ಗುರುವಾರ , ಮೇ 6, 2021
26 °C

ಎಟಿಕೆಎಂಬಿ ಸೇರಿದ ಲಿಸ್ಟನ್ ಕೊಲ್ಯಾಕೊಗೆ ದಾಖಲೆ ಮೊತ್ತ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಹೈದರಾಬಾದ್: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಆಡುವ ಎಟಿಕೆ ಮೋಹನ್ ಬಾಗನ್ ತಂಡ ಫಾರ್ವರ್ಡ್‌ ಆಟಗಾರ ಲಿಸ್ಟನ್ ಕೊಲ್ಯಾಕೊ ಅವರನ್ನು ದಾಖಲೆ ಮೊತ್ತ ನೀಡಿ ಬರಮಾಡಿಕೊಂಡಿದೆ. ಅವರು ಈ ವರೆಗೆ ಹೈದರಾಬಾದ್ ಎಫ್‌ಸಿಯಲ್ಲಿ ಆಡುತ್ತಿದ್ದರು.

ಕೊಲ್ಯಾಕೊ ಅವರನ್ನು ಎಟಿಕೆ ಮೋಹನ್‌ ಬಾಗನ್‌ಗೆ ಬಿಟ್ಟುಕೊಡಲು ಹೈದರಾಬಾದ್ ಎಫ್‌ಸಿ ಒಪ್ಪಿಕೊಂಡಿದೆ. ಆದರೆ ಈ ವರ್ಗಾವಣೆಗಾಗಿ ನಿಗದಿ ಮಾಡಿರುವ ಮೊತ್ತ ಎಷ್ಟು ಎಂಬುದನ್ನು ಬಹಿರಂಗಪಡಿಸಿಲ್ಲ. 22 ವರ್ಷದ ಈ ಆಟಗಾರ ಜೂನ್ ಒಂದರಂದು ಎಟಿಕೆ ಸೇರಲಿದ್ದಾರೆ. 

‘ಸುದೀರ್ಘ ಕಾಲದ ಸುಸ್ಥಿರತೆಯನ್ನು ಗಮನದಲ್ಲಿರಿಸಿಕೊಂಡು ಲಿಸ್ಟನ್ ಅವರನ್ನು ಬಿಟ್ಟುಕೊಡಲು ನಿರ್ಧರಿಸಿದ್ದೇವೆ. ಐಎಸ್‌ಎಲ್‌ ಇತಿಹಾಸದಲ್ಲೇ ದಾಖಲೆ ಮೊತ್ತಕ್ಕೆ ಅವರನ್ನು ಎಟಿಕೆಎಂಬಿ ಪಡೆದುಕೊಂಡಿದೆ’ ಎಂದು ಹೈದರಾಬಾದ್ ಎಫ್‌ಸಿ ಫ್ರಾಂಚೈಸ್ ಪ್ರಕಟಣೆಯಲ್ಲಿ ತಿಳಿಸಿದೆ.

2020ರ ಜನವರಿಯಲ್ಲಿ ಲಿಸ್ಟನ್ ಅವರು ಹೈದರಾಬಾದ್ ಎಫ್‌ಸಿ ಸೇರಿದ್ದರು. ಈ ವರೆಗೆ ಒಟ್ಟು 23 ಪಂದ್ಯಗಳನ್ನು ಆಡಿದ್ದು ನಾಲ್ಕು ಗೋಲು ಗಳಿಸಿದ್ದಾರೆ. ಮೂರು ಗೋಲುಗಳಿಗೆ ಅವಕಾಶವನ್ನೂ ಮಾಡಿಕೊಟ್ಟಿದ್ದಾರೆ. ರಾಷ್ಟ್ರೀಯ ತಂಡಕ್ಕೂ ಆಯ್ಕೆಯಾಗಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು