ಕೋಲ್ಕತ್ತ: ತವರಿನ ಪ್ರೇಕ್ಷಕರೆದುರು ಅಮೋಘ ಆಟವಾಡಿದ ಎಟಿಕೆ ತಂಡ, ಐಎಸ್ಎಲ್ ಫುಟ್ಬಾಲ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಶುಕ್ರವಾರ ಹೈದರಾಬಾದ್ ತಂಡವನ್ನು 5–0 ಗೋಲುಗಳಿಂದ ಸುಲಭವಾಗಿ ಸೋಲಿಸಿತು.

ಸಾಲ್ಟ್ಲೇಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯರು ವಿರಾಮದ ವೇಳೆಗೇ 3–0 ಗೋಲುಗಳಿಂದ ಮುಂದಿದ್ದರು. ಡೇವಿಡ್ ವಿಲಿಯಮ್ಸ್ ಎರಡು ಗೋಲುಗಳನ್ನು (25 ಮತ್ತು 44ನೇ ನಿಮಿಷ) ಮತ್ತು ರಾಯ್ ಕೃಷ್ಣ (27ನೇ ನಿಮಿಷ) ಒಂದು ಗೋಲನ್ನು ಗಳಿಸಿದ್ದರು.

ಸಬ್ಸ್ಟಿಟ್ಯೂಟ್ ಆಗಿದ್ದ ಸ್ಪೇನ್ನ ಇಡು ಗಾರ್ಸಿಯಾ, ಪಂದ್ಯ ಮುಕ್ತಾಯಕ್ಕೆ ಕೆಲ ನಿಮಿಷಗಳಿದ್ದಾಗ ಎರಡು ಗೋಲುಗಳ ಮೂಲಕ ಎಟಿಕೆ ಗೆಲುವಿನ ಅಂತರ ಹೆಚ್ಚಿಸಿದರು. ಎರಡು ನಿಮಿಷಗಳಿದ್ದಾಗ ಪ್ರಬಿರ್ ದಾಸ್ ರಕ್ಷಣೆ ಆಟಗಾರರನ್ನು ವಂಚಿಸಿ ಪಾಸ್ ಮಾಡಿದ ಚೆಂಡನ್ನು ಗಾರ್ಸಿಯಾ ಗುರಿ ಮುಟ್ಟಿಸಿದರು. ಅಂತಿಮ ಸೀಟಿ ಊದಲು ಕೆಲವೇ ಕ್ಷಣಗಳಿದ್ದಾಗ (90+4) ಮತ್ತೊಮ್ಮೆ ಪ್ರಬಿರ್ ದಾಸ್ ಕ್ರಾಸ್ ಮಾಡಿದ ಚೆಂಡನ್ನು ಗಾರ್ಸಿಯಾ ಗೋಲಿನೊಳಕ್ಕೆ ಉತ್ತಮವಾಗಿ ಹೆಡ್ ಮಾಡಿದರು.

ಎರಡು ಬಾರಿಯ ಚಾಂಪಿಯನ್ನರಾದ ಎಟಿಕೆ ಮೊದಲ ಪಂದ್ಯದಲ್ಲಿ ಕೇರಳ ತಂಡಕ್ಕೆ ಮಣಿದಿತ್ತು.

ಇಂದಿನ ಪಂದ್ಯ|

ನಾರ್ತ್ ಈಸ್ಟ್ ಯುನೈಟೆಡ್– ಒಡಿಶಾ ಎಫ್ಸಿ

ಇಂದಿರಾ ಗಾಂಧಿ ಸ್ಟೇಡಿಯಂ, ಗುವಾಹಟಿ

ರಾತ್ರಿ 7.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.