ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡುರಾಂಡ್‌ ಕಪ್‌: ಗೋಕುಲಂಗೆ ಜಯ

Published 9 ಆಗಸ್ಟ್ 2023, 16:01 IST
Last Updated 9 ಆಗಸ್ಟ್ 2023, 16:01 IST
ಅಕ್ಷರ ಗಾತ್ರ

ಕೊಕ್ರಜಾರ್: ಡೆಲ್ಲಿ ಎಫ್‌ಸಿ ತಂಡದವರು ಡುರಾಂಡ್‌ ಕಪ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ 1–1 ಗೋಲಿನಿಂದ ನೇಪಾಲದ ತ್ರಿಭುವನ್‌ ಆರ್ಮಿ ತಂಡದೊಂದಿಗೆ ಡ್ರಾ ಸಾಧಿಸಿದರು.

ಬುಧವಾರ ನಡೆದ ‘ಇ’ ಗುಂಪಿನ ಪಂದ್ಯದಲ್ಲಿ ದಿನೇಶ್ ಹೆಂಜಾನ್ 39ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ನೇಪಾಲ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಪಂದ್ಯದ ಕೊನೆಯ ಹಂತದಲ್ಲಿ ಡೆಲ್ಲಿ ತಂಡದ ಗಿರೀಶ್ ಖೋಸ್ಲಾ (88ನೇ ನಿಮಿಷ) ಅವರು ಚೆಂಡನ್ನು ಗುರಿ ಸೇರಿಸುವ ಮೂಲಕ ಸ್ಕೋರ್‌  ಸಮಬಲಗೊಳಿಸಿದರು.‌ ಹೀಗಾಗಿ, ಉಭಯ ತಂಡಗಳು ತಲಾ ಒಂದು ಪಾಯಿಂಟ್‌ ಗಳಿಸಿದವು.

ಕೋಲ್ಕತ್ತ: ಟೂರ್ನಿಯ ಮತ್ತೊಂದು ಪಂದ್ಯದಲ್ಲಿ ಗೋಕುಲಂ ಕೇರಳ ತಂಡವು 2–0ಯಿಂದ ಇಂಡಿಯನ್‌ ಏರ್‌ಫೋರ್ಸ್‌ ತಂಡವನ್ನು ಮಣಿಸಿತು.

‘ಸಿ’ ಗುಂಪಿನ ಪಂದ್ಯದಲ್ಲಿ ಸೌರವ್‌ 20ನೇ ನಿಮಿಷದಲ್ಲಿ ಮೊದಲ ಗೋಲು ಬಾರಿಸಿ ಕೇರಳ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ನಂತರ ಶ್ರೀಕುಟ್ಟನ್ ಅವರು ಚೆಂಡನ್ನು ಗುರಿ ಸೇರಿಸಿ, ಗೆಲುವಿನ ಅಂತವನ್ನು ಹೆಚ್ಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT