ಶನಿವಾರ, ಫೆಬ್ರವರಿ 22, 2020
19 °C

ಸಿಟಿ ಎಫ್‌ಜಿ ತೆಕ್ಕೆಗೆ ಮುಂಬೈ ಎಫ್‌ಸಿ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ ಚಾಂಪಿಯನ್ ಮ್ಯಾಂಚೆಸ್ಟರ್‌ ಸಿಟಿಯ ಮಾತೃ ಕಂಪನಿ ಸಿಟಿ ಫುಟ್‌ಬಾಲ್‌ ಗ್ರೂಪ್‌ (ಸಿಎಫ್‌ಜಿ), ಗುರುವಾರ ಐಎಸ್‌ಎಲ್‌ನ ಪ್ರಾಂಚೈಸ್‌ ಮುಂಬೈ ಸಿಟಿ ಎಫ್‌ಸಿಯ ಶೇ 65ರಷ್ಟು ಷೇರುಗಳನ್ನು  ಖರೀದಿಸಿದೆ.

ಇದೇ ಮೊದಲ ಬಾರಿ ಯುರೋಪ್‌ನ ಪ್ರಮುಖ ಕ್ಲಬ್‌ವೊಂದು ಭಾರತದ ಫುಟ್‌ಬಾಲ್‌ ಕ್ಲಬ್‌ನ ಬಹುಪಾಲು ಷೇರು ಖರೀದಿಸಿದಂತಾಗಿದೆ. ಈ ಮೂಲಕ ಹೆಸರಾಂತ ಮ್ಯಾನೇಜರ್‌ ಪೆಪ್‌ ಗಾರ್ಡೊಲಿಯಾ ಭಾರತಕ್ಕೆ ಹತ್ತಿರವಾಗುವ
ನಿರೀಕ್ಷೆಯಿದೆ.

ಕ್ಲಬ್‌ ಅಭಿಮಾನಿಗಳ ಎದುರು ಸಿಎಫ್‌ಜಿಯ ಸಿಇಒ ಫೆರಾನ್‌ ಸೊರಿಯಾನೊ ಅವರು ಫುಟ್‌ಬಾಲ್‌ ಸ್ಪೋರ್ಟ್ಸ್‌ ಡೆವಲಪ್‌ಮೆಂಟ್‌ ಲಿಮಿಟೆಡ್‌ ಮತ್ತು ರಿಲಯನ್ಸ್‌ ಫೌಂಡೇಷನ್‌ ಮುಖ್ಯಸ್ಥರಾಗಿರುವ ನೀತಾ ಅಂಬಾನಿ ಈ ಸುದ್ದಿಯನ್ನು ಪ್ರಕಟಿಸಿದರು.

‘ಫುಟ್‌ಬಾಲ್‌ನ ಜಾಗತಿಕ ಶಕ್ತಿಕೇಂದ್ರವನ್ನು ನಾವು ಭಾರತಕ್ಕೆ, ಐಎಸ್‌ಎಲ್‌ ಮತ್ತು ಭಾರತದ ಫುಟ್‌ಬಾಲ್‌ಗೆ ಸ್ವಾಗತಿಸುತ್ತಿದ್ದೇವೆ. ಸಿಟಿ ಫುಟ್‌ಬಾಲ್‌ ಕ್ಲಬ್‌, ಮುಂಬೈ ಸಿಟಿ ಎಫ್‌ಸಿಯ ಬಹುಪಾಲು ಷೇರುಗಳನ್ನು ಖರೀದಿಸಿದೆ ಎಂದು ಹೇಳಲು ಸಂತಸವಾಗುತ್ತಿದೆ’ ಎಂದು ನೀತಾ ಅಂಬಾನಿ ಪ್ರಕಟಿಸಿದರು.

ಈ ಚಾರಿತ್ರಿಕ ಪಾಲುದಾರಿಕೆಯಿಂದ ಮುಂಬೈ ಸಿಟಿ ಎಫ್‌ಸಿ ಮತ್ತು ಭಾರತದ ಫುಟ್‌ಬಾಲ್‌ಗೆ ಲಾಭವಾಗಲಿದೆ ಎಂಬ ವಿಶ್ವಾಸವಿದೆ ಎಂದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು