ಕೋಲ್ಕತ್ತ: ಪ್ರಶಸ್ತಿ ಉಳಿಸಿಕೊಳ್ಳುವ ಛಲದಲ್ಲಿರುವ ನಾರ್ತ್ಈಸ್ಟ್ ಯುನೈಟೆಡ್ ಎಫ್ಸಿ ತಂಡವು ಶನಿವಾರ ನಡೆಯಲಿರುವ 134ನೇ ಡುರಾಂಡ್ ಕಪ್ ಫುಟ್ಬಾಲ್ ಟೂರ್ನಿಯ ಫೈನಲ್ನಲ್ಲೂ ಪ್ರಾಬಲ್ಯ ಮುಂದುವರಿಸುವ ಗುರಿಯಲ್ಲಿದೆ. ಅದರ ಎದುರಾಳಿಯಾಗಿರುವ ಡೈಮಂಡ್ ಹಾರ್ಬರ್ ತಂಡವು ಪದಾರ್ಪಣೆ ಯತ್ನದಲ್ಲೇ ಪ್ರಶಸ್ತಿ ಗೆದ್ದ ಮೊದಲ ತಂಡವಾಗಿ ಇತಿಹಾಸ ನಿರ್ಮಿಸುವ ಬಯಕೆಯಲ್ಲಿದೆ.

ಇಲ್ಲಿನ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ ನಡೆಯುವ ಫೈನಲ್ನಲ್ಲಿ ನಾರ್ತ್ಈಸ್ಟ್ ತಂಡವು ಪ್ರಶಸ್ತಿಯ ನೆಚ್ಚಿನ ತಂಡವಾಗಿದೆ. ಆದರೆ, ಕಳೆದ 34 ವರ್ಷಗಳಲ್ಲಿ ಯಾವುದೇ ತಂಡವು ಪ್ರಶಸ್ತಿಯನ್ನು ಉಳಿಸಿಕೊಂಡಿಲ್ಲ. ಈಸ್ಟ್ ಬೆಂಗಾಲ್ ತಂಡವು 1989ರಿಂದ 1991ರವರೆಗೆ ಸತತ ಮೂರು ಬಾರಿ ಚಾಂಪಿಯನ್ ಆಗಿತ್ತು. ನಂತರ ಯಾವುದೇ ತಂಡ ಸತತ ಪ್ರಶಸ್ತಿ ಗೆದ್ದಿಲ್ಲ.

ಮೊದಲ ಬಾರಿ ಟೂರ್ನಿಯಲ್ಲಿ ಕಣಕ್ಕಿಳಿದ ಹಾರ್ಬರ್ ತಂಡವು ಬಲಿಷ್ಠ ತಂಡಗಳಿಗೆ ಆಘಾತ ನೀಡಿ ಆತ್ಮವಿಶ್ವಾಸದಲ್ಲಿದೆ. ತನ್ನ ಪದಾರ್ಪಣೆ ಆವೃತ್ತಿಯಲ್ಲೇ ಕಿರೀಟ ಮುಡಿಗೇರಿಸಿಕೊಳ್ಳುವ ಪ್ರಯತ್ನದಲ್ಲಿದೆ.

ಕಳೆದ ಆವೃತ್ತಿಯ ಫೈನಲ್ನಲ್ಲಿ ನಾರ್ತ್ಈಸ್ಟ್ 2–2 ಗೋಲುಗಳಿಂದ ಮೋಹನ್ ಬಾಗನ್ ತಂಡದೊಂದಿಗೆ ಡ್ರಾ ಸಾಧಿಸಿ, ಪೆನಾಲ್ಟಿ ಶೂಟೌಟ್ನಲ್ಲಿ 4–3ರಿಂದ ಗೆಲುವು ಸಾಧಿಸಿ, ಮೊದಲ ಬಾರಿ ಚಾಂಪಿಯನ್ ಆಗಿತ್ತು. ಈ ಬಾರಿ ಎಂಟರ ಘಟ್ಟದಲ್ಲಿ 4–0ಯಿಂದ ಬೋಡೋಲ್ಯಾಂಡ್ ಎಫ್ಸಿ ವಿರುದ್ಧ ಮತ್ತು ಸೆಮಿಫೈನಲ್ನಲ್ಲಿ 1–0ರಿಂದ ಶಿಲ್ಲಾಂಗ್ ಲಾಜೊಂಗ್ ಎಫ್ಸಿ ವಿರುದ್ಧ ಜಯ ಸಾಧಿಸಿ, ಟೂರ್ನಿಯಲ್ಲಿ ಅಜೇಯವಾಗಿ ಉಳಿದಿದೆ.

ಗುಂಪು ಹಂತದಲ್ಲಿ 17 ಬಾರಿಯ ಚಾಂಪಿಯನ್ ಮೋಹನ್ ಬಾಗನ್ ಸೂಪರ್ ಜೈಂಟ್ಸ್ ವಿರುದ್ಧ 1–5ರಿಂದ ಸೋಲು ಕಂಡಿದ್ದ ಹಾರ್ಬರ್ ತಂಡವು ನಂತರ ಅಮೋಘವಾಗಿ ಚೇತರಿಸಿಕೊಂಡಿತ್ತು. ಕ್ವಾರ್ಟರ್ ಫೈನಲ್ನಲ್ಲಿ 2–0ಯಿಂದ ಜೆಮ್ಶೆಡ್ಪುರ ಎಫ್ಸಿ ವಿರುದ್ಧ; ಸೆಮಿಫೈನಲ್ನಲ್ಲಿ 2–1ರಿಂದ 16 ಬಾರಿಯ ಚಾಂಪಿಯನ್ ಈಸ್ಟ್ ಬೆಂಗಾಲ್ ವಿರುದ್ಧ ಅಚ್ಚರಿಯ ಗೆಲುವು ಸಾಧಿಸಿತ್ತು.

ಪಂದ್ಯ ಆರಂಭ: ಸಂಜೆ 5.30

ಗೆದ್ದ ತಂಡಕ್ಕೆ ₹ 1.21 ಕೋಟಿ ಬಹುಮಾನ

137 ವರ್ಷಗಳ ಇತಿಹಾಸವನ್ನು ಹೊಂದಿರುವ ಏಷ್ಯಾದ ಅತ್ಯಂತ ಹಳೆಯ ಫುಟ್ಬಾಲ್ ಟೂರ್ನಿ ಇದಾಗಿದ್ದು ಈ ಬಾರಿ ಪ್ರಶಸ್ತಿ ಗೆಲ್ಲುವ ತಂಡವು ₹1.21 ಕೋಟಿ ಬಹುಮಾನ ಪಡೆಯಲಿದೆ ಎಂದು ಡುರಾಂಡ್ ಕಪ್ ಸಂಘಟನಾ ಸಮಿತಿ (ಡಿಸಿಒಸಿ) ಶುಕ್ರವಾರ ಘೋಷಿಸಿದೆ. ವರ್ಷದ ಆರಂಭದಲ್ಲಿ ಟೂರ್ನಿಯ ಬಹುಮಾನ ಮೊತ್ತವನ್ನು ಶೇ 250 ರಷ್ಟು ಹೆಚ್ಚಿಸುವುದಾಗಿ ಡಿಸಿಒಸಿ ಘೋಷಿಸಿತ್ತು. ಹಿಂದಿನ ಆವೃತ್ತಿಯಲ್ಲಿ ಒಟ್ಟು ಬಹುಮಾನ ಮೊತ್ತ ₹ 1.20 ಕೋಟಿ ಆಗಿದ್ದರೆ ಈ ಬಾರಿ ಅದನ್ನು ₹ 3 ಕೋಟಿಗೆ ಹೆಚ್ಚಿಸಲಾಗಿದೆ. ರನ್ನರ್ ಅಪ್ ತಂಡ ₹60 ಲಕ್ಷ ಸೆಮಿಫೈನಲ್ನಲ್ಲಿ ಸೋತ ತಂಡಗಳು ತಲಾ ₹25 ಲಕ್ಷ ಕ್ವಾರ್ಟರ್ ಫೈನಲ್ನಲ್ಲಿ ಸೋತ ತಂಡಗಳು ತಲಾ ₹15 ಲಕ್ಷ ಬಹುಮಾನ ಪಡೆಯಲಿವೆ. ಜುಲೈ 23ರಂದು ಆರಂಭವಾದ ಟೂರ್ನಿಯಲ್ಲಿ ಒಟ್ಟು 24 ತಂಡಗಳು ಸ್ಪರ್ಧಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.