ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್‌: ಬೆಂಗಳೂರು ಯುನೈಟೆಡ್, ಕಿಕ್‌ಸ್ಟಾರ್ಟ್‌ಗೆ ಗೆಲುವು

ಪುರುಷರ ಸೂಪರ್ ಡಿವಿಷನ್‌ನಲ್ಲಿ ಬಿಎಫ್‌ಸಿ, ಎಫ್‌ಸಿಬಿಗೆ ಜಯ
Last Updated 26 ಫೆಬ್ರುವರಿ 2021, 14:31 IST
ಅಕ್ಷರ ಗಾತ್ರ

ಬೆಂಗಳೂರು: ಎದುರಾಳಿ ತಂಡಗಳಿಗೆ ಒಂದು ಗೋಲನ್ನೂ ಬಿಟ್ಟುಕೊಡದ ಬೆಂಗಳೂರು ಯುನೈಟೆಡ್ ಎಫ್‌ಸಿ ಮತ್ತು ಕಿಕ್ ಸ್ಟಾರ್ಟ್ ಎಫ್‌ಸಿ ತಂಡಗಳು ರಾಜ್ಯ ಫುಟ್‌ಬಾಲ್ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ ಮಹಿಳಾ ಲೀಗ್‌ನಲ್ಲಿ ಶುಕ್ರವಾರ ಗೆಲುವು ಸಾಧಿಸಿದವು.

ಬೆಂಗಳೂರು ಫುಟ್‌ಬಾಲ್ ಮೈದಾನದಲ್ಲಿ ನಡೆದ ಪಂದ್ಯಗಳಲ್ಲಿ ಕಿಕ್‌ ಸ್ಟಾರ್ಟ್ 4–0ಯಿಂದ ಪರಿಕ್ರಮ ಎಫ್‌ಸಿಯನ್ನು ಮಣಿಸಿದರೆ ಬೆಂಗಳೂರು ಯುನೈಟೆಡ್ ಎಫ್‌ಸಿ 2–0ಯಿಂದ ಬೆಂಗಳೂರು ಬ್ರೇವ್ಸ್‌ ವಿರುದ್ಧ ಜಯ ಗಳಿಸಿತು.

ಯುನೈಟೆಡ್ ಪರ ಪರೋಮಿತಾ ಸೇಠ್ 25 ಮತ್ತು 36ನೇ ನಿಮಿಷಗಳಲ್ಲಿ ಗೋಲು ಗಳಿಸಿದರು. ಕಿಕ್‌ಸ್ಟಾರ್ಟ್‌ಗಾಗಿ ಸಿಬಿನಿ ಶರ್ಮಾ (15ನೇ ನಿಮಿಷ), ಮಾರ್ಗರೆಟ್ ದೇವಿ (59ನೇ ನಿ), ಸುಶ್ಮಿತಾ (67ನೇ ನಿ) ಮತ್ತು ಕಾವ್ಯ (83ನೇ ನಿ) ಗೋಲು ಗಳಿಸಿದರು.

ಶನಿವಾರ ಮತ್ತು ಭಾನುವಾರ ವಿಶ್ರಾಂತಿ ದಿನವಾಗಿದ್ದು ಸೋಮವಾರ ಒಂಬತ್ತು ಗಂಟೆಗೆ ರೆಬೆಲ್ಸ್ ವಿಮೆನ್ಸ್ ಎಫ್‌ಸಿ ಮತ್ತು ಮಿಸಾಕ ಯುನೈಟೆಡ್‌, 11 ಗಂಟೆಗೆ ಸ್ಲ್ಯಾಂಮ್ಸರ್ಸ್‌ ಬೆಳಗಾಂ ಮತ್ತು ಇಂಡಿಯನ್ ಫುಟ್‌ಬಾಲ್ ಫ್ಯಾಕ್ಟರಿ ತಂಡಗಳು ಸೆಣಸಲಿವೆ.

ಬಿಎಫ್‌ಸಿ, ಬೆಂಗಳೂರು ಯನೈಟೆಡ್‌ಗೆ ಜಯ

ಶುಕ್ರವಾರ ನಡೆದ ಪುರುಷರ ಸೂಪರ್ ಡಿವಿಷನ್ ಟೂರ್ನಿಯ ಪಂದ್ಯಗಳಲ್ಲಿ ಬಿಎಫ್‌ಸಿ 3–0ಯಿಂದ ಎಎಸ್‌ಸಿ ಆ್ಯಂಡ್ ಸೆಂಟರ್‌ ಎಫ್‌ಸಿಯನ್ನು, ಎಫ್‌ಸಿ ಬೆಂಗಳೂರು ಯುನೈಟೆಡ್ 6–0ಯಿಂದ ಯಂಗ್ ಚಾಲೆಂಜರ್ಸ್ ಎಫ್‌ಸಿಯನ್ನು ಸೋಲಿಸಿತು.

ಬಿಎಫ್‌ಸಿಗಾಗಿ ಹೈದ್ರೋಮ್ ಥೊಯ್ ಸಿಂಗ್ (56ನೇ ನಿ) ಮತ್ತು ಶಿವಶಕ್ತಿ (60, 85ನೇ ನಿ) ಗೋಲು ಗಳಿಸಿದರು. ಬೆಂಗಳೂರು ಎಫ್‌ಸಿ ಯುನೈಟೆಡ್‌ಗಾಗಿ ನರಹರಿ ಶ್ರೇಷ್ಠ (12, 86ನೇ ನಿ), ರೊನಾಲ್ಡೊ ಆಗಸ್ಟೊ (26ನೇ ನಿ), ಕಿರಣ್ ಸರವಣನ್ (56ನೇ ನಿ), ಅನೂಪ್ ರಾಜ್ (59ನೇ ನಿ) ಮತ್ತು ರೊನಾಲ್ಡ್ ಸಿಂಗ್ (62ನೇ ನಿ) ಚೆಂಡನ್ನು ಗುರಿ ಮುಟ್ಟಿಸಿದರು.

ಸೋಮವಾರ ಮಧ್ಯಾಹ್ನ 1.30ಕ್ಕೆ ಎಂಇಜಿ ಆ್ಯಂಡ್ ಸೆಂಟರ್ ಎಫ್‌ಸಿ ಹಾಗೂ ಎಫ್‌ಸಿ ಡೆಕ್ಕನ್, 3.30ಕ್ಕೆ ಬೆಂಗಳೂರು ಇಂಡಿಪೆಂಡೆಂಟ್ ಎಫ್‌ಸಿ ಮತ್ತು ಇನ್ಕಂ ಟ್ಯಾಕ್ಸ್‌ ತಂಡಗಳು ಮುಖಾಮುಖಿಯಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT