, ಅಮನದೀಪ್ ಕೌರ್, ಅಮಂಜೋತ್ ಕೌರ್, ಅಮೆಲಿಯಾ ಕೆರ್, ಕ್ಲೋಯಿ ಟ್ರಯಾನ್, ಹೇಲಿ ಮ್ಯಾಥ್ಯೂಸ್, ಜಿಂತಿಮಣಿ ಕಲಿತಾ, ಕೀರ್ತನಾ ಸತ್ಯಮೂರ್ತಿ ಬಾಲಕೃಷ್ಣನ್, ನಥಾಲಿ ಶಿವರ್ ಬ್ರಂಟ್,ಪೂಜಾ ವಸ್ತ್ರಾಕರ್, ಸಜೀವನ್ ಸಜನ, ಪ್ರಿಯಾಂಕಾ ಬಾಲಾ, ಯಾಸ್ತಿಕಾ ಭಾಟಿಯಾ, ಫಾತಿಮಾ ಜಾಫರ್, ಇಸ್ಸಿ ವಾಂಗ್, ಸೈಕಾ ಇಶಾಕ್, ಶಬ್ನಿಮ್ ಇಸ್ಮಾಯಿಲ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT