ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್‌: 20 ವರ್ಷದೊಳಗಿನವರ ರಾಷ್ಟ್ರೀಯ ಟೂರ್ನಿ ಆರಂಭಕ್ಕೆ ನಿರ್ಧಾರ

Published 21 ಜುಲೈ 2023, 15:58 IST
Last Updated 21 ಜುಲೈ 2023, 15:58 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮುಂದಿನ ವರ್ಷದಿಂದ 20 ವರ್ಷದೊಳಗಿನವರ ಪುರುಷರ ರಾಷ್ಟ್ರೀಯ ಫುಟ್‌ಬಾಲ್ ಚಾಂಪಿಯನ್‌ಷಿಪ್‌ ಆಯೋಜಿಸಲು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್ಎಫ್‌) ನಿರ್ಧರಿಸಿದೆ.

ಈ ಟೂರ್ನಿಯನ್ನು ಪ್ರತಿವರ್ಷ ನಡೆಸಲು ಉದ್ದೇಶಿಸಲಾಗಿದ್ದು, ಚೊಚ್ಚಲ ಚಾಂಪಿಯನ್‌ಷಿಪ್‌ 2024ರ ಜನವರಿ– ಫೆಬ್ರುವರಿ ತಿಂಗಳಲ್ಲಿ ನಡೆಯಲಿದೆ. 2005ರ ಜ.1 ಮತ್ತು 2007ರ ಡಿ.31ರ ಒಳಗೆ ಜನಿಸಿದವರು ಮೊದಲ ಋತುವಿನ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅರ್ಹರಾಗಿರುವರು.

‘ಫೆಡರೇಷನ್‌ನ ತಾಂತ್ರಿಕ ವಿಭಾಗ ಮತ್ತು ಸ್ಪರ್ಧಾ ಸಮಿತಿಯ ಜತೆಗಿನ ವಿಸ್ತೃತ ಚರ್ಚೆಯ ಬಳಿಕ ಈ ಟೂರ್ನಿಯನ್ನು ಆರಂಭಿಸುತ್ತಿದ್ದೇವೆ’ ಎಂದು ಎಐಎಫ್‌ಎಫ್‌ ಅಧ್ಯಕ್ಷ ಕಲ್ಯಾಣ್‌ ಚೌಬೆ ಹೇಳಿದರು.

‘ಸಂತೋಷ್‌ ಟ್ರೋಫಿ ಟೂರ್ನಿಗೆ ತಮ್ಮ ರಾಜ್ಯದ ಸೀನಿಯರ್‌ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾದ 20 ವರ್ಷದೊಳಗಿನ ಆಟಗಾರರಿಗೆ ಪ್ರತಿಭೆ ತೋರಿಸಲು ಹೆಚ್ಚಿನ ಅವಕಾಶಗಳನ್ನು ಒದಗಿಸುವುದು ಈ ಚಾಂಪಿಯನ್‌ಷಿಪ್‌ನ ಮುಖ್ಯ ಉದ್ದೇಶ’ ಎಂದು ತಿಳಿಸಿದರು.

ಎಐಎಫ್‌ಎಫ್‌ ಈ ಹಿಂದೆ ಆಯೋಜಿಸುತ್ತಿದ್ದ 21 ವರ್ಷದೊಳಗಿನವರ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ಕೆಲ ವರ್ಷಗಳ ಹಿಂದೆ ಸ್ಥಗಿತಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT