ಭಾನುವಾರ, ಸೆಪ್ಟೆಂಬರ್ 27, 2020
26 °C

ಕ್ಯಾಮರೂನ್‌ ಜಯಭೇರಿ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಪ್ಯಾರಿಸ್‌: ಅಜಾರಾ ಎನ್‌ಕೌಟ್‌ ಅವರು ಪಂದ್ಯದ ಕೊನೆಯ ಹಂತದಲ್ಲಿ ಗಳಿಸಿದ ಗೋಲಿನ ನೆರವಿನಿಂದ ಕ್ಯಾಮರೂನ್‌ ತಂಡ ನ್ಯೂಜಿಲೆಂಡ್‌ ತಂಡವನ್ನು 2–1ರಿಂದ ಮಣಿಸಿ ಮಹಿಳಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯ ಪ್ರಿಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿತು.

ಹೆಚ್ಚುವರಿ ಐದು ನಿಮಿಷಗಳ ಅವಧಿ ಮುಗಿಯಲು 10 ಸೆಕೆಂಡುಗಳು ಉಳಿದಿರುವಂತೆ ಚೆಂಡು ಗೋಲು ಪೆಟ್ಟಿಗೆಗೆ ಸೇರಿಸಿದ ಎನ್‌ಕೌಟ್ ಅವರು ಕ್ಯಾಮರೂನ್‌ ಪಡೆಯಲ್ಲಿ ಹರ್ಷದ ಹೊನಲು ಹರಿಸಿದರು. ಕ್ಯಾಮರೂನ್‌ ತಂಡಕ್ಕೆ 57ನೇ ನಿಮಿಷದಲ್ಲೇ ಎನ್‌ಕೌಟ್‌ ಗೋಲು ಗಳಿಸಿ ಮುನ್ನಡೆ ತಂದುಕೊಟ್ಟಿದ್ದರು.

ನ್ಯೂಜೆಲೆಂಡ್‌ ಪರ ಔರೆಲ್ಲಾ ಅವೊನಾ 80ನೇ ನಿಮಿಷದಲ್ಲಿ ಗೋಲು ಗಳಿಸಿ ಸಮಬಲ ತಂದಿದ್ದರು. ಆದರೆ ಆ ತಂಡಕ್ಕೆ ಸೋಲು ತಪ್ಪಲಿಲ್ಲ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು