ಗುರುವಾರ , ಆಗಸ್ಟ್ 5, 2021
28 °C
‘ಕ್ರಿಕೆಟ್‌ನಲ್ಲಿ ಈ ರೀತಿಯ ನಡವಳಿಕೆಯನ್ನು ನಾವು ಸಹಿಸುವುದಿಲ್ಲ‘ ಎಂದು ಐಸಿಸಿ ಎಚ್ಚರಿಕೆ ನೀಡಿದೆ.

WTC: ಆಟಗಾರರಿಗೆ ನಿಂದನೆ, ಇಬ್ಬರು ಟೀಮ್ ಇಂಡಿಯಾ ಅಭಿಮಾನಿಗಳು ಮೈದಾನದಿಂದ ಹೊರಕ್ಕೆ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಸೌತಂಪ್ಟನ್‌: ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಫ್‌ ಐತಿಹಾಸಿಕ ಪೈನಲ್ ಪಂದ್ಯದಲ್ಲಿ ಇಬ್ಬರು ಭಾರತೀಯ ಪ್ರೇಕ್ಷಕರು ನ್ಯೂಜಿಲೆಂಡ್‌ ತಂಡವನ್ನು ನಿಂದಿಸಿದ್ದರಿಂದ ಅವರನ್ನು ಮೈದಾನದಿಂದ ಹೊರಹಾಕಿರುವ ಘಟನೆ ನಡೆದಿದೆ.

ಐದನೇ ದಿನದಾಟದಲ್ಲಿ ಕ್ರೀಡಾಂಗಣದಲ್ಲಿ ಹೆಚ್ಚು ಪ್ರೇಕ್ಷಕರು ಸೇರಿದ್ದರು. ಕೊಂಚ ಭಾರತೀಯ ಪ್ರೇಕ್ಷಕರೇ ಹೆಚ್ಚಿದ್ದರು. ಈ ವೇಳೆ ಇಬ್ಬರು ಭಾರತ ತಂಡದ ಅಭಿಮಾನಿಗಳು ವಿರಾಟ್ ಕೊಹ್ಲಿ ಅವರನ್ನು ಹೊಗಳುವ ಭರದಲ್ಲಿ ನ್ಯೂಜಿಲೆಂಡ್ ತಂಡದ ಆಟಗಾರರನ್ನು ನಿಂದಿಸಿದ್ದಾರೆ.

ಈ ಕುರಿತು ಕೂಡಲೇ ಐಸಿಸಿಗೆ ವರದಿಗಳು ಹೋದ ತಕ್ಷಣ, ಕೆಟ್ಟದಾಗಿ ನಡೆದುಕೊಂಡ ಇಬ್ಬರು ಪ್ರೇಕ್ಷಕರನ್ನು ಅಲ್ಲಿದ್ದ ಭದ್ರತಾ ಸಿಬ್ಬಂದಿ ಹೊರಗೆ ಕಳುಹಿಸಿದ್ದಾರೆ. ‘ಕ್ರಿಕೆಟ್‌ನಲ್ಲಿ ಈ ರೀತಿಯ ನಡವಳಿಕೆಯನ್ನು ನಾವು ಸಹಿಸುವುದಿಲ್ಲ‘ ಎಂದು ಐಸಿಸಿ ಎಚ್ಚರಿಕೆ ನೀಡಿದೆ.

ಈ ಬಗ್ಗೆ ಮಾತನಾಡಿರುವ ನ್ಯೂಜಿಲೆಂಡ್ ತಂಡದ ನಾಯಕ ಟೀಮ್ ಸೌಥಿ, ‘ಇಂತಹ ಘಟನೆ ಸಂಭವಿಸಿರುವ ಬಗ್ಗೆ ನಾನು ಮೊದಲು ಕೇಳುತ್ತಿದ್ದೇನೆ. ಮೈದಾನದಲ್ಲಿ ಯಾವಾಗಲೂ ಆಟವನ್ನು ಸ್ಪೂರ್ತಿಯಿಂದ ಆಡಬೇಕು‘ ಎಂದು ಹೇಳಿದ್ದಾರೆ.

ಭಾರತದ ವಿರುದ್ಧ ನ್ಯೂಜಿಲೆಂಡ್‌ ಮೊದಲ ಇನ್ನಿಂಗ್ಸ್‌ನಲ್ಲಿ 249 ರನ್‌ಗಳನ್ನು ಕಲೆಹಾಕಿದ್ದು, ಅಲ್ಪ ಮುನ್ನಡೆ ಸಾಧಿಸಿದೆ. 5ನೇ ದಿನದಾಟದಂದು ಬ್ಯಾಟಿಂಗ್‌ ಮುಂದುವರಿಸಿದ ಕಿವೀಸ್‌ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 32 ರನ್‌ಗಳ ಮುನ್ನಡೆ ಸಾಧಿಸಲಷ್ಟೇ ಶಕ್ತವಾಗಿದೆ.

ಇದನ್ನೂ ಓದಿ: ಮುರುಳೀಧರನ್ ಎದುರು ಆಡುವಾಗ ಬ್ಯಾಟ್ಸ್‌ಮನ್‌ಗಳ ಕಣ್ಣಲ್ಲಿ ಭಯ ಇರುತ್ತೆ: ಲಕ್ಷ್ಮಣ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು