ಬುಧವಾರ, ಏಪ್ರಿಲ್ 14, 2021
31 °C
ಕೆಎಸ್‌ಎಫ್‌ಎ ಮಹಿಳಾ ಫುಟ್‌ಬಾಲ್‌ ಲೀಗ್‌

ಅಂಜು ನಾಲ್ಕು ಗೋಲು: ಪರಿಕ್ರಮ ಜಯಭೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಂಜು ಗಳಿಸಿದ ನಾಲ್ಕು ಗೋಲು ಹಾಗೂ ಶಬಾನಾ ಸೆಲ್ವಂ ಅವರ ಹ್ಯಾಟ್ರಿಕ್ ಬಲದಿಂದ ಪರಿಕ್ರಮ ಎಫ್‌ಸಿ ತಂಡವು ರಾಜ್ಯ ಫುಟ್‌ಬಾಲ್ ಸಂಸ್ಥೆಯ ಸೂಪರ್‌ ಡಿವಿಷನ್‌ ವಿಮೆನ್ಸ್ ಲೀಗ್ ಟೂರ್ನಿಯಲ್ಲಿ ಭರ್ಜರಿ ಜಯ ಸಾಧಿಸಿತು. ಮಂಗಳವಾರ ನಡೆದ ಪಂದ್ಯದಲ್ಲಿ 8–0ಯಿಂದ ಬೆಂಗಳೂರು ಸಾಕರ್ ಗೆಲಾಕ್ಸಿ ತಂಡವನ್ನು ಪರಾಭವಗೊಳಿಸಿತು.

ವಿಜೇತ ತಂಡದ ಪರ ಅಂಜು 19, 25, 45 ಹಾಗೂ 69ನೇ ನಿಮಿಷಗಳಲ್ಲಿ ಕಾಲ್ಚಳಕ ತೋರಿದರು. ಶಬಾನಾ (42, 73, 78ನೇ ನಿಮಿಷ) ಮೋಡಿ ಮಾಡಿದರು. ಇನ್ನೊಂದು ಗೋಲು ಪ್ರಿಯಾ (56ನೇ ನಿಮಿಷ) ಅವರ ಮೂಲಕ ಬಂದಿತು.

ಮತ್ತೊಂದು ಪಂದ್ಯದಲ್ಲಿ ಬೆಂಗಳೂರು ಬ್ರೇವ್ಸ್ 2–2 ಗೋಲುಗಳೊಂದಿಗೆ ಮಾತೃ ಪ್ರತಿಷ್ಠಾನ ಎಫ್‌ಸಿ ತಂಡದೊಂದಿಗೆ ಡ್ರಾ ಸಾಧಿಸಿತು.

ಬ್ರೇವ್ಸ್ ತಂಡಕ್ಕೆ ಅಭಿರಾಮಿ (52ನೇ ನಿಮಿಷ) ಹಾಗೂ ಆರತಿ (65ನೇ ನಿಮಿಷ) ಮುನ್ನಡೆ ತಂದುಕೊಟ್ಟಿದ್ದರು. ಆದರೆ ಮಾತೃ ಪ್ರತಿಷ್ಠಾನದ ಅಲೀಶಾ ಜಾವರೆಸ್‌ ಹಾಗೂ ಸಪ್ನಾ ರಾಜಪುರೆ ಕ್ರಮವಾಗಿ 73 ಹಾಗೂ 79ನೇ ನಿಮಿಷಗಳಲ್ಲಿ ಕಾಲ್ಚಳಕ ತೋರುವ ಮೂಲಕ ಸಮಬಲ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಬುಧವಾರ ನಡೆಯುವ ಮೊದಲ ಪಂದ್ಯದಲ್ಲಿ ರೆಬೆಲ್ಸ್ ವಿಮೆನ್ಸ್ ಎಫ್‌ಸಿ–ಇಂಡಿಯನ್ ಫುಟ್‌ಬಾಲ್ ಫ್ಯಾಕ್ಟರಿ ಸೆಣಸಲಿವೆ. ಮತ್ತೊಂದು ಹಣಾಹಣಿಯಲ್ಲಿ ಮುಸಲಾ ಯುನೈಟೆಡ್‌ ಎಫ್‌ಸಿ– ಕಿಕ್‌ಸ್ಟಾರ್ಟ್‌ ಎಫ್‌ಸಿ ಮುಖಾಮುಖಿಯಾಗಲಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು