ಮಂಗಳವಾರ, ಆಗಸ್ಟ್ 3, 2021
24 °C

ಸಾಂಬಾ ನಾಡಿನಲ್ಲಿ ಫುಟ್‌ಬಾಲ್‌ ಸಂಭ್ರಮ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

Prajavani

ರಿಯೊ ಡಿ ಜನೈರೊ: ಕೋವಿಡ್‌ ಪೀಡಿತ ರಾಷ್ಟ್ರಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್‌ನಲ್ಲಿ ಫುಟ್‌ಬಾಲ್ ಚಟುವಟಿಕೆಗಳು ಗರಿಗೆದರಿವೆ.

ಮೂರು ತಿಂಗಳ ಬಳಿಕ ನಡೆದ ರಿಯೊ ಡಿ ಜನೈರೊ ರಾಜ್ಯ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಹಣಾಹಣಿಯಲ್ಲಿ ಫ್ಲೆಮಿಂಗೊ ತಂಡವು 3–0 ಗೋಲುಗಳಿಂದ ಬಾಂಗು ತಂಡವನ್ನು ಪರಾಭವಗೊಳಿಸಿತು. ಪ್ರತಿಷ್ಠಿತ ಮರಕಾನಾ ಕ್ರೀಡಾಂಗಣದಲ್ಲಿ ಈ ಪಂದ್ಯ ಆಯೋಜನೆಯಾಗಿತ್ತು. ಕೊರೊನಾ ಸೋಂಕು ಹರಡುವ ಅಪಾಯವಿರುವುದರಿಂದ ಮೈದಾನಕ್ಕೆ ಪ್ರೇಕ್ಷಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.

ಮಾಧ್ಯಮದವರು ಹಾಗೂ ಪಂದ್ಯದ ಅಧಿಕಾರಿಗಳಿಗೆ ಮಾತ್ರ ಕ್ರೀಡಾಂಗಣದೊಳಗೆ ಬಿಡಲಾಗಿತ್ತು.

ಗುರುವಾರ ಒಂದೇ ದಿನ ಸಾಂಬಾ ನಾಡಿನಲ್ಲಿ ಒಟ್ಟು 1,238 ಮಂದಿ ಕೋವಿಡ್‌–19ಗೆ ಬಲಿಯಾಗಿರುವುದು ವರದಿಯಾಗಿದೆ. ಇದರೊಂದಿಗೆ ಕೋವಿಡ್‌ನಿಂದ ಸತ್ತವರ ಒಟ್ಟು ಸಂಖ್ಯೆಯು 47,869ಕ್ಕೆ ಏರಿಕೆಯಾಗಿದೆ. 

ಇಂತಹ ಸಂದಿಗ್ಧ ಸಮಯದಲ್ಲಿ ಫುಟ್‌ಬಾಲ್‌ ಪುನರಾರಂಭಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಬೊಟಾಫೊಗೊ ಹಾಗೂ ಫ್ಲುಮಿನೆನ್ಸ್‌ ಕ್ಲಬ್‌ಗಳು, ಈ ವಾರಾಂತ್ಯದಲ್ಲಿ ನಡೆಯುವ ಪಂದ್ಯಗಳಿಂದ ಹಿಂದೆ ಸರಿಯುವುದಾಗಿ ಹೇಳಿವೆ.

ಬಾಂಗು ವಿರುದ್ಧದ ಪಂದ್ಯದಲ್ಲಿ ಫ್ಲೆಮಿಂಗೊ ತಂಡದ ಜಿಯಾರ್ಜಿಯನ್‌ ಡಿ ಅರಾಸ್‌ಕಯೆಟಾ (17ನೇ ನಿಮಿಷ), ಬ್ರುನೊ ಹೆನ್ರಿಕ್‌ (20) ಮತ್ತು ಪೆಡ್ರೊ ರೋಚಾ ಅವರು ಗೋಲು ಬಾರಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು