ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೇಷ್ಯಾ ವಿರುದ್ಧ ಸೌಹಾರ್ದ ಪಂದ್ಯ: ಭಾರತ ತಂಡದಲ್ಲಿ 26 ಸಂಭಾವ್ಯರು

Published 14 ಮಾರ್ಚ್ 2024, 15:47 IST
Last Updated 14 ಮಾರ್ಚ್ 2024, 15:47 IST
ಅಕ್ಷರ ಗಾತ್ರ

ನವದೆಹಲಿ: ಮಲೇಷ್ಯಾ ವಿರುದ್ಧ ಇದೇ 22 ಮತ್ತು 25ರಂದು ಕೌಲಾಲಂಪುರದಲ್ಲಿ ನಡೆಯುವ ಎರಡು ಸೌಹಾರ್ದ ಪಂದ್ಯಗಳಿಗೆ 23 ವರ್ಷದೊಳಗಿನವರ ತಂಡದ ಭಾರತ ಶಿಬಿರಕ್ಕೆ 26 ಸಂಭಾವ್ಯರನ್ನು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ ಗುರುವಾರ ಪ್ರಕಟಿಸಿದೆ.

ಶಿಬಿರವು ಶುಕ್ರವಾರ ನವದೆಹಲಿಯಲ್ಲಿ ಆರಂಭವಾಗಲಿದ್ದು, 23 ಆಟಗಾರರ ಅಂತಿಮ ತಂಡವು ಮಾರ್ಚ್ 20ರಂದು ಕೌಲಾಲಂಪುರಕ್ಕೆ ಪ್ರಯಾಣ ಬೆಳೆಸಲಿದೆ. ನಾರ್ತ್ ಈಸ್ಟ್ ಯುನೈಟೆಡ್ ಎಫ್‌ಸಿ ಸಹಾಯಕ ಕೋಚ್ ನೌಶಾದ್ ಮೂಸಾ ಅವರನ್ನು ತಂಡಕ್ಕೆ ಮುಖ್ಯ ಕೋಚ್ ಆಗಿ ನೇಮಿಸಲಾಗಿದೆ. ನೊಯೆಲ್ ವಿಲ್ಸನ್ ತಂಡದ ಸಹಾಯಕ ಕೋಚ್ ಆದರೆ, ದೀಪಂಕರ್ ಚೌಧರಿ ಗೋಲ್ ಕೀಪರ್ ಕೋಚ್ ಆಗಿದ್ದಾರೆ.

ಸಂಭಾವ್ಯರು:

ಗೋಲ್‌ಕೀಪರ್ಸ್‌: ಅರ್ಶ್ ಅನ್ವರ್ ಶೇಖ್, ಪ್ರಭುಸುಖಾನ್ ಸಿಂಗ್ ಗಿಲ್, ವಿಶಾಲ್ ಯಾದವ್.

ಡಿಫೆಂಡರ್ಸ್: ವಿಕಾಶ್ ಯುಮ್ನಮ್, ಚಿಂಗಂಬಮ್ ಶಿವಾಲ್ಡೊ ಸಿಂಗ್, ಹಾರ್ಮಿಪಾಮ್ ರುವಾಹ್, ನರೇಂದರ್, ರಾಬಿನ್ ಯಾದವ್, ಸಂದೀಪ್ ಮಂಡಿ.

ಮಿಡ್‌ಫೀಲ್ಡರ್ಸ್‌: ಅಭಿಷೇಕ್ ಸೂರ್ಯವಂಶಿ, ಬ್ರಿಸನ್ ಫರ್ನಾಂಡಿಸ್, ಮಾರ್ಕ್ ಜೊಥನ್‌ಪುಯಾ, ಮೊಹಮ್ಮದ್ ಐಮೆನ್, ಫಿಜಾಮ್ ಸನಾತೋಯ್ ಮೀಥೆಯಿ, ಥೋಯ್ಬಾ ಸಿಂಗ್ ಮೊಯಿರಾಂಗ್ಥೆಮ್, ವಿಬಿನ್ ಮೋಹನನ್. 

ಫಾರ್ವರ್ಡ್ಸ್‌: ಅಬ್ದುಲ್ ರಬೀಹ್, ಗುರುಕಿರತ್ ಸಿಂಗ್, ಇರ್ಫಾನ್ ಯಾದವಾಡ, ಇಸಾಕ್ ವನ್‌ಲಾಲ್ರುಅತ್‌ಫೆಲಾ, ಖುಮಾಂತೇಮ್ ನಿಂಥೋಯಿಂಗನ್‌ಬಾ ಮೀಥೆಯಿ, ಮೊಹಮ್ಮದ್ ಸನನ್, ಪಾರ್ತಿಬ್ ಸುಂದರ್ ಗೊಗೊಯ್, ಸಮೀರ್ ಮುರ್ಮು, ಶಿವಶಕ್ತಿ ನಾರಾಯಣನ್, ವಿಷ್ಣು ಪುತಿಯಾ ವಳಪ್ಪಿಲ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT