ಮಂಗಳವಾರ, ಫೆಬ್ರವರಿ 18, 2020
24 °C
ಎಎಫ್‌ಸಿ ಕಪ್ ಫುಟ್‌ಬಾಲ್ ಟೂರ್ನಿಯ ಅರ್ಹತಾ ಸುತ್ತು: ಪಾರೊ ಎದುರು ಹಣಾಹಣಿ

ಬಿಎಫ್‌ಸಿಗೆ ಅಂತಿಮ ಸುತ್ತು ಪ್ರವೇಶದ ತವಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಎದುರಾಳಿಗಳನ್ನು ಅವರ ನೆಲದಲ್ಲೇ ಮಣಿಸಿ ತವರಿಗೆ ಬಂದಿರುವ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ಎಎಫ್‌ಸಿ ಕಪ್ ಅರ್ಹತಾ ಸುತ್ತಿನ ಅಂತಿಮ ಹಂತಕ್ಕೆ ಪ್ರವೇಶಿಸುವ ಗುರಿಯೊಂದಿಗೆ ಬುಧವಾರ ಕಣಕ್ಕೆ ಇಳಿಯಲಿದೆ.

ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಅರ್ಹತಾ ಸುತ್ತಿನ ಮೊದಲ ಹಂತದ ಎರಡನೇ ಲೆಗ್ ಪಂದ್ಯದಲ್ಲಿ ಆತಿಥೇಯರು ಭೂತಾನ್‌ನ ಪಾರೊ ಎಫ್‌ಸಿ ವಿರುದ್ಧ ಗೆಲ್ಲುವ ಭರವಸೆಯಲ್ಲಿದ್ದಾರೆ. ಕಳೆದ ವಾರ ನಡೆದ ಮೊದಲ ಲೆಗ್‌ ಪಂದ್ಯದಲ್ಲಿ ಶೆಂಬೊಯ್ ಹಾಕಿಪ್ ಗಳಿಸಿದ ಏಕೈಕ ಗೋಲಿನ ಬಲದಿಂದ ಬಿಎಫ್‌ಸಿ ಜಯ ಸಾಧಿಸಿತ್ತು. ಬುಧವಾರದ ಪಂದ್ಯದಲ್ಲಿ ಡ್ರಾ ಸಾಧಿಸಿದರೂ ಬಿಎಫ್‌ಸಿ ಮುಂದಿನ ಹಂತದಲ್ಲಿ ಆಡಲು ಅರ್ಹತೆ ಗಳಿಸಲಿದೆ.

ಫೆಬ್ರುವರಿ ತಿಂಗಳಲ್ಲಿ ಬಿಎಫ್‌ಸಿಗೆ ಪಂದ್ಯದ ಮೇಲೆ ಪಂದ್ಯ. ಐಎಸ್‌ಎಲ್‌ ಟೂರ್ನಿಯ ಪಂದ್ಯಗಳು ಸೇರಿದಂತೆ ಈ ತಿಂಗಳಲ್ಲಿ ತಂಡಕ್ಕೆ ಒಟ್ಟು ಎಂಟು ಹಣಾಹಣಿಗಳು. ಆದರೆ ಇದನ್ನು ಪೂರಕವಾಗಿ ತೆಗೆದು ಕೊಂಡಿ ರುವ ಬಿಎಫ್‌ಸಿ ಕೋಚ್ ಕಾರ್ಲಸ್ ಕ್ವದ್ರತ್ ‘ಇಂಥ ಪರಿಸ್ಥಿತಿಯಿಂದ ಯುವ ಆಟಗಾರರು ಅವಕಾಶಗಳನ್ನು ಪಡೆದುಕೊಳ್ಳಲಿದ್ದಾರೆ’ ಎಂದು ಹೇಳಿದರು.

ಭೂತಾನ್‌ನ ಥಿಂಪುವಿನಲ್ಲಿ ನಡೆದ ಪಂದ್ಯದಲ್ಲಿ ನೈರೊಮ್ ರೋಷನ್ ಸಿಂಗ್ ಮತ್ತು ವಿಶ್ವ ದಾರ್ಜಿ ಪದಾರ್ಪಣೆ ಮಾಡಿದ್ದರು. ಆರಂಭ: ಸಂಜೆ 7.30

***

ಎರಡು ಲೆಗ್‌ಗಳ ಹಣಾಹಣಿಯಲ್ಲಿ ತವರಿನಾಚೆ ಆಡಿದ ಪಂದ್ಯದಲ್ಲಿ ಗೋಲು ಗಳಿಸುವುದು ಬಹಳ ಮುಖ್ಯ. ಈ ಸವಾಲನ್ನು ನಾವು ಮೀರಿದ್ದೇವೆ. ಆದ್ದರಿಂದ ನಿರಾಳವಾಗಿದ್ದೇವೆ
-ಕಾರ್ಲಸ್ ಕ್ವದ್ರತ್ ಬಿಎಫ್‌ಸಿ ಕೋಚ್ 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)