ಮಂಗಳವಾರ, ಜನವರಿ 28, 2020
20 °C
ಖೇಲೊ ಇಂಡಿಯಾ ಕ್ರೀಡಾಕೂಟ

ರಾಜ್ಯ ಸೈಕ್ಲಿಂಗ್ ತಂಡ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಗುವಾಹಟಿಯಲ್ಲಿ ಆಯೋಜನೆಯಾಗಿರುವ ಖೇಲೊ ಇಂಡಿಯಾ ಯೂತ್‌ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ರಾಜ್ಯ ಸೈಕ್ಲಿಂಗ್ ತಂಡವನ್ನು ಗುರುವಾರ ಕರ್ನಾಟಕ ಸೈಕ್ಲಿಂಗ್‌ ಸಂಸ್ಥೆ ಪ್ರಕಟಿಸಿದೆ.

ಈ ಕ್ರೀಡಾಕೂಟದಲ್ಲಿ ಸೈಕ್ಲಿಂಗ್‌ ಮೊದಲ ಬಾರಿಗೆ ಸೇರ್ಪಡೆಯಾಗಿದ್ದು, ಜ. 12ರಿಂದ 16ರ ವರೆಗೆ ಸ್ಪರ್ಧೆಗಳು ಜರುಗಲಿವೆ.

ಮೊದಲ ಎರಡು ದಿನ ರೋಡ್‌ ಸೈಕ್ಲಿಂಗ್‌ ಮತ್ತು ನಂತರದ ಮೂರು ದಿನ ಟ್ರ್ಯಾಕ್ ವಿಭಾಗದ ಸ್ಪರ್ಧೆಗಳು ನಡೆಯಲಿವೆ. ಅಲ್ಕಾ ಪಡತಾರೆ, ವಿಠ್ಠಲ ಬುರ್ಜಿ, ಭೀಮಪ್ಪ ವಿಜಯನಗರ ಮತ್ತು ಬಸವರಾಜ ಗುಳೇದ ತಂಡದ ಸಿಬ್ಬಂದಿಯಾಗಿದ್ದಾರೆ.

ತಂಡ ಇಂತಿದೆ: ಪುರುಷರ ವಿಭಾಗ, 21 ವರ್ಷದೊಳಗಿನವರು: ವೆಂಕಪ್ಪ ಕೆಂಗಲಗುತ್ತಿ, ಜಿ.ಟಿ. ಗಗನರೆಡ್ಡಿ, ವಿಶ್ವನಾಥ ಗಡಾದ, ಸಚಿನ ರಂಜಣಗಿ, ಗಣೇಶ ಕುಡಿಗಾನೂರ, ರಾಜು ಭಾಟಿ.

ಬಾಲಕರ ವಿಭಾಗ, 17 ವರ್ಷದೊಳ ಗಿನವರು: ಮಧು ಕಾಡಾಪುರ, ಮಲ್ಲಿ ಕಾರ್ಜುನ ಯಾದವಾಡ, ರಾಘವೇಂದ್ರ ವಂದಾಲ, ಸಂಪತ್ ಪಾಸ್ಮೇಲ, ಪ್ರತಾಪ ಪಡಚಿ.  ಮಹಿಳೆಯರ ವಿಭಾಗ, 21 ವರ್ಷದೊಳಗಿನವರು: ದಾನಮ್ಮ ಚಿಚಖಂಡಿ, ಸಹನಾ ಕುಡಿಗಾನೂರ, ಕೀರ್ತಿ ರಂಗಸ್ವಾಮಿ, ಸೌಮ್ಯಾ ಅಂತಾ ಪೂರ, ಮೇಘಾ ಗೂಗಾಡ.

17 ವರ್ಷದೊಳಗಿನವರು: ಅಂಕಿತಾ ರಾಠೋಡ, ಅಕ್ಷತಾ ಭೂತನಾಳ, ಭಾವನಾ ಪಾಟೀಲ, ಭಾಗ್ಯಶ್ರೀ ಮಠಪತಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು