ಮಂಗಳವಾರ, ಜೂನ್ 28, 2022
20 °C

ಪುಟ್ಟ ಕುದುರೆ ಜೊತೆ ಜೀವಾ ಧೋನಿ ಆಟ: ಹೊಸ ‘ಪ್ರೇಮಕಥೆ’ ಎಂದ ನೆಟ್ಟಿಗರು

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Prajavani

ರಾಂಚಿ: ಟೀಮ್ ಇಂಡಿಯಾದ ಮಾಜಿ ನಾಯಕ ಎಂ.ಎಸ್. ಧೋನಿ ಕುದುರೆಗಳನ್ನು ತುಂಬಾ ಪ್ರೀತಿಸುತ್ತಾರೆ. ಅವರ ಫಾರ್ಮ್‌ ಹೌಸ್‌ನಲ್ಲಿ ಕುದುರೆ ರೈಡ್, ಅವುಗಳಿಗೆ ಮಾಲೀಶ್ ಮಾಡುವ ವಿಡಿಯೊಗಳನ್ನು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ಇದೀಗ, ಅಪ್ಪನಂತೆ ಮಗಳು ಜೀವಾ ಧೋನಿಗೂ ಕುದುರೆಗಳ ಕ್ರೇಜ್ ಶುರುವಾಗಿದೆ.

ಹೌದು, ಜೀವಾ ಧೋನಿ ಪುಟ್ಟ ಕುದುರೆ ಮರಿ ಜೊತೆ ಕಾಲ ಕಳೆಯುತ್ತಿರುವ ಚಿತ್ರವನ್ನು ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದು, ಅಭಿಮಾನಿಗಳು ತುಂಬಾ ಇಷ್ಟಪಟ್ಟಿದ್ದಾರೆ. ಪೋಷಕರೇ ಮಗಳು ಜೀವಾ ಇನ್‌ಸ್ಟಾಗ್ರಾಮ್ ಖಾತೆಯನ್ನು ನಿರ್ವಹಿಸುತ್ತಿದ್ದಾರೆ.

ಒಬ್ಬ ಅಭಿಮಾನಿ ‘ಹೊಸ ಪ್ರೇಮಕಥೆ’ ಎಂದು ಕಾಮೆಂಟ್ ಮಾಡಿದ್ದರೆ, ಮತ್ತೊಬ್ಬರು ‘ಅಡೋರಬಲ್ ಜೀವಾ ಅಂಡ್ ರೋಜಿ’ ಎಂದು ಹೇಳಿದ್ದಾರೆ. ಹೀಗೆ ಧೋನಿ ಅಭಿಮಾನಿಗಳಿಂದ ಹತ್ತು ಹಲವು ಕಾಮೆಂಟ್ ಬಂದಿದೆ.

ಐಪಿಎಲ್ ತಾತ್ಕಾಲಿಕವಾಗಿ ರದ್ದಾದ ಬಳಿಕ ಧೋನಿ ತಮ್ಮ ತೋಟದ ಮನೆಯಲ್ಲಿ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಧೋನಿ ಕುದುರೆ ರೈಡ್, ಮಾಲೀಶ್ ಮಾಡುವ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಸಾಕ್ಷಿ ಧೋನಿ ಹಂಚಿಕೊಂಡಿದ್ದರು.

ಐಪಿಎಲ್ 2021 ಅರ್ಧಕ್ಕೆ ನಿಂತಾಗ ಅಂಕಪಟ್ಟಿಯಲ್ಲಿ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಎರಡನೇ ಸ್ಥಾನದಲ್ಲಿತ್ತು. ಐಪಿಎಲ್ ಆಟಗಾರರಿಗೇ ಕೋವಿಡ್ ಪಾಸಿಟಿವ್ ಆಗಿದ್ದರಿಂದ ಪಂದ್ಯಾವಳಿಯನ್ನು ಮುಂದೂಡಲಾಗಿತ್ತು.

ಸಿಎಸ್‌ಕೆ ತಂಡದ ಸಹ ಸಿಬ್ಬಂದಿ ಲಕ್ಷ್ಮಿಪತಿ ಬಾಲಾಜಿ ಮತ್ತು ಮೈಕೆಲ್ ಹಸ್ಸಿ ಅವರಿಗೂ ಕೋವಿಡ್ ಪಾಸಿಟಿವ್ ಆಗಿತ್ತು.

ಇದೀಗ, ದುಬೈನಲ್ಲಿ ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ನಲ್ಲಿ ಉಳಿದಿರುವ ಐಪಿಎಲ್ ಪಂದ್ಯಗಳನ್ನು ನಡೆಸಲು ಬಿಸಿಸಿಐ ನಿರ್ಧರಿಸಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು