ಬೆಂಗಳೂರು: ದಿ ಸ್ಪೋರ್ಟ್ಸ್ ಸ್ಕೂಲ್, ದೇಶದ ವಿವಿಧ ಭಾಗಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ಫುಟ್ಬಾಲ್ನಲ್ಲಿ ಆಸಕ್ತಿ ಇರುವವರಿಗೆವಿದ್ಯಾರ್ಥಿ ವೇತನ ನೀಡಲು ಮುಂದಾಗಿದೆ.

ಇದಕ್ಕಾಗಿ ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್ಸಿ) ಸಹಯೋಗದಲ್ಲಿ ನ್ಯಾಷನಲ್ ಫುಟ್ಬಾಲ್ ಸ್ಕಾಲರ್ಷಿಪ್ ಪ್ರೋಗ್ರಾಮ್ ಜಾರಿಗೊಳಿಸಿದೆ.

13, 15 ಮತ್ತು 18 ವರ್ಷದೊಳಗಿನವರು ವಿದ್ಯಾರ್ಥಿ ವೇತನ ಪಡೆಯಲು ಅರ್ಹರಿದ್ದು ಇದಕ್ಕಾಗಿ ಈ ತಿಂಗಳ 31ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಫುಟ್ಬಾಲ್ ಸ್ಕಾಲರ್ಷಿಪ್ ಪಡೆಯಲು ಇಚ್ಛಿಸುವವರಿಗಾಗಿ ಆಗಸ್ಟ್ ಮಧ್ಯಂತರ ಇಲ್ಲವೇ ಸೆಪ್ಟೆಂಬರ್ನಲ್ಲಿ ಸ್ಪೋರ್ಟ್ಸ್ ಸ್ಕೂಲ್ನಲ್ಲಿ ಟ್ರಯಲ್ಸ್ ನಡೆಸಲಾಗುತ್ತದೆ. ಬಿಎಫ್ಸಿಯ ಯೂತ್ ತಂಡದ ಕೋಚ್ಗಳು ಇದರ ಮೇಲ್ವಿಚಾರಣೆ ವಹಿಸಲಿದ್ದಾರೆ.

‘ಮೊದಲ ಹಂತದ ಟ್ರಯಲ್ಸ್ನಲ್ಲಿ ಭಾಗವಹಿಸುವವರ ಪೈಕಿ ಅತ್ಯುತ್ತಮ ಸಾಮರ್ಥ್ಯ ತೋರುವ ತಲಾ ಐದು ಮಂದಿಯನ್ನು(13, 15 ಮತ್ತು 18 ವರ್ಷದೊಳಗಿನವರ ವಿಭಾಗಗಳಿಂದ) ಆಯ್ಕೆ ಮಾಡಲಾಗುತ್ತದೆ. ಇವರು ಬಳ್ಳಾರಿ ಮತ್ತು ಬೆಂಗಳೂರಿನಲ್ಲಿರುವ ಬಿಎಫ್ಸಿ ಒಡೆತನದ ಕ್ಲಬ್ಗಳಲ್ಲಿ ಮತ್ತೊಂದು ಸುತ್ತಿನ ಟ್ರಯಲ್ಸ್ನಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಅದರಲ್ಲಿ ಶ್ರೇಷ್ಠ ಸಾಮರ್ಥ್ಯ ತೋರಿದವರು ಪ್ರತಿಷ್ಠಿತ ಬಿಎಫ್ಸಿ ಅಕಾಡೆಮಿಗೆ ನೇರ ಅರ್ಹತೆ ಗಳಿಸಲಿದ್ದಾರೆ’ ಎಂದು ದಿ ಸ್ಪೋರ್ಟ್ಸ್ ಸ್ಕೂಲ್ನ ನಿರ್ದೇಶಕ ಯು.ವಿ.ಶಂಕರ್ ತಿಳಿಸಿದ್ದಾರೆ.

‘ಎಳವೆಯಲ್ಲಿಯೇ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸೂಕ್ತ ಪ್ರೋತ್ಸಾಹ ನೀಡುವುದು ನಮ್ಮ ಗುರಿ. ಹೀಗಾಗಿಯೇ ದಿ ಸ್ಪೋರ್ಟ್ಸ್ ಸ್ಕೂಲ್ ಸಹಯೋಗದಲ್ಲಿ ಸ್ಕಾಲರ್ಷಿಪ್ ಪ್ರೋಗ್ರಾಮ್ ಜಾರಿಗೊಳಿಸಿದ್ದೇವೆ’ ಎಂದು ಬಿಎಫ್ಸಿ ಸಿಇಒ ಮಂದಾರ ತಮ್ಹಾನೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.