ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಫರಿ ಮೇಲೆ ಹಲ್ಲೆ: ಬಿಎಫ್‌ಸಿ ಆಟಗಾರರಿಗೆ ದಂಡ, ನಿಷೇಧದ ಬಿಸಿ

Last Updated 12 ಮಾರ್ಚ್ 2021, 20:15 IST
ಅಕ್ಷರ ಗಾತ್ರ

ಬೆಂಗಳೂರು: ರೆಫರಿ ಮೇಲೆ ಹಲ್ಲೆಗೆ ಮುಂದಾಗಿ ಕಚೇರಿಯ ಕಿಟಕಿ ಗಾಜನ್ನು ಪುಡಿ ಮಾಡಿದ ಬೆಂಗಳೂರು ಎಫ್‌ಸಿ ತಂಡಕ್ಕೆ ಜಿಲ್ಲಾ ಫುಟ್‌ಬಾಲ್ ಸಂಸ್ಥೆ (ಬಿಡಿಎಫ್‌ಎ) ಶಿಸ್ತು ಕ್ರಮದ ಬಿಸಿ ಮುಟ್ಟಿಸಿದೆ. ಕಳೆದ ಸೋಮವಾರ ನಡೆದ ಎಫ್‌ಸಿ ಬೆಂಗಳೂರು ಯುನೈಟೆಡ್ ಎದುರಿನ ಸೂಪರ್ ಡಿವಿಷನ್ ಪಂದ್ಯದ ಕೊನೆಯಲ್ಲಿ ಬಿಎಫ್‌ಸಿಯ ಕೆಲವು ಆಟಗಾರರು ಗಲಾಟೆ ಮಾಡಿದ್ದರು. ಅದಕ್ಕೆ ಸಂಬಂಧಿಸಿ ಶಕ್ರವಾರಬಿಡಿಎಫ್‌ಎ ಶಿಸ್ತುಕ್ರಮ ಪ್ರಕಟಿಸಿದೆ.

ಡಿಫೆಂಡರ್ ಹರಪ್ರೀತ್ ಸಿಂಗ್ ಮೇಲೆ ಮೂರು ತಿಂಗಳ ನಿಷೇಧ ಹೇರಿದ್ದು ₹ 5 ಸಾವಿರ ದಂಡ ವಿಧಿಸಲಾಗಿದೆ. ಜಗದೀಪ್‌ ಸಿಂಗ್‌ಗೆ ಆರು ತಿಂಗಳ ನಿಷೇಧ ಮತ್ತು ₹ 10 ಸಾವಿರ ದಂಡ ವಿಧಿಸಲಾಗಿದೆ. ಸಹಾಯಕ ಕೋಚ್ ರಾಜನ್ ಮಣಿ ಅವರ ಮೇಲೆಯೂ ಕ್ರಮಕ್ಕೆ ಮುಂದಾಗಿದ್ದು ಆರು ತಿಂಗಳ ನಿಷೇಧ ಮತ್ತು ₹ 15 ಸಾವಿರ ದಂಡ ವಿಧಿಸಲಾಗಿದೆ. ಸಹಾಯಕ ಮ್ಯಾನೇಜರ್‌ ಸತೀಶ್‌ ಕುಮಾರ್‌ಗೆ ಒಂದು ವರ್ಷ ನಿಷೇಧ ಮತ್ತು ₹ 50 ಸಾವಿರ ದಂಡ ವಿಧಿಸಲಾಗಿದ್ದು ಬಿಎಫ್‌ಸಿ ತಂಡಕ್ಕೆ ಎಚ್ಚರಿಕೆಯನ್ನೂ ನೀಡಲಾಗಿದೆ. ಇನ್ನು ಮುಂದೆ ಅಶಿಸ್ತಿನ ನಡವಳಿಕೆ ತೋರದೇ ಇರುವಂತೆ ಆಟಗಾರರಿಗೆ ಎಚ್ಚರಿಕೆ ನೀಡಬೇಕು ಎಂದು ಸೂಚಿಸಲಾಗಿದೆ.

ಘಟನೆ ನಡೆದ ಸಂದರ್ಭದಲ್ಲಿ ಅಂಗಣದಲ್ಲಿದ್ದ ರೆಫರಿ ನೀಡಿದ ವರದಿಯ ಆಧಾರದಲ್ಲಿ ಗಂಭೀರ ಚರ್ಚೆ ನಡೆಸಿ ಶಿಕ್ಷೆಯನ್ನು ಪ್ರಕಟಿಸಲಾಗಿದೆ. ಇದಕ್ಕೆ ಸಮಿತಿಯಲ್ಲಿ ಯಾರಿಂದಲೂ ವಿರೋಧ ವ್ಯಕ್ತವಾಗಲಿಲ್ಲ ಎಂದು ಬಿಡಿಎಫ್‌ಎ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT