ಲಾ ಲಿಗಾ ಫುಟ್‌ಬಾಲ್‌: ಅಗ್ರಸ್ಥಾನಕ್ಕೇರಿದ ಬಾರ್ಸಿಲೋನಾ

7

ಲಾ ಲಿಗಾ ಫುಟ್‌ಬಾಲ್‌: ಅಗ್ರಸ್ಥಾನಕ್ಕೇರಿದ ಬಾರ್ಸಿಲೋನಾ

Published:
Updated:
Deccan Herald

ಮ್ಯಾಡ್ರಿಡ್‌: ಗೆರಾರ್ಡ್‌ ಪಿಕು ಮತ್ತು ಕಾರ್ಲೆಸ್‌ ಅಲೆನಾ ಕಾಲ್ಚಳಕದಲ್ಲಿ ಅರಳಿದ ತಲಾ ಒಂದು ಗೋಲಿನ ನೆರವಿನಿಂದ ಬಾರ್ಸಿಲೋನಾ ತಂಡ ಲಾ ಲಿಗಾ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ವಿಜಯಿಯಾಗಿದೆ.

ಕ್ಯಾಂಪ್ ನುವಾ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಬಾರ್ಸಿಲೋನಾ 2–0 ಗೋಲುಗಳಿಂದ ವಿಲ್ಲಾರಿಯಲ್‌ ತಂಡವನ್ನು ಪರಾಭವಗೊಳಿಸಿತು. ಇದರೊಂದಿಗೆ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

14 ಪಂದ್ಯಗಳನ್ನು ಆಡಿರುವ ಈ ತಂಡ ಎಂಟರಲ್ಲಿ ಗೆದ್ದಿದ್ದು ಒಟ್ಟು 28 ಪಾಯಿಂಟ್ಸ್‌ ಕಲೆಹಾಕಿದೆ. 27 ಪಾಯಿಂಟ್ಸ್‌ ಹೊಂದಿರುವ ಸೆವಿಲ್ಲಾ ಎರಡನೇ ಸ್ಥಾನದಲ್ಲಿದೆ.

ಆರಂಭದಿಂದಲೇ ಚುರುಕಿನ ಆಟಕ್ಕೆ ಅಣಿಯಾದ ಬಾರ್ಸಿಲೋನಾ, 36ನೇ ನಿಮಿಷದಲ್ಲಿ ಖಾತೆ ತೆರೆಯಿತು. ಗೆರಾರ್ಡ್‌ ಪಿಕು ಮೋಡಿ ಮಾಡಿದರು. ದ್ವಿತೀಯಾರ್ಧದಲ್ಲೂ ಈ ತಂಡ ಪರಿಣಾಮಕಾರಿ ಸಾಮರ್ಥ್ಯ ತೋರಿತು. 87ನೇ ನಿಮಿಷದಲ್ಲಿ 20 ವರ್ಷ ವಯಸ್ಸಿನ ಅಲೆನಾ ಚೆಂಡನ್ನು ಗುರಿ ಮುಟ್ಟಿಸಿದರು. ಈ ಮೂಲಕ ಲಾ ಲಿಗಾ ಟೂರ್ನಿಯಲ್ಲಿ ಚೊಚ್ಚಲ ಗೋಲು ಬಾರಿಸಿದ ಸಾಧನೆ ಮಾಡಿದರು.

ಇನ್ನೊಂದು ಪಂದ್ಯದಲ್ಲಿ ರಿಯಲ್‌ ಮ್ಯಾಡ್ರಿಡ್‌ 2–0 ಗೋಲುಗಳಿಂದ ವಲೆನ್ಸಿಯಾ ತಂಡವನ್ನು ಸೋಲಿಸಿತು.

ಎಂಟನೇ ನಿಮಿಷದಲ್ಲಿ ವಲೆನ್ಸಿಯಾ ತಂಡದ ಡೇನಿಯಲ್‌ ವಾಸ್‌, ಚೆಂಡನ್ನು ತಮ್ಮದೇ ಗೋಲು ಪೆಟ್ಟಿಗೆಯೊಳಗೆ ಒದ್ದರು. ಹೀಗಾಗಿ ಮ್ಯಾಡ್ರಿಡ್‌ ಖಾತೆಗೆ ‘ಉಡುಗೊರೆ’ ರೂಪದಲ್ಲಿ ಗೋಲು ದಾಖಲಾಯಿತು‌.

83ನೇ ನಿಮಿಷದಲ್ಲಿ ಲುಕಾಸ್‌ ವಜಕ್ವೆಜ್‌ ಗೋಲು ಬಾರಿಸಿ ರಿಯಲ್‌ ಮ್ಯಾಡ್ರಿಡ್‌ ಸಂಭ್ರಮಕ್ಕೆ ಕಾರಣರಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !