ಶನಿವಾರ, ಡಿಸೆಂಬರ್ 3, 2022
21 °C

ಫುಟ್‌ಬಾಲ್‌: ಎಫ್‌ಸಿ ಡೆಕ್ಕನ್‌ಗೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪ್ರಸನ್ನಕುಮಾರ್ ಗಳಿಸಿದ ಎರಡು ಗೋಲುಗಳ ನೆರವಿನಿಂದ ಎಫ್‌ಸಿ ಡೆಕ್ಕನ್ ತಂಡವು ಬಿಡಿಎಫ್‌ಎ ಸೂಪರ್ ಡಿವಿಷನ್‌ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಜಯ ಗಳಿಸಿತು.

ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಎಫ್‌ಸಿ ಡೆಕ್ಕನ್ 4–0ಯಿಂದ ಬೆಂಗಳೂರು ಈಗಲ್ಸ್ ಎದುರು ಗೆದ್ದಿತು. ಪ್ರಸನ್ನಕುಮಾರ್ 58 ಮತ್ತು 61ನೇ ನಿಮಿಷಗಳಲ್ಲಿ ಗೋಲು ಗಳಿಸಿದರು. ಶೆಲ್ಟನ್ ನಿಕ್ಸನ್‌ (9ನೇ ನಿ.) ಮತ್ತು ಹರ್ಷ ಉತೇಕರ್ (85ನೇ ನಿ.) ವಿಜೇತ ತಂಡದ ಪರ ಗೋಲು ಗಳಿಸಿದರು.

ಇನ್ನೊಂದು ಪಂದ್ಯದಲ್ಲಿ ಎಂಇಜಿ ಸೆಂಟರ್ ಎಫ್‌ಸಿ 1–1ರಿಂದ ಕಿಕ್‌ಸ್ಟಾರ್ಟ್‌ ಎಫ್‌ಸಿ ತಂಡದೊಂದಿಗೆ ಡ್ರಾ ಸಾಧಿಸಿತು. ಎಂಇಜಿ ಪರ ಸುಕೇಶ್ ಲಿಯೊನ್‌ ಕೆ. (28ನೇ ನಿ.) ಮತ್ತು ಕಿಕ್‌ಸ್ಟಾರ್ಟ್‌ ಪರ ಅರುಣ್‌ ಎ (90+1ನೇ ನಿ.) ಗೋಲು ಹೊಡೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು