ಸೋಮವಾರ, ಆಗಸ್ಟ್ 15, 2022
21 °C
ವೈ.ಎಸ್‌.ರಾಮಸ್ವಾಮಿ ಸ್ಮಾರಕ ಕ್ರಿಕೆಟ್ ಟೂರ್ನಿ

ಸ್ವಸ್ತಿಕ್‌ ಯೂನಿಯನ್‌, ಮೌಂಟ್‌ ಜಾಯ್ ಸೆಮಿಫೈನಲ್‌ಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಉತ್ತಮ ಆಟವಾಡಿದ ಸ್ವಸ್ತಿಕ್‌ ಯೂನಿಯನ್ ಕ್ರಿಕೆಟ್ ಕ್ಲಬ್ (1), ವಲ್ಚರ್ಸ್‌ ಕ್ಲಬ್, ಮೌಂಟ್ ಜಾಯ್‌ ಕ್ಲಬ್ ಹಾಗೂ ಸರ್ ಸೈಯದ್ ಕ್ರಿಕೆಟರ್ಸ್ ತಂಡಗಳು ವೈ.ಎಸ್.ರಾಮಸ್ವಾಮಿ ಸ್ಮಾರಕ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿವೆ.

ಸಂಕ್ಷಿಪ್ತ ಸ್ಕೋರ್‌: ಆಲೂರು (2) ಕ್ರೀಡಾಂಗಣ: ಬೆಂಗಳೂರು ಯುನೈಟೆಡ್ ಕ್ರಿಕೆಟ್‌ ಕ್ಲಬ್ (1): 43.1 ಓವರ್‌ಗಳಲ್ಲಿ 158 ಆಲೌಟ್‌ (ರೋಹನ್‌ ಕದಂ 29, ಕಿಶನ್ ಎಸ್‌. ಬೆದರೆ 22, ತುಷಾರ್ ಸಿಂಗ್ 32, ವೆಂಕಟೇಶ್ 25; ಕೆ.ಗೌತಂ 33ಕ್ಕೆ 2, ಶ್ರೇಯಸ್‌ ಗೋಪಾಲ್‌ 21ಕ್ಕೆ 3, ಆರ್‌. ಸಮರ್ಥ್‌ 21ಕ್ಕೆ 2). ಸ್ವಸ್ತಿಕ್‌ ಯೂನಿಯನ್‌ ಕ್ರಿಕೆಟ್‌ ಕ್ಲಬ್ (1):31.1 ಓವರ್‌ಗಳಲ್ಲಿ 3 ವಿಕೆಟ್‌ಗೆ 162 (ಆರ್‌.ಸಮರ್ಥ್ ಔಟಾಗದೆ 51, ಕೆ.ವಿ. ಸಿದ್ದಾರ್ಥ್‌ 49, ಕೆ.ಗೌತಮ್ 29). ಫಲಿತಾಂಶ: ಸ್ವಸ್ತಿಕ್‌ ಯೂನಿಯನ್‌ ಕ್ರಿಕೆಟ್‌ ಕ್ಲಬ್‌ಗೆ (1) 7 ವಿಕೆಟ್‌ಗಳ ಗೆಲುವು.

ಜಸ್ಟ್ ಕ್ರಿಕೆಟ್ ಕ್ರೀಡಾಂಗಣ: ರಾಜಾಜಿನಗರ ಕ್ರಿಕೆಟರ್ಸ್‌: 38.3 ಓವರ್‌ಗಳಲ್ಲಿ 148 ಆಲೌಟ್‌ (ಸೌರಭ್ ಮುತ್ತೂರ್‌ 21, ರೋಹಿತ್‌ ಕೆ. 20, ಶಮಂತ್ ಎಸ್‌.ಎಂ. 29, ಅಮೆಯ್‌ ಯು ಶಾನ್‌ಭಾಗ್ ಔಟಾಗದೆ 22; ರೋನಿತ್ ಮೋರೆ 20ಕ್ಕೆ 2, ಸಂತೋಕ್ ಸಿಂಗ್ 28ಕ್ಕೆ 2, ಜಗದೀಶ್‌ ಸುಚಿತ್ 9ಕ್ಕೆ 2, ಅಭಿಷೇಕ್ ಅಲಾವತ್‌ 40ಕ್ಕೆ 3). ವಲ್ಚರ್ಸ್ ಕ್ರಿಕೆಟ್‌ ಕ್ಲಬ್‌: 29.3 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 154 (ಡಿ.ನಿಶ್ಚಲ್ ಔಟಾಗದೆ 82, ಶ್ರೀಜಿತ್ ಕೆ.ಎಲ್ ಔಟಾಗದೆ 52). ಫಲಿತಾಂಶ: ವಲ್ಚರ್ಸ್ ಕ್ರಿಕೆಟ್‌ ಕ್ಲಬ್‌ಗೆ 10 ವಿಕೆಟ್‌ಗಳ ಜಯ.

ಆಲೂರು (3) ಕ್ರೀಡಾಂಗಣ: ಮೌಂಟ್ ಜಾಯ್‌ ಕ್ರಿಕೆಟ್‌ ಕ್ಲಬ್‌: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 267 (ಭರತ್ ಧುರಿ 36, ಅಕ್ಷನ್‌ ರಾವ್‌ 45, ಶರತ್ ಬೇಲೂರ ರವಿ 65, ಆದಿತ್ಯ ಸೋಮಣ್ಣ 62; ಶ್ರೀಕರ ಗಾಣಿಗ 58ಕ್ಕೆ 3). ಜವಾಹರ್ ಸ್ಪೋರ್ಟ್ಸ್ ಕ್ಲಬ್ (1): 37.4 ಓವರ್‌ಗಳಲ್ಲಿ 190 ಆಲೌಟ್‌ (ರಾಜ್‌ಕುಮಾರ್ ಎಸ್‌.ಎಂ. 44, ಹಿಮಾದ್ರಿ 61, ಕೆ.ಸಿ.ಕಾರಿಯಪ್ಪ 23; ಶರಣ್ ಗೌಡ 40ಕ್ಕೆ 2, ಪವನ್‌ ಗೋಖಲೆ 38ಕ್ಕೆ 4, ಶೀತಲ್‌ ಕುಮಾರ್‌ 37ಕ್ಕೆ 2). ಫಲಿತಾಂಶ: ಮೌಂಟ್‌ ಜಾಯ್‌ ಕ್ರಿಕೆಟ್‌ ಕ್ಲಬ್‌ಗೆ 77 ರನ್‌ಗಳ ಜಯ.

ಆಲೂರು (1) ಕ್ರೀಡಾಂಗಣ: ಸೋಷಿಯಲ್ ಕ್ರಿಕೆಟರ್ಸ್: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 263 (ಆದರ್ಶ್‌ ಪ್ರಜ್ವಲ್ ಎಸ್. 25, ಅನೀಷ್ ಕೆ.ವಿ. 46, ಅಕ್ಷಯ್‌ ಬಲ್ಲಾಳ್‌ 37, ಅಜಿತೇಶ್‌ ಜಿ. 27, ರಾಹುಲ್ ವೆರ್ಣೆಕರ್‌ 30, ವಿ.ವೈಶಾಖ್ ಔಟಾಗದೆ 41; ಸೂರಜ್ ಎಸ್‌. ಕಾಮತ್‌ 31ಕ್ಕೆ 2, ಎಂ.ಎಸ್‌. ಭಾಂಡಗೆ 59ಕ್ಕೆ 3, ಕುಶಾಲ್‌ ಮಹೇಶ್‌ ವಾಧ್ವಾನಿ 57ಕ್ಕೆ 2). ಸರ್. ಸೈಯದ್ ಕ್ರಿಕೆಟರ್ಸ್: 49.2 ಓವರ್‌ಗಳಲ್ಲಿ 6 ವಿಕೆಟ್‌ಗೆ 264 (ನಿಕಿನ್‌ ಜೋಸ್‌ ಎಸ್‌.ಜೆ. 64, ಶ್ರೀಕರ 30, ಮೋಹಿತ್ ಬಿ.ಎ. 23, ಕ್ರಾಂತಿ ಕುಮಾರ್ 41, ಲವನೀತ್ ಸಿಸೋಡಿಯಾ 21, ಎಂ.ಎಸ್‌.ಭಾಂಡಗೆ ಔಟಾಗದೆ 63, ರಿತೇಶ್‌ ಭಟ್ಕಳ 44ಕ್ಕೆ 2). ಫಲಿತಾಂಶ: ಸರ್ ಸೈಯದ್ ಕ್ರಿಕೆಟರ್ಸ್‌ಗೆ 4 ವಿಕೆಟ್‌ಗಳ ಜಯ.

ಮೊದಲ ಸೆಮಿಫೈನಲ್‌ ಹಣಾಹಣಿಯಲ್ಲಿ ಸ್ವಸ್ತಿಕ್‌ ಯೂನಿಯನ್ ಕ್ರಿಕೆಟ್ ಕ್ಲಬ್ (1) ಹಾಗೂ ವಲ್ಚರ್ಸ್‌ ಕ್ರಿಕೆಟ್ ಕ್ಲಬ್ ಮುಖಾಮುಖಿಯಾಗಲಿದ್ದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ನಾಲ್ಕರ ಘಟ್ಟದ ಎರಡನೇ ಪಂದ್ಯದಲ್ಲಿ ಮೌಂಟ್ ಜಾಯ್‌ ಕ್ರಿಕೆಟ್‌ ಕ್ಲಬ್ ಹಾಗೂ ಸರ್ ಸೈಯದ್ ಕ್ರಿಕೆಟರ್ಸ್ ತಂಡಗಳು ಆಡಲಿವೆ. ಈ ಪಂದ್ಯ ಆಲೂರು (1) ಕ್ರೀಡಾಂಗಣದಲ್ಲಿ ನಡೆಯಲಿದೆ. ಎರಡೂ ಪಂದ್ಯಗಳು ಶನಿವಾರ ಬೆಳಿಗ್ಗೆ 9.30ಕ್ಕೆ ಆರಂಭವಾಗಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು