ಶನಿವಾರ, ಏಪ್ರಿಲ್ 4, 2020
19 °C

ಕೊರೊನಾ ವಿರುದ್ಧ ರೆಫರಿ ಕಣಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮ್ಯಾಡ್ರಿಡ್ (ಎಎಫ್‌ಪಿ): ಅಂಗಣದಲ್ಲಿ ಆಟಗಾರರನ್ನು ನಿಯಂತ್ರಿ ಸುತ್ತಿದ್ದ ಇರಗರ್ತೆ ಫರ್ನಾಂಡಜ್ ಈಗ ಶುಶ್ರೂಷಕಿಯ ಪೋಷಾಕು ತೊಟ್ಟು ಕೊರೊನಾ ವೈರಸ್ ‘ಆಟ’ದ ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಸ್ಪೇನ್‌ನಲ್ಲಿ ಕೋವಿಡ್ ಪೀಡಿತರಿಗೆ ಅಭಯ ನೀಡಲು ಮುಂದಾಗಿದ್ದಾರೆ. ಮಹಿಳೆಯರ ಅಗ್ರ ಫುಟ್‌ಬಾಲ್ ಟೂರ್ನಿಯಾದ ಲಾಲಿಗಾ ಇಬೆರ್ಡ್ರೊಲಾ ಸೇರಿದಂತೆ ವಿವಿಧ ಟೂರ್ನಿಗಳಲ್ಲಿ ರೆಫರಿಯಾಗಿ ಪಾಲ್ಗೊಂಡಿದ್ದ 26 ವರ್ಷದ ಇರಗರ್ತೆ ಐದು ವರ್ಷಗಳಿಂದ ಬಿಲ್ಬಾವೊದ ರೇಖಲ್ದೆ ಆರೋಗ್ಯ ಕೇಂದ್ರದಲ್ಲಿ ಅರೆಕಾಲಿಕ ಶುಶ್ರೂಷಕಿಯಾಗಿ ಕಾರ್ಯನಿರ್ವ ಹಿಸುತ್ತಿದ್ದಾರೆ.

ಆದರೆ ಸ್ಪೇನ್‌ನಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗುತ್ತಿದ್ದಂತೆ ದಿನವಿಡೀ ಆರೋಗ್ಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ‘ರಕ್ಷಣಾ ಕವಚ ಧರಿಸಿ ಕಾರ್ಯನಿರ್ವಹಿಸುತ್ತಿರುವ ನಾನು ಜ್ವರ ಅಥವಾ ಕೆಮ್ಮಿನಿಂದ ಬಳಲು ತ್ತಿರುವವರು ಯಾರಾದರೂ ಆಸ್ಪತ್ರೆಗೆ ಬಂದರೆ ಅವರಿಗೆ ಕೊರೊನಾ ಸೋಂಕು ಇದೆಯೇ ಎಂದು ಪರೀಕ್ಷಿ ಸುತ್ತೇನೆ. ಸೋಂಕುಪೀಡಿತರ ಸಂಪರ್ಕದಲ್ಲಿರುವುದರಿಂದ ನಮಗೆ ಅಪಾಯವಾಗುವ ಸಾಧ್ಯತೆ ಹೆಚ್ಚು. ಹಾಗೆಂದು ನನ್ನನ್ನು ಯಾರೂ ಸೂಪರ್ ವುಮನ್ ಎಂದು ಕರೆಯುವುದು ಬೇಡ’ ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು