ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪಾ ಅಮೆರಿಕ ಫುಟ್‌ಬಾಲ್ ಟೂರ್ನಿ: ಕ್ವಾರ್ಟರ್‌ ಫೈನಲ್‌ಗೆ ಕೆನಡಾ

Published 1 ಜುಲೈ 2024, 4:31 IST
Last Updated 1 ಜುಲೈ 2024, 4:31 IST
ಅಕ್ಷರ ಗಾತ್ರ

ಒರ್ಲ್ಯಾಂಡೊ, ಅಮೆರಿಕ: ಕೆನಡಾ ತಂಡವು ಕೊಪಾ ಅಮೆರಿಕ ಫುಟ್‌ಬಾಲ್ ಟೂರ್ನಿಯಲ್ಲಿ ಚಿಲಿ ತಂಡದ ಜೊತೆ ಗೋಲಿಲ್ಲದೇ ಡ್ರಾ ಮಾಡಿಕೊಂಡಿತು. ಆ ಮೂಲಕ ಕೆನಡಾ ತಂಡ ಕ್ವಾರ್ಟರ್‌ ಫೈನಲ್ ಪ್ರವೇಶಿಸಿತು. 

ಕೆನಡಾ ತಂಡದ ಗೋಲ್‌ಕೀಪರ್‌ ಮ್ಯಾಕ್ಸಿಮ್ ಕ್ರೆಪಿಯು ಅವರು ಮೂರು ಗೋಲುಗಳನ್ನು ತಡೆಯುವ ಮೂಲಕ ತಂಡದ ಗೆಲುವಿಗೆ ಪ್ರಮುಖ ಕಾಣಿಕೆ ನೀಡಿದರು. ‘ಎ’ ಗುಂಪಿನಲ್ಲಿ ಅರ್ಜೆಂಟೀನಾ 9 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಕೆನಡಾ ನಾಲ್ಕು ಅಂಕಗಳನ್ನು ಸಂಪಾದಿಸಿ ಎರಡನೇ ಸ್ಥಾನದಲ್ಲಿದೆ. 

ಸತತ ಎರಡನೇ ಬಾರಿಗೆ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿರುವ ಅರ್ಜೆಂಟೀನಾ ಆಡಿದ ಎಲ್ಲ ಮೂರು ಪಂದ್ಯಗಳನ್ನು ಗೆದ್ದುಕೊಂಡಿದೆ. ಮುಖ್ಯ ಕೋಚ್ ರಿಕಾರ್ಡೊ ಗರೇಕಾ ಅವರ ಅನುಪಸ್ಥಿತಿಯಲ್ಲಿ ಚಿಲಿ ತಂಡ ಗ್ರೂಪ್ ಹಂತದ ಅಭಿಯಾನ ಪೂರ್ಣಗೊಳಿಸಿತು. 

2021ರಲ್ಲಿ ನಡೆದ ಚಾಂಪಿಯನ್‌ಷಿಪ್‌ ಪಂದ್ಯದಲ್ಲಿ ಅರ್ಜೆಂಟೀನಾ 1-0 ಗೋಲುಗಳಿಂದ ಬ್ರೆಜಿಲ್ ತಂಡವನ್ನು ಮಣಿಸಿತ್ತು. ಅರ್ಜೆಂಟೀನಾ ಮತ್ತು ಉರುಗ್ವೆ ಎರಡೂ 15 ಬಾರಿ ಪ್ರಶಸ್ತಿ ಗೆದ್ದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT