ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಖ್ಯಮಂತ್ರಿ ಕಪ್‌ ಫುಟ್‌ಬಾಲ್‌: ಬಿಟಿಎಂ ಲೇಔಟ್‌ ತಂಡಕ್ಕೆ ಜಯ

Published 8 ಜುಲೈ 2024, 18:10 IST
Last Updated 8 ಜುಲೈ 2024, 18:10 IST
ಅಕ್ಷರ ಗಾತ್ರ

ಬೆಂಗಳೂರು: ಎ.ಎಸ್. ಸುಹಾಸ್ ಎಬೆನೇಜರ್ ಅವರ ಹ್ಯಾಟ್ರಿಕ್‌ ಗೋಲುಗಳ ನೆರವಿನಿಂದ ಬಿಟಿಎಂ ಲೇಔಟ್‌ ವಿಧಾನಸಭಾ ಕ್ಷೇತ್ರ ತಂಡವು ಮುಖ್ಯಮಂತ್ರಿ ಕಪ್‌ ಫುಟ್‌ಬಾಲ್‌ ಟೂರ್ನಿಯ ‘ಎ’ ಗುಂಪಿನ ಪಂದ್ಯದಲ್ಲಿ ಗೆಲುವು ಸಾಧಿಸಿದೆ. 

ಉತ್ತಮ ಆಟವಾಡಿದ ಬಿಟಿಎಂ ಲೇಔಟ್‌ ವಿಧಾನಸಭಾ ಕ್ಷೇತ್ರ ತಂಡವು 5–1 ಗೋಲುಗಳ ಅಂತರದಿಂದ ‌ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ತಂಡವನ್ನು ಮಣಿಸಿತು. 

ಬಿಟಿಎಂ ತಂಡದ ಪರ ಎ.ಎಸ್ ಸುಹಾಸ್ ಎಬೆನೇಜರ್ (7, 10 ಮತ್ತು 32ನೇ ನಿಮಿಷ), ಎಂ.ಡಿ ರೆಹಾನ್ (38ನೇ ನಿ), ಕಾಬಾ ಬಿನ್ ಅಯ್ಯೂಬ್ (48ನೇ ನಿ) ಗೋಲು ದಾಖಲಿಸಿದರು. ದಾಸರಹಳ್ಳಿ ತಂಡದ ಪರ ಮಂಜುನಾಥ್‌ ರೆಡ್ಡಿ ಏಕೈಕ ಗೋಲು ದಾಖಲಿಸಿದರು.  

‘ಸಿ’ ಗುಂಪಿನ ಪಂದ್ಯದಲ್ಲಿ ರಾಜಾಜಿನಗರ ವಿಧಾನಸಭಾ ಕ್ಷೇತ್ರ ತಂಡವು 2-1ರಿಂದ ಗಾಂಧಿನಗರ ವಿಧಾನಸಭಾ ಕ್ಷೇತ್ರ  ತಂಡವನ್ನು ಮಣಿಸಿತು. 

ರಾಜಾಜಿನಗರ ತಂಡದ ಪರ ರಾಜು ಡಿ. (25ನೇ ನಿ), ಮೊನೀಶ್ ಕುಮಾರ್ ಜಿ. (36 ನೇ ನಿ) ಗೋಲು ಗಳಿಸಿದರೆ, ಗಾಂಧಿನಗರ ತಂಡದ ಪರ ಮದನ್ (3ನೇ ನಿ) ಏಕೈಕ ಗೋಲು ‌ತಂದಿತ್ತರು.

ಇಂದಿನ ಪಂದ್ಯಗಳು:

ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ - ಪುಲಿಕೇಶಿ ನಗರ ವಿಧಾನಸಭಾ ಕ್ಷೇತ್ರ (ಬೆಳಿಗ್ಗೆ 11.30ಕ್ಕೆ)
ಸಿ.ವಿ. ರಾಮನ್ ನಗರ ವಿಧಾನಸಭಾ ಕ್ಷೇತ್ರ -ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ (ಮಧ್ಯಾಹ್ನ 1.30ಕ್ಕೆ)
ವಿಜಯನಗರ ವಿಧಾನಸಭಾ ಕ್ಷೇತ್ರ - ಗೋವಿಂದರಾಜ ನಗರವಿಧಾನಸಭಾ ಕ್ಷೇತ್ರ (ಮಧ್ಯಾಹ್ನ 3ಕ್ಕೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT