ಭಾನುವಾರ, ಜುಲೈ 25, 2021
22 °C

ಪಾಕಿಸ್ತಾನ ಕ್ರಿಕೆಟ್‌ ತಂಡಕ್ಕೆ ಯೂನಿಸ್‌ ಬ್ಯಾಟಿಂಗ್‌‌ ಕೋಚ್‌

ಪಿಟಿಐ Updated:

ಅಕ್ಷರ ಗಾತ್ರ : | |

ಕರಾಚಿ: ಮುಂಬರುವ ಇಂಗ್ಲೆಂಡ್‌ ವಿರುದ್ಧದ ಸರಣಿಗೆ ಪಾಕಿಸ್ತಾನ ಕ್ರಿಕೆಟ್‌ ತಂಡಕ್ಕೆ ಬ್ಯಾಟಿಂಗ್‌‌ ಕೋಚ್‌ ಆಗಿ ಹಿರಿಯ ಆಟಗಾರ ಯೂನಿಸ್‌ ಖಾನ್‌ ನೇಮಕಗೊಂಡಿದ್ದಾರೆ. ಮುಷ್ತಾಕ್ ಅಹ್ಮದ್‌ ಅವರನ್ನು ಸ್ಪಿನ್‌ ಬೌಲಿಂಗ್‌ ಕೋಚ್‌ ಆಗಿ ನೇಮಿಸಲಾಗಿದೆ.

ಇಂಗ್ಲೆಂಡ್‌‌ ಪ್ರವಾಸ ಕೈಗೊಳ್ಳಲಿರುವ ಪಾಕಿಸ್ತಾನ ತಂಡ ಜುಲೈ 30ರಂದು ಮೂರು ಪಂದ್ಯ ಗಳ ಟೆಸ್ಟ್‌ ಸರಣಿಯ ಮೊದಲ ಪಂದ್ಯವನ್ನು ಆಡಲಿದೆ. ಆಗಸ್ಟ್‌ 29ರಿಂದ ಮೂರು ಪಂದ್ಯಗಳ ಟಿ20 ಸರಣಿಯೂ ಆರಂಭಗೊಳ್ಳಲಿದೆ.

42 ವರ್ಷದ ಯೂನಿಸ್‌, 118 ಟೆಸ್ಟ್‌ ಪಂದ್ಯಗಳಿಂದ 10,099 ರನ್‌ ಕಲೆ ಹಾಕಿದ್ದಾರೆ. 313 ರನ್‌ ಅವರ ಗರಿಷ್ಠ ವೈಯಕ್ತಿಕ ಸ್ಕೋರ್‌. ವಿಶ್ವ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಮೊದಲ ಸ್ಥಾನವನ್ನೂ ಅವರು ಅಲಂಕರಿಸಿದ್ದರು. ಲೆಗ್‌ಸ್ಪಿನ್ನರ್‌ ಆಗಿದ್ದ ಮುಷ್ತಾಕ್‌, ಪಾಕಿಸ್ತಾನ ಪರ 52 ಟೆಸ್ಟ್‌ ಪಂದ್ಯಗಳಿಂದ 185 ವಿಕೆಟ್‌ ಗಳಿಸಿದ್ದಾರೆ. ಹಿಂದೆ ಅವರು ಇಂಗ್ಲೆಂಡ್‌ ಹಾಗೂ ವೆಸ್ಟ್‌ ಇಂಡೀಸ್‌ ತಂಡಗಳಿಗೆ ಸ್ಪಿನ್‌ ಬೌಲಿಂಗ್‌ ತರಬೇತಿ ನೀಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು