ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಘಾತದಲ್ಲಿ ಫುಟ್‌ಬಾಲ್ ಆಟಗಾರ ಮೊನೀಷ್ ಸಾವು

Published 21 ಜನವರಿ 2024, 18:16 IST
Last Updated 21 ಜನವರಿ 2024, 18:16 IST
ಅಕ್ಷರ ಗಾತ್ರ

ಬೆಂಗಳೂರು: ಶನಿವಾರ ರಾತ್ರಿ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಫುಟ್‌ಬಾಲ್ ಆಟಗಾರ ಮೊನೀಷ್ ಕೆ (28) ಭಾನುವಾರ ಮಧ್ಯಾಹ್ನ ಸಾವನ್ನಪ್ಪಿದರು. 

ಬೆಂಗಳೂರು ಈಗಲ್ಸ್‌ ತಂಡದಲ್ಲಿ ಆಡುತ್ತಿದ್ದ ಮೊನೀಷ್ ಹೊರಮಾವು ಸಮೀಪ ನಡೆದ ಅಫಘಾತದಲ್ಲಿ ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸಲಿಲ್ಲ.

ಅವರಿಗೆ ಅಪ್ಪ, ಅಮ್ಮ ಹಾಗೂ ಅಕ್ಕ ಇದ್ದಾರೆ.

ಸೆಂಟರ್ ಮಿಡ್‌ಫೀಲ್ಡರ್ ಆಗಿದ್ದ ಮೊನೀಷ್ , ಬೆಂಗಳೂರು ಈಗಲ್ಸ್‌, ಪರಿಕ್ರಮ ಎಫ್‌ಸಿ, ಡೆಕ್ಕನ್ ಎಫ್‌ಸಿ, ಎಡಿಇ, ಯಂಗ್ ಚಾಲೆಂರ್ಸ್ ಎಫ್‌ಸಿ ಮತ್ತು ಸಿಐಎಲ್ ತಂಡಗಳಲ್ಲಿಯೂ ಈ ಹಿಂದೆ ಆಡಿದ್ದರು ಎಂದು ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಸಂಸ್ಥೆಯು (ಬಿಡಿಎಫ್‌ಎ) ಪ್ರಕಟಣೆಯಲ್ಲಿ ತಿಳಿಸಿದೆ.

‘ಯುವ ಫುಟ್‌ಬಾಲ್ ಆಟಗಾರನ ಸಾವಿನಿಂದ ದುಃಖವಾಗಿದೆ’ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಎಕ್ಸ್‌ (ಟ್ವಿಟರ್) ಖಾತೆಯಲ್ಲಿ ಸಂದೇಶ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT