ಬುಧವಾರ, ಅಕ್ಟೋಬರ್ 21, 2020
25 °C

ಭವಾನಿಪುರಕ್ಕೆ ಮಣಿದ ಎಫ್‌ಸಿ ಬೆಂಗಳೂರು ಯುನೈಟೆಡ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ಕೊರೊನಾ ಕಾಲದ ಮೊದಲ ಫುಟ್‌ಬಾಲ್ ಪಂದ್ಯದಲ್ಲೇ ಎಫ್‌ಸಿ ಬೆಂಗಳೂರು ಯುನೈಟೆಡ್ ತಂಡ ಸೋಲಿಗೆ ಶರಣಾಗಿದೆ. ಗುರುವಾರ ನಡೆದ ಐ–ಲೀಗ್ ಅರ್ಹತಾ ಸುತ್ತಿನ ಹಣಾಹಣಿಯಲ್ಲಿ ಈ ತಂಡ ನಗರದ ಭವಾನಿಪುರ ಎಫ್‌ಸಿಗೆ 0–2 ಗೋಲುಗಳಿಂದ ಮಣಿಯಿತು.

ಐದು ತಂಡಗಳ ರೌಂಡ್ ರಾಬಿನ್ ಮಾದರಿಯ ಉದ್ಘಾಟನಾ ಪಂದ್ಯದಲ್ಲಿ ಭವಾನಿಪುರ ಎಫ್‌ಸಿ ಆಕ್ರಮಣಕಾರಿ ಆಟದ ಮೂಲಕ ಬೆಂಗಳೂರು ತಂಡವನ್ನು ಕಂಗೆಡಿಸಿತು. ಆತಿಥೇಯ ತಂಡದ ಕೋಚ್ ಶಂಕರ್‌ಲಾಲ್ ಚಕ್ರವರ್ತಿ ಅತ್ಯುತ್ತಮ ತಂತ್ರಗಳನ್ನು ಹೆಣೆದು ತಂಡದ ಗೆಲುವಿನಲ್ಲಿ ಪ್ರಮುಖ ಪ್ರಮುಖ ಪಾತ್ರ ವಹಿಸಿದರು.

21ನೇ ನಿಮಿಷದಲ್ಲಿ ಬೆಂಗಳೂರು ತಂಡಕ್ಕೆ ಉತ್ತಮ ಅವಕಾಶ ಒದಗಿತ್ತು. ಆದರೆ ಎದುರಾಳಿ ತಂಡಕ್ಕೆ ಶಿಲ್ಟನ್ ಪಾಲ್ ಆಸರೆಯಾದರು. ನಂತರ ಭವಾನಿಪುರ ಆಟಗಾರರು ಸಂಪೂರ್ಣ ಮೇಲುಗೈ ಸಾಧಿಸಿದರು. ಮೊದಲಾರ್ಧದ ಇಂಜುರಿ ಅವಧಿಯಲ್ಲಿ ಪಂಕಜ್ ಮೌಲಾ ಗಳಿಸಿದ ಗೋಲಿನ ಮೂಲಕ ಭವಾನಿಪುರ ಮುನ್ನಡೆ ಸಾಧಿಸಿತು. 61ನೇ ನಿಮಿಷದಲ್ಲಿ ಫಿಲಿಪ್ ಟೆಟ್ಟಿ ಆ ತಂಡಕ್ಕೆ ಎರಡನೇ ಗೋಲು ತಂದುಕೊಟ್ಟರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು