ಶನಿವಾರ, ಫೆಬ್ರವರಿ 27, 2021
30 °C
ಬಿಡಿಎಫ್‌ಎ ಸೂಪರ್ ಡಿವಿಷನ್‌ ಲೀಗ್ ಫುಟ್‌ಬಾಲ್‌ ಟೂರ್ನಿ

ಗೌತಮ್‌, ಮಜುಂದಾರ್ ಹ್ಯಾಟ್ರಿಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಆಯಿನಮ್ ಗೌತಮ್ ಸಿಂಗ್‌ ಹಾಗೂ ಡಿಪ್‌ ಮಜುಂದಾರ್ ಅವರು ಗಳಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಎಎಸ್‌ಸಿ ಆ್ಯಂಡ್‌ ಸೆಂಟರ್ ಎಫ್‌ಸಿ ತಂಡವು ಬಿಡಿಎಫ್‌ಎ ಸೂಪರ್ ಡಿವಿಷನ್‌ ಲೀಗ್ ಫುಟ್‌ಬಾಲ್‌ ಚಾಂಪಿಯನ್‌ಷಿಪ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿತು. ಅಶೋಕನಗರದ ಫುಟ್‌ಬಾಲ್ ಕ್ರೀಡಾಂಗಣಲ್ಲಿ ಸೋಮವಾರ ನಡೆದ ಹಣಾಹಣಿಯಲ್ಲಿ 8–0ಯಿಂದ ಇನ್‌ಕಮ್ ಟ್ಯಾಕ್ಸ್ ಎಫ್‌ಸಿ ಎದುರು ಗೆದ್ದಿತು.

ಗೌತಮ್ ಸಿಂಗ್‌ 17, 30 ಹಾಗೂ 54ನೇ ನಿಮಿಷಗಳಲ್ಲಿ ಹಾಗೂ ಮಜುಂದಾರ್‌ 80, 82 ಹಾಗೂ 89ನೇ ನಿಮಿಷಗಳಲ್ಲಿ ಕಾಲ್ಚಳಕ ತೋರಿದರು. ಎರಡು ಗೋಲುಗಳನ್ನು ದೀಪಕ್‌ ಸಿಂಗ್‌ (45 ಹಾಗೂ 84ನೇ ನಿ.)ದಾಖಲಿಸಿದರು.

ಮತ್ತೊಂದು ಪಂದ್ಯದಲ್ಲಿ ಎಫ್‌ಸಿ ಬೆಂಗಳೂರು ಯುನೈಟೆಡ್ ತಂಡವು 1–0ಯಿಂದ ಸ್ಟೂಡೆಂಟ್ಸ್ ಯೂನಿಯನ್ ಎಫ್‌ಸಿ ಎದುರು ಗೆದ್ದಿತು. ವಿಜೇತ ತಂಡದ ಪರ 55ನೇ ನಿಮಿಷದಲ್ಲಿ ರೊನಾಲ್ಡೊ ಆಗಸ್ಟೊ ಅಂಟೋನಿಯೊ ಒಲಿವೆರಾ ಗೋಲು ತಂದರು.

ಮಂಗಳವಾರ ನಡೆಯುವ ಪಂದ್ಯಗಳಲ್ಲಿ ಎಡಿಇ ಎಫ್‌ಸಿ– ಎಂಇಜಿ ಆ್ಯಂಡ್ ಸೆಂಟರ್ ಎಫ್‌ಸಿ, ಬೆಂಗಳೂರು ಡ್ರೀಮ್‌ ಯುನೈಟೆಡ್ ಎಫ್‌ಸಿ– ಬೆಂಗಳೂರು ಇಂಡಿಪೆಂಡೆಂಟ್‌ ಎಫ್‌ಸಿ ಸೆಣಸಲಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು