ಶನಿವಾರ, ಮೇ 21, 2022
27 °C
ಚುನಾವಣೆ ಪ್ರಕಟಿಸಿದ ಹೊಸ ಅಧ್ಯಕ್ಷ ಸುನಿಲ್‌

ಆರ್ಚರಿ ಸಂಸ್ಥೆಯಲ್ಲಿ ವಿವಾದ

ಪಿಟಿಐ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಭಾರತದ ಆರ್ಚರಿ ಸಂಸ್ಥೆ ಬುಧವಾರ ಮತ್ತೊಂದು ವಿವಾದದಲ್ಲಿ ಸಿಲುಕಿದೆ. ಸಂಸ್ಥೆಯ ಹಂಗಾಮಿ ಅಧ್ಯಕ್ಷ ಸುನಿಲ್‌ ಶರ್ಮಾ ಇದೇ 26ರಂದು ಸಂಸ್ಥೆಯ ಪದಾಧಿಕಾರಿಗಳ ಸ್ಥಾನಕ್ಕೆ ಚುನಾವಣೆ ನಡೆಯಲಿದೆ ಎಂದು ಪ್ರಕಟಿಸಿದ್ದಾರೆ. ಆದರೆ ಕಾರ್ಯದರ್ಶಿ ಮಹಾಸಿಂಗ್‌ ಇದನ್ನು ಕಾನೂನು ಬಾಹಿರ ಎಂದು ಹೇಳಿ ತಿರಸ್ಕರಿಸಿದ್ದಾರೆ. 

ಹೋದ ವರ್ಷ ಸುಪ್ರೀಂ ಕೋರ್ಟ್‌ ಸಂಸ್ಥೆಯ ಚುನಾವಣೆಗೆ ತಡೆ ನೀಡಿತ್ತು. ಅಧ್ಯಕ್ಷ ಬಿವಿಪಿ ರಾವ್‌ ಅವರ ರಾಜೀನಾಮೆಯ ನಂತರ ಸುನಿಲ್ ಶರ್ಮಾ ಮೇ 4ರಂದು ಅಧ್ಯಕ್ಷ ಸ್ಥಾನಕ್ಕೇರಿದ್ದರು. ಚುನಾವಣಾ ಪ್ರಕ್ರಿಯೆಗಳನ್ನು ನಡೆಸುವುದು ಅವರ ಪ್ರಮುಖ ಜವಾಬ್ದಾರಿ ಆಗಿತ್ತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.