ದುಬೈ: ಭಾರತದಲ್ಲಿ ಆಯೋಜನೆಯಾಗಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಅರ್ಹತಾ ಪಂದ್ಯಗಳಿಗೆ ಜಿಂಬಾಬ್ವೆ ಆತಿಥ್ಯ ವಹಿಸಲಿದೆ. 2023ರ ಜೂನ್ 18ರಿಂದ ಜುಲೈ 9ರವರೆಗೆ ಈ ಪಂದ್ಯಗಳು ನಡೆಯಲಿವೆ. ಕೋವಿಡ್–19 ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಪಂದ್ಯಗಳ ವೇಳಾಪಟ್ಟಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮಂಗಳವಾರ ಬಿಡುಗಡೆ ಮಾಡಿದೆ.

ಟೂರ್ನಿಗೆ ಆತಿಥೇಯ ತಂಡವಾದ ಭಾರತ, ವಿಶ್ವ ಸೂಪರ್ ಲೀಗ್ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಇತರ ಏಳು ತಂಡಗಳೊಂದಿಗೆ ನೇರ ಅರ್ಹತೆ ಗಳಿಸಲಿದೆ. 2023ರ ವಿಶ್ವಕಪ್ ಟೂರ್ನಿಯು ಅಕ್ಟೋಬರ್–ನವೆಂಬರ್‌ನಲ್ಲಿ ನಿಗದಿಯಾಗಿದೆ.

ಸೂಪರ್ ಲೀಗ್ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಐದು ಸ್ಥಾನಗಳಲ್ಲಿರುವ ತಂಡಗಳು ಅರ್ಹತಾ ಪಂದ್ಯಗಳಲ್ಲಿ ಸೆಣಸಲಿದ್ದು, ಅಗ್ರಸ್ಥಾನ ಪಡೆಯುವ ಮೂರು ತಂಡಗಳು ವಿಶ್ವಕಪ್ ಟಿಕೆಟ್ ಗಿಟ್ಟಿಸಲಿವೆ.

‘2023ರ ಏಕದಿನ ವಿಶ್ವಕಪ್ ಟೂರ್ನಿಯನ್ನು ಅಕ್ಟೋಬರ್–ನವೆಂಬರ್‌ನಲ್ಲಿ ನಡೆಸಲು ನಿರ್ಧರಿಸಿದ್ದರಿಂದ ಅರ್ಹತಾ ಪಂದ್ಯಗಳ ವೇಳಾಪಟ್ಟಿಯನ್ನೂ ಪರಿಷ್ಕರಣೆ ಮಾಡಬೇಕಾಯಿತು. ಆ ಮೂಲಕ ಟೂರ್ನಿಯು ನಡೆಯುವ ವೇಳೆಗೆ ಅರ್ಹತೆ ಪಡೆಯುವ ತಂಡಗಳನ್ನು ನಿರ್ಧರಿಸಲು ಅನುಕೂಲವಾಗಲಿದೆ‘ ಎಂದು ಐಸಿಸಿ ಇವೆಂಟ್ಸ್ ಮುಖ್ಯಸ್ಥ ಕ್ರಿಸ್ ಟೆಟ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.