ಮಂಗಳವಾರ, ನವೆಂಬರ್ 24, 2020
22 °C

ಫುಟ್‌ಬಾಲ್‌ ಅಂಗಣಕ್ಕೆ ಮರಳಿದ ಬಾಲಾದೇವಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತ ಫುಟ್‌ಬಾಲ್‌ ತಂಡದ ಆಕ್ರಮಣಕಾರಿ ಆಟಗಾರ್ತಿ ಬಾಲಾ ದೇವಿ ಮತ್ತೆ ಅಂಗಣಕ್ಕೆ ಮರಳಿದ್ದಾರೆ.  ಸ್ಕಾಟ್ಲೆಂಡ್‌ನಲ್ಲಿ ನಡೆಯುತ್ತಿರುವ ಸ್ಕಾಟಿಷ್‌ ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಸೋಮವಾರ ಅವರು ರೇಂಜರ್ಸ್‌ ಎಫ್‌ಸಿ ಪರ ಸಬ್‌ಸ್ಟಿಟ್ಯೂಟ್‌ ಆಟಗಾರ್ತಿಯಾಗಿ ಕಣಕ್ಕಿಳಿದರು. ಅವರಿದ್ದ ತಂಡವು 5–1ರಿಂದ ಹಾರ್ಟ್ಸ್ ವಿಮೆನ್ಸ್ ಎಫ್‌ಸಿ ತಂಡವನ್ನು ಪರಾಭವಗೊಳಿಸಿತು.

30 ವರ್ಷದ ಮಣಿಪುರದ ಆಟಗಾರ್ತಿ, ಕೋವಿಡ್‌–19 ಪಿಡುಗು ಭಾರತದಲ್ಲಿ ಹರಡುತ್ತಿದ್ದ ಆರಂಭದಲ್ಲಿ ತರಬೇತಿಗಾಗಿ ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ಇದ್ದರು. ಲಾಕ್‌ಡೌನ್‌ ಜಾರಿಯಾದ ಕಾರಣ ಅಲ್ಲಿಯೇ ಉಳಿಯಲು ನಿರ್ಧರಿಸಿದ್ದರು.

ಸ್ಕಾಟಿಷ್‌ ಮಹಿಳಾ ಪ್ರೀಮಿಯರ್‌ ಲೀಗ್‌ ಭಾನುವಾರ ಆರಂಭವಾಗಿದೆ.

’ಫುಟ್‌ಬಾಲ್‌ ಅಂಗಣಕ್ಕೆ ಮರಳಿರುವುದು ಖುಷಿಯ ಸಂಗತಿ. ದೀರ್ಘಕಾಲದಿಂದ ಕ್ರೀಡೆಯಿಂದ ದೂರ ಉಳಿದಿದ್ದು ಕಷ್ಟ ಎನಿಸಿತ್ತು. ಆದರೆ ಈ ದೀರ್ಘಕಾಲದ ವಿರಾಮದಲ್ಲಿ ನಡೆಸಿದ ಪರಿಶ್ರಮಕ್ಕೆ ಫಲ ದೊರೆಯುತ್ತಿದೆ. ಗೆಲುವಿನೊಂದಿಗೆ ನಾವು ಅಭಿಯಾನ ಆರಂಭಿಸಿದ್ದೇವೆ‘ ಎಂದು ಬಾಲಾದೇವಿ ಹೇಳಿದ್ದಾಗಿ ಎಐಎಫ್‌ಎಫ್‌ ಡಾಟ್‌ ಕಾಮ್‌ ಉಲ್ಲೇಖಿಸಿದೆ.

ಬಾಲಾದೇವಿ ಒಂದೂವರೆ ವರ್ಷ ಸ್ಕಾಟ್ಲೆಂಡ್‌ನ ರೇಂಜರ್ಸ್ ಫುಟ್‌ಬಾಲ್ ಕ್ಲಬ್‌ನಲ್ಲಿ ಆಡಲಿದ್ದಾರೆ. ಬೆಂಗಳೂರು ಫುಟ್‌ಬಾಲ್ ಕ್ಲಬ್ ಜೊತೆ ಸಹಯೋಗ ಹೊಂದಿರುವ ರೇಂಜರ್ಸ್‌ ಕ್ಲಬ್‌ ಬಾಲಾದೇವಿ ಜೊತೆ ಒಪ್ಪಂದ ಮಾಡಿಕೊಂಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು