ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ ಗೆದ್ದ RCB ಮಹಿಳಾ ತಂಡಕ್ಕೆ ವಿಡಿಯೊ ಕರೆ ಮಾಡಿ ಶುಭಾಶಯ ತಿಳಿಸಿದ ವಿರಾಟ್

ಪ್ರಸಕ್ತ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳೆಯರ ತಂಡ ಕಪ್ ಗೆಲ್ಲುವ ಮೂಲಕ ಆರ್‌ಸಿಬಿ ಅಭಿಮಾನಿಗಳಿಗೆ ಸಕತ್ ಖುಷಿ ನೀಡಿದೆ.
Published 18 ಮಾರ್ಚ್ 2024, 2:35 IST
Last Updated 18 ಮಾರ್ಚ್ 2024, 2:35 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಸಕ್ತ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳೆಯರ ತಂಡ ಕಪ್ ಗೆಲ್ಲುವ ಮೂಲಕ ಆರ್‌ಸಿಬಿ ಅಭಿಮಾನಿಗಳಿಗೆ ಸಕತ್ ಖುಷಿ ನೀಡಿದೆ.

ಲಕ್ಷಾಂತರ ಅಭಿಮಾನಿಗಳು ಮಹಿಳಾ ತಂಡಕ್ಕೆ ತಮ್ಮದೇಯಾದ ರೀತಿಯಲ್ಲಿ ಶುಭಾಶಯ ಕೋರುತ್ತಿದ್ದಾರೆ. ಮಹಿಳೆಯರ ತಂಡ ಪ್ರಶಸ್ತಿ ಗೆದ್ದ ತಕ್ಷಣವೇ ಕ್ರೀಡಾಂಗಣದಲ್ಲಿ ಮಹಿಳಾ ತಂಡದ ಮ್ಯಾನೇಜರ್‌ಗೆ ವಿಡಿಯೊ ಕಾಲ್ ಮಾಡಿ ಐಪಿಎಲ್‌ ಆರ್‌ಸಿಬಿ ತಂಡದ ಆಟಗಾರ ವಿರಾಟ್ ಕೊಹ್ಲಿ ಶುಭಾಶಯ ತಿಳಿಸಿದ್ದಾರೆ.

ಈ ವೇಳೆ ಎಲ್ಲ ಆಟಗಾರ್ತಿಯರು ವಿಡಿಯೊ ಕಾಲ್‌ನಲ್ಲಿ ವಿರಾಟ್ ಅವರನ್ನು ನೋಡಿ ಮತ್ತಷ್ಟು ಸಂಭ್ರಮ ವ್ಯಕ್ತಪಡಿಸಿದ್ದಾರೆ. ಈ ಕುರಿತು WPL, ವಿಡಿಯೊ ಒಂದನ್ನು ಎಕ್ಸ್‌ ತಾಣದಲ್ಲಿ ಹಂಚಿಕೊಂಡಿದೆ.

ನಿನ್ನೆ ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ 8 ವಿಕೆಟ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್‌ಸಿಬಿ ರೋಚಕ ಜಯಭೇರಿ ಬಾರಿಸಿತು. 

ಆರ್‌ಸಿಬಿ ತಂಡದ  ಸೋಫಿ ಮಾಲಿನೊ ಅವರ ‘ಮ್ಯಾಜಿಕ್ ಓವರ್‘ ಮತ್ತು ಕನ್ನಡತಿ ಶ್ರೇಯಾಂಕ ಪಾಟೀಲ ಸ್ಪಿನ್ ಮೋಡಿಯಿಂದಾಗಿ ಬೆಂಗಳೂರು ತಂಡವು ಜಯಭೇರಿ ಬಾರಿಸಿತು.

ಟಾಸ್ ಗೆದ್ದು ಬ್ಯಾಟಿಂಗ್  ಆಯ್ಕೆ ಮಾಡಿಕೊಂಡ ಡೆಲ್ಲಿ ತಂಡವು 18.3 ಓವರ್‌ಗಳಲ್ಲಿ 113 ರನ್‌ ಗಳಿಸಿತು.  ಈ ಸಾಧಾರಣ ಗುರಿ ಬೆನ್ನಟ್ಟಿದ ಆರ್‌ಸಿಬಿಗೆ ಜಯ ಸುಲಭವಾಗಿ ಒಲಿಯಲಿಲ್ಲ. ಡೆಲ್ಲಿ ಬೌಲರ್‌ಗಳ ತಂತ್ರಗಾರಿಕೆಯನ್ನು ಎಚ್ಚರಿಕೆಯಿಂದ ಎದುರಿಸುವ ಸವಾಲನ್ನು ಆರ್‌ಸಿಬಿ ಎದುರಿಸಿತು. ಇದರಿಂದಾಗಿ ಫಲಿತಾಂಶವು ಕೊನೆಯ ಓವರ್‌ನಲ್ಲಿ ನಿರ್ಧಾರವಾಯಿತು.

ಕೊನೆಯ ಓವರ್‌ನ ನಾಲ್ಕು ಎಸೆತಗಳಲ್ಲಿ ತಂಡದ ಗೆಲುವಿಗೆ ಮೂರು ರನ್‌ಗಳು ಬೇಕಿದ್ದವು. ಆಗ ರಿಚಾ ಘೋಷ್ ಗಳಿಸಿದ ವಿಜಯ ಬೌಂಡರಿಯೊಂದಿಗೆ ಆರ್‌ಸಿಬಿ ಸಂಭ್ರಮ ಗರಿಗೆದರಿತು. ಡೆಲ್ಲಿ ತಂಡವು ಸತತ ಎರಡನೇ ವರ್ಷವೂ ರನ್ನರ್ಸ್ ಅಪ್ ಆಯಿತು.

ಆರ್‌ಸಿಬಿ ಪುರುಷರ ತಂಡವು 16 ವರ್ಷಗಳಿಂದ ಪ್ರಶಸ್ತಿ ಜಯಿಸುವ ಕನಸು ಈಡೇರಿಲ್ಲ. ಆದರೆ ಇದೀಗ ಸ್ಮೃತಿ ಮಂದಾನ ನಾಯಕತ್ವದ ಮಹಿಳಾ ತಂಡವು ಡಬ್ಲ್ಯುಪಿಎಲ್‌ನ ಎರಡನೇ ಆವೃತ್ತಿಯಲ್ಲಿಯೇ ಪ್ರಶಸ್ತಿ ಜಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT