ಮುಂಬೈ: ದೇಶಿ ಕ್ರಿಕೆಟ್ನಲ್ಲಿ ಮುಂಬೈ ಕ್ರಿಕೆಟ್ ತಂಡದಲ್ಲೇ ತಮ್ಮನ್ನು ಮುಂದುವರಿಸುವಂತೆ ಭಾರತ ತಂಡದ ಆರಂಭ ಆಟಗಾರ ಯಶಸ್ವಿ ಜೈಸ್ವಾಲ್ ಅವರು ಮುಂಬೈ ಕ್ರಿಕೆಟ್ ಸಂಸ್ಥೆಯನ್ನು (ಎಂಸಿಎ) ಕೋರಿದ್ದಾರೆ.

ತಿಂಗಳ ಹಿಂದೆ ಗೋವಾ ತಂಡದ ಪರ ಆಡಲು ತಮಗೆ ನಿರಾಕ್ಷೇಪಣಾ ಪತ್ರ ನೀಡುವಂತೆ ಅವರು ಎಂಸಿಎಯನ್ನು ಕೋರಿ ಕ್ರಿಕೆಟ್ ವಲಯದಲ್ಲಿ ಅಚ್ಚರಿ ಮೂಡಿಸಿದ್ದರು.

ಮುಂದಿನ ದೇಶಿ ಕ್ರಿಕೆಟ್ ಋತುವಿನಲ್ಲಿ ತಾವು ಮುಂಬೈ ತಂಡವನ್ನು ಪ್ರತಿನಿಧಿಸಲು ಲಭ್ಯರಿರುವುದಾಗಿ ಜೈಸ್ವಾಲ್ ಅವರು ಮುಂಬೈ ಕ್ರಿಕೆಟ್ ಸಂಸ್ಥೆಗೆ ಇ–ಮೇಲ್ ಮೂಲಕ ಕೋರಿಕೆ ಕಳುಹಿಸಿದ್ದಾರೆ.

‘ಕುಟುಂಬವನ್ನು ಗೋವಾಕ್ಕೆ ಸ್ಥಳಾಂತರ ಮಾಡುವ ಯೋಜನೆಯನ್ನು ಈ ಮೊದಲು ಹಾಕಿಕೊಂಡಿದ್ದೆ. ಈಗ ಅದು ರದ್ದಾಗಿದೆ. ಹೀಗಾಗಿ ಈ ಹಿಂದೆ ನಿರಾಕ್ಷೇಪಣಾ ಪತ್ರವನ್ನು ವಾಪಸು ಪಡೆಯಲು ಸಲ್ಲಿಸಿರುವ ವಿನಂತಿಯನ್ನು ಪರಿಗಣಿಸಬೇಕು’ ಎಂದು ಅವರು ಇ–ಮೇಲ್ನಲ್ಲಿ ಮನವಿ ಮಾಡಿದ್ದಾರೆ.

ಉತ್ತರ ಪ್ರದೇಶದ ಭದೋಹಿಯವರಾದ ಜೈಸ್ವಾಲ್ ಎಳೆ ವಯಸ್ಸಿನಲ್ಲಿ ಮುಂಬೈಗೆ ಬಂದು ಕ್ರಿಕೆಟ್ನಲ್ಲಿ ಹಂತ ಹಂತವಾಗಿ ಏಳಿಗೆ ಕಂಡಿದ್ದರು. ಅವರು ಭಾರತ ತಂಡವನ್ನು ಮೂರೂ ಮಾದರಿಯಲ್ಲಿ ಪ್ರತಿನಿಧಿಸಿದ್ದಾರೆ. ಗೋವಾ ತಂಡಕ್ಕೆ ನಾಯಕನಾಗುವ ಸಾಧ್ಯತೆಯ ಕಾರಣ ಅಲ್ಲಿಗೆ ಸ್ಥಳಾಂತರಗೊಳ್ಳುವ ಅಪೇಕ್ಷೆ ಹೊಂದಿದ್ದರು ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.