ಮಂಗಳವಾರ, ಮೇ 24, 2022
30 °C

ಫುಟ್‌ಬಾಲ್‌: ಬೆಂಗಳೂರು ಯುನೈಟೆಡ್ ಎಫ್‌ಸಿಗೆ ರೋಚಕ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಗಾಯ್ ಹರ್ಮನ್ ಅಟಿಮೆಲಿ ಬೆಲೆಕ್ ಗಳಿಸಿದ ಏಕೈಕ ಗೋಲಿನ ನೆರವಿನಿಂದ ಬೆಂಗಳೂರು ಯುನೈಟೆಡ್ ಎಫ್‌ಸಿ ತಂಡ ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಸಂಸ್ಥೆಯ ಸೂಪರ್ ಡಿವಿಷನ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ರೋಚಕ ಜಯ ಸಾಧಿಸಿತು.

ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಎಡಿಇ ಎಫ್‌ಸಿಯನ್ನು ಬಿಯುಎಫ್‌ಸಿ 1–0 ಅಂತರದಲ್ಲಿ ಮಣಿಸಿತು. ಕ್ಯಾಮರಾನ್‌ನ 21 ವರ್ಷದೊಳಗಿನವರ ತಂಡದ ಸದಸ್ಯ ಬೆಲೆಕ್ 14ನೇ ನಿಮಿಷದಲ್ಲಿ ಗೋಲು ಗಳಿಸಿದರು. ಕೊನೆಯ ವರೆಗೂ ಮುನ್ನಡೆ ಉಳಿಸಿಕೊಂಡು ಎದುರಾಳಿ ತಂಡವನ್ನು ನಿಯಂತ್ರಿಸುವಲ್ಲಿ ತಂಡ ಯಶಸ್ವಿಯಾಯಿತು.

ಎಫ್‌ಸಿ ಡೆಕ್ಕನ್ ಮತ್ತು ಎಂಇಜಿ–ಸೆಂಟರ್ ಎಫ್‌ಸಿ ನಡುವಿನ ಪಂದ್ಯ 1–1 ಗೋಲಿನಿಂದ ಸಮಬಲವಾಯಿತು. ಡೆಕ್ಕನ್ ಪರ ಲೆನಿನ್ ಮಿತ್ರನ್ (70ನೇ ನಿಮಿಷ) ಮತ್ತು ಎಂಇಜಿ ಪರ ಅರ್ಜುನ್ ಮಧು (72ನೇ ನಿ) ಗೋಲು ಗಳಿಸಿದರು. 

ಥಾಂಕೋಸ್ ಸ್ಟೂಡೆಂಟ್ಸ್ ಯೂನಿಯನ್ ಎಫ್‌ಸಿ ಮತ್ತು ಜವಾಹರ್ ಯೂನಿಯನ್ ಎಫ್‌ಸಿ ನಡುವಿನ ಪಂದ್ಯವೂ 1–1ರಲ್ಲಿ ಸಮವಾಯಿತು. ಜವಾಹರ್‌ಗಾಗಿ ಮೊಹಮ್ಮದ್ ಜವಾಸಿನ್ (15ನೇ ನಿ) ಮತ್ತು ಥಾಂಕೋಸ್‌ಗಾಗಿ ಜಪಾನ್ ಆಟಗಾರ ತೈಕಿ ಯೊಶಿಡಾ (27ನೇ ನಿ) ಚೆಂಡನ್ನು ಗುರಿ ಮುಟ್ಟಿಸಿದರು. 

ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಬೆಂಗಳೂರು ಡ್ರೀಮ್ ಯುನೈಟೆಡ್ ಎಫ್‌ಸಿ ಮತ್ತು ಬೆಂಗಳೂರು ಇಂಡಿಪೆಂಡೆಂಟ್ಸ್‌ ಎಫ್‌ಸಿ ನಡುವೆ ಪಂದ್ಯ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು