ಮಂಗಳವಾರ, ಫೆಬ್ರವರಿ 18, 2020
15 °C

ಫುಟ್‌ಬಾಲ್: ಓಜೋನ್‌ಗೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹೆಚ್ಚುವರಿ ಅವಧಿಯಲ್ಲಿ ಹರ್‌ಪ್ರೀತ್‌ ರುಲ್ಬೀರ್‌ ಗಳಿಸಿದ ಗೋಲಿನ ನೆರವಿನಿಂದ ಓಜೋನ್‌ ಎಫ್‌ಸಿ ಬೆಂಗಳೂರು ತಂಡ ಬೆಂಗಳೂರು ಜಿಲ್ಲಾ ಫುಟ್‌ಬಾಲ್‌ ಸಂಸ್ಥೆ (ಬಿಡಿಎಫ್‌ಎ) ಆಶ್ರಯದ ಸೂಪರ್‌ ಡಿವಿಷನ್‌ ಲೀಗ್‌ ಪಂದ್ಯದಲ್ಲಿ ಗೆದ್ದಿದೆ.

ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಓಜೋನ್‌ 2–1 ಗೋಲುಗಳಿಂದ ಬೆಂಗಳೂರು ಡ್ರೀಮ್‌ ಯುನೈಟೆಡ್‌ ಎಫ್‌ಸಿ ತಂಡವನ್ನು ಸೋಲಿಸಿತು.

ಓಜೋನ್‌ ತಂಡ ಮೊದಲ ನಿಮಿಷದಲ್ಲೇ ಖಾತೆ ತೆರೆಯಿತು. ಅಲೋಷಿಯಸ್‌ ಗೋಲು ಹೊಡೆದರು. 30ನೇ ನಿಮಿಷದಲ್ಲಿ ಡ್ರೀಮ್‌ ಯುನೈಟೆಡ್‌ ತಂಡದ ಅಭಿಷೇಕ್‌ ಸಿಂಗ್‌ ಚೆಂಡನ್ನು ಗುರಿ ಮುಟ್ಟಿಸಿ 1–1 ಸಮಬಲಕ್ಕೆ ಕಾರಣರಾದರು.

90+4ನೇ ನಿಮಿಷದಲ್ಲಿ ಗೋಲು ಬಾರಿಸಿದ ಹರ್‌ಪ್ರೀತ್‌, ಓಜೋನ್‌ ಪಾಳಯದಲ್ಲಿ ಸಂಭ್ರಮ ಗರಿಗೆದರುವಂತೆ ಮಾಡಿದರು.

ದಿನದ ಇನ್ನೊಂದು ಪಂದ್ಯದಲ್ಲಿ ಎಎಸ್‌ಸಿ ಆ್ಯಂಡ್‌ ಸೆಂಟರ್‌ ಎಫ್‌ಸಿ 4–2 ಗೋಲುಗಳಿಂದ ಇನ್‌ಕಮ್‌ ಟ್ಯಾಕ್ಸ್‌ ಎಫ್‌ಸಿ ತಂಡವನ್ನು ಪರಾಭವಗೊಳಿಸಿತು.

ಎಎಸ್‌ಸಿ ತಂಡದ ಕೆ.ಜೆರಿನ್‌ ಫ್ರಾನ್ಸಿಸ್‌ (33), ಚಾನಂಬಮ್‌ ಜೊತಿನ್‌ ಸಿಂಗ್‌ (57), ಸಿಂಗ್ನಮ್ ಅರುಣ್‌ಜೀತ್‌ ಮೆಟ್ಟೀ (78) ಮತ್ತು ಒಯಿನಾಮ್‌ ಗೌತಮ್‌ ಸಿಂಗ್‌ (90+1) ತಲಾ ಒಂದು ಗೋಲು ಹೊಡೆದರು.

ಇನ್‌ಕಮ್‌ ಟ್ಯಾಕ್ಸ್‌ ಪರ ಜೆ.ಪ್ರಸಾದ್‌ (9) ಮತ್ತು ಡಿ.ಅಹಮದ್‌ (84) ಗೋಲು ಬಾರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು