ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್‌: ಕರ್ನಾಟಕ ತಂಡ ಜಯಭೇರಿ

Published 25 ನವೆಂಬರ್ 2023, 12:54 IST
Last Updated 25 ನವೆಂಬರ್ 2023, 12:54 IST
ಅಕ್ಷರ ಗಾತ್ರ

ಬೆಂಗಳೂರು: ಅನಾಯಾ ಸುಸಾನ್ ಥಾಮಸ್ ಮತ್ತು ಕವಿಯಾ ಪಕ್ಕಿರಿಸಾಮಿ ಅವರ ಆಟದ ಬಲದಿಂದ ಕರ್ನಾಟಕ ತಂಡವು 28ನೇ ಮಹಿಳೆಯರ ರಾಷ್ಟ್ರೀಯ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 4–1ರಿಂದ ಅಸ್ಸಾಂ ತಂಡದ ವಿರುದ್ಧ ಸುಲಭ ಜಯ ಸಾಧಿಸಿತು.

ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೈದಾನ್ ಶ್ರೀ ನರ್ಜಾರಿ ಅವರು 44ನೇ ನಿಮಿಷದಲ್ಲಿ ಗೋಲು ಗಳಿಸಿ ಅಸ್ಸಾಂಗೆ ಆರಂಭಿಕ ಮುನ್ನಡೆ ಒದಗಿಸಿದರು. ಆದರೆ, ಕರ್ನಾಟಕ ತಂಡದ ಅನಾಯಾ 76ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿ ಗೋಲನ್ನು ಸಮಬಲಗೊಳಿಸಿದರು. ಅದಾದ ಮೂರೇ ನಿಮಿಷದಲ್ಲಿ ಅನಾಯಾ ಮತ್ತೊಂದು ಗೋಲು ತಂದಿತ್ತು ಅಂತರವನ್ನು ಹೆಚ್ಚಿಸಿದರು. ಕೊನೆಯ ಹಂತದಲ್ಲಿ ಕವಿಯಾ (87, 90ನೇ) ಎರಡು ಬಾರಿ ಚೆಂಡನ್ನು ಗುರಿ ಸೇರಿಸಿ ಕರ್ನಾಟಕ ತಂಡದ ಗೆಲುವಿನ ಅಂತರವನ್ನು ಮತ್ತಷ್ಟು ಹೆಚ್ಚಿಸಿದರು.

ಮತ್ತೊಂದು ಪಂದ್ಯದಲ್ಲಿ ಚಂಡೀಗಢ 1–0ಯಿಂದ ಕೇರಳ ತಂಡವನ್ನು ಮಣಿಸಿದರೆ, ಸಿಕ್ಕಿಂ ತಂಡವು 6–0ಯಿಂದ ತ್ರಿಪುರ ತಂಡವನ್ನು ಹಿಮ್ಮೆಟ್ಟಿಸಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT