ಶನಿವಾರ, ಜುಲೈ 2, 2022
25 °C
ಜೆಮ್ಶೆಡ್‌ಪುರ ಎದುರಾಳಿ

ಇಂಡಿಯನ್‌ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ‘ಸಮಾಧಾನಕರ‘ ಜಯಕ್ಕೆ ಒಡಿಶಾ ಪ್ರಯತ್ನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬ್ಯಾಂಬೊಲಿಮ್‌: ಪ್ಲೇ ಆಫ್‌ ಸ್ಪರ್ಧೆಯಿಂದ ಬಹುತೇಕ ಹೊರಗುಳಿದಿರುವ ಒಡಿಶಾ ಎಫ್‌ಸಿ ತಂಡವು ಇಂಡಿಯನ್‌ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಸೋಮವಾರ ಜೆಮ್ಶೆಡ್‌ಪುರ ಎಫ್‌ಸಿ ತಂಡವನ್ನು ಎದುರಿಸಲಿದೆ. ಇಲ್ಲಿನ ಜಿಎಂಸಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.

ಟೂರ್ನಿಯಲ್ಲಿ ಇದುವರೆಗೆ ಒಂದು ಪಂದ್ಯದಲ್ಲಿ ಮಾತ್ರ ಜಯ ಸಾಧಿಸಿರುವ ಒಡಿಶಾ ಎಫ್‌ಸಿ ಏಳು ಪಂದ್ಯಗಳಲ್ಲಿ ನಿರಾಸೆ ಅನುಭವಿಸಿದೆ. 11 ತಂಡಗಳಿರುವ ಟೂರ್ನಿಯಲ್ಲಿ ಎಂಟು ಪಾಯಿಂಟ್ಸ್‌ಗಳೊಂದಿಗೆ ಕೊನೆಯ ಸ್ಥಾನದಲ್ಲಿದೆ.

ಓದಿ: 

ಆದರೆ ಕಳೆದ ಎರಡು ಪಂದ್ಯಗಳಲ್ಲಿ ಉತ್ತಮ ಲಯದಲ್ಲಿರುವ ತಂಡಗಳ ಎದುರು ಒಡಿಶಾ ಡ್ರಾ ಸಾಧಿಸಿದೆ.

ಒಡಿಶಾ ಹಾಗೂ ಜೆಮ್ಶೆಡ್‌ಪುರ ಮುಖಾಮುಖಿಯಾಗಿದ್ದ ಈ ಹಿಂದಿನ ಪಂದ್ಯವು 2–2ರ ಡ್ರಾನಲ್ಲಿ ಕೊನೆಗೊಂಡಿತ್ತು.

ಒಡಿಶಾ ಎದುರಿಸುತ್ತಿರುವಂತಹ ಪರಿಸ್ಥಿತಿಯನ್ನೇ ಬಹುತೇಕ ಜೆಮ್ಶೆಡ್‌ಪುರ ಕೂಡ ಹೊಂದಿದೆ. ಆದರೂ ಆ ತಂಡಕ್ಕೆ ಪ್ಲೇ ಆಫ್‌ ಪ್ರವೇಶಿಸುವ ಅವಕಾಶ ಇದೆ. ಕಳೆದ ಐದು ಪಂದ್ಯಗಳಲ್ಲಿ ಆ ತಂಡಕ್ಕೆ ಜಯ ಒಲಿದಿಲ್ಲ. ಕಳೆದ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಒಂದು ಗೋಲನ್ನು ಗಳಿಸಿಲ್ಲ.

ಹೀಗಾಗಿ ಉಭಯ ತಂಡಗಳು ಗೆಲುವಿಗಾಗಿ ಜಿದ್ದಾಜಿದ್ದಿನ ಪೈಪೋಟಿ ನಡೆಸುವ ನಿರೀಕ್ಷೆಯಿದೆ.

ಪಂದ್ಯ ಆರಂಭ: ಸಂಜೆ 7.30

ಸ್ಥಳ: ಜಿಎಂಸಿ ಕ್ರೀಡಾಂಗಣ ಬ್ಯಾಂಬೊಲಿಮ್‌

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು